ಕೀಟ, ಪಕ್ಷಿ, ಪ್ರಾಣಿ, ಗಣ್ಯವ್ಯಕ್ತಿಗಳು, ತರಕಾರಿ, ಏಳೆಂಟು ರಾಷ್ಟ್ರಗಳ ಚಿಹ್ನೆ ಹಾಗೂ ದೇಹದ ಅಂಗಾಗಗಳ ಪಟಪಟನೇ ಗುರುತಿಸುವ ಶ್ರೇಷ್ಠಾ ಗದುಗಿನ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಹೆಸರು ಮಾಡಿದ್ದಾಳೆ.
ವರದಿ: ದೊಡ್ಡೇಶ್ ಯಲಿಗಾರ್ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಪ್ಪಳ (ಡಿ.29): ಕೀಟ, ಪಕ್ಷಿ, ಪ್ರಾಣಿ, ಗಣ್ಯವ್ಯಕ್ತಿಗಳು, ತರಕಾರಿ, ಏಳೆಂಟು ರಾಷ್ಟ್ರಗಳ ಚಿಹ್ನೆ ಹಾಗೂ ದೇಹದ ಅಂಗಾಗಗಳ ಪಟಪಟನೇ ಗುರುತಿಸುವ ಶ್ರೇಷ್ಠಾ ಗದುಗಿನ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಹೆಸರು ಮಾಡಿದ್ದಾಳೆ. ಯಲಬುರ್ಗಾ ತಾಲೂಕಿನ ಸೋಂಪುರ-ಹೊಸೂರು ಗ್ರಾಮದ ಸಹಾಯಕ ಕೃಷಿ ಅಧಿಕಾರಿ ಬಸವರಾಜ ಗದುಗಿನ ಮತ್ತು ಮೇಘಾ ಗದುಗಿನ ದಂಪತಿಗಳ ಒಂದು ವರ್ಷ ಒಂಬತ್ತು ತಿಂಗಳಿನ ಪುತ್ರಿ ಶ್ರೇಷ್ಠಾ ಬಸವರಾಜ ಗದುಗಿನ ಇದೀಗ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಹೆಸರು ಮಾಡಿದ್ದಾಳೆ. ಶ್ರೇಷ್ಠಾ ತನ್ನ ಚಿಕ್ಕವಯಸ್ಸಿನಲ್ಲಿಯೇ ಜ್ಞಾಪಕ ಹಾಗೂ ಬುದ್ಧಿಶಕ್ತಿಯಿಂದ ಅಭೂತ ಪೂರ್ವ ಸಾಧನೆ ಮಾಡುವ ಮೂಲಕ ಇಂಡಿಯನ್ ಬುಕ್ ಆಫ್ ರೆಕಾರ್ಡ್ನಲ್ಲಿ ಹೆಸರು ದಾಖಲಿಸಿ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ. ಬಸವರಾಜ ಗದುಗಿನ ಯಲಬುರ್ಗಾದ ಕೃಷಿ ಇಲಾಖೆ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ವಸ್ತುಗಳ ಹೆಸರು ಗುರುತಿಸುವ ಶ್ರೇಷ್ಠಾ: ಶ್ರೇಷ್ಠಾ ತನ್ನ ಸ್ಮರಣ ಶಕ್ತಿಯಿಂದ 17 ವಾಹನಗಳು, 18 ಗಣ್ಯವ್ತಕ್ತಿಗಳು, 11 ಆಹಾರ ಪದಾರ್ಥಗಳು, 22 ಹಣ್ಣುಗಳು, 23 ತರಕಾರಿಗಳು, 28 ಪ್ರಾಣಿಗಳು, 20 ದೇಹದ ಅಂಗಾಗಗಳು, 8 ರಾಷ್ಟ್ರೀಯ ಚಿಹ್ನೆಗಳು, 13ಕೀಟಗಳು, 20 ಪಕ್ಷಿಗಳು, 14 ದಿನಬಳಕೆ ವಸ್ತುಗಳು ಹಾಗೂ ಕೆಲವು ಪ್ರಾಣಿ, ಪಕ್ಷಿಗಳ ಧ್ವನಿ ಅನುಕರಣೆ ಮಾಡುತ್ತಾಳೆ.
ಗವಿಶ್ರೀಗಳಿಂದ ಆಶೀರ್ವಾದ: ಚಿಕ್ಕ ವಯಸ್ಸಿನಲ್ಲಿ ಸಾಧನೆ ಮಾಡಿದ ಪುಟ್ಟ ಮಗುವಿನ ಪ್ರತಿಭೆ ಹೆತ್ತವರು ಮತ್ತು ಸಂಬಂಧಿಕರಿಗೆ ಸಂತಸ ಉಂಟುಮಾಡಿದೆ. ಹಲವಾರು ವಸ್ತುಗಳನ್ನು ಗುರುತಿಸುವಲ್ಲಿ ನಿಪುಣತೆ ಹೊಂದಿರುವ ಈ ಬಾಲ ಪ್ರತಿಭೆಗೆ ಐಬಿಒಆರ್‌ನಿಂದ ಪ್ರಶಸ್ತಿ ಪತ್ರ, ಮೆಡಲ್, ಐಡಿಕಾರ್ಡ್, ಬುಕ್ ಹಾಗೂ ಬ್ಯಾಡ್ಜ್ ಜತೆಗೆ ವಿಶೇಷ ಪೆನ್ನು ನೀಡಲಾಗಿದೆ. ಶ್ರೇಷ್ಠಾಳಿಗೆ ಕೊಪ್ಪಳದ ಅಭಿನವ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ ಆಶೀರ್ವದಿಸಿದ್ದಾರೆ.
Say No Drug: ಇಂಡಿಯಾ ಬುಕ್ ಆಫ್ ರೆಕಾರ್ಡ್ ಪುನೀತ್‌ಗೆ ಅರ್ಪಿಸಿದ ಧಾರವಾಡದ ಅಧಿಕಾರಿ
ಪಾಲಕರ ಬೆಂಬಲದಿಂದ ಸಾಧನೆ: ಸಾಧನೆಗೆ ವಯಸ್ಸಿನ ಮಿತಿಯಿಲ್ಲ ಎನ್ನುವ ಹಾಗೆ ಪುತ್ರಿ ಶ್ರೇಷ್ಠಾಳದ ಸಾಧನೆಗೆ ತಾಯಿ ಮೇಘಾ ಗದುಗಿನ, ಚಿಕ್ಕಂಪಂದಿರಾದ ಕಳಕನಗೌಡ ಪಾಟೀಲ್, ಮಂಜು ಮೇಟಿ ಪ್ರೋತ್ಸಾಹ ಸಾಕಷ್ಟಿದೆ. ಅವಳ ಆಟ ಪಾಠದಲ್ಲಿ ಗ್ರಹಿಸಲು ಹಾಗೂ ತಿಳಿಸಲು, ಮರುಗುರುತಿಸುವ ನೆರವಾಗಿದ್ದಾರೆ. ಅದನ್ನು ಮೊಬೈಲ್‌ನಲ್ಲಿ ಸೆರೆಹಿಡಿದು ಅವಳ ಸಾಧನೆಗೆ ಬೆನ್ನುತಟ್ಟಿದ್ದಾರೆ.
ಉಡುಪಿಯ ಅಕ್ಷಿತಾ ಹೆಗ್ಡೆ ಕನ್ನಡಿ ಕೈ ಬರಹ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರ್ಪಡೆ
ಇನ್ನು ಶ್ರೇಷ್ಠಾ ಚಿಕ್ಕವಯಸ್ಸಿನಲ್ಲಿ ಪ್ರತಿಭೆ ಹೊರಹೊಮ್ಮಿರುವುದು ಕುಟುಂಬಸ್ಥರಿಗೆ ಖುಷಿ ತಂದಿದೆ. ಇದರ ಜೊತೆಗೆ ಇಡೀ ಜಿಲ್ಲೆಯ ಜನತೆಗೂ ಸಹ ಖುಷಿ ತಂದಿದೆ.