ಉಡುಪಿಯಲ್ಲಿ ಕ್ರೈಸ್ತ ಯುವತಿಯನ್ನು ಮುಸ್ಲಿಂ ಯುವಕ ಕಿಡ್ನಾಪ್ ಮಾಡಿರುವ ಆರೋಪ ಕೇಳಿಬಂದಿದೆ. ಯುವತಿಯ ಪೋಷಕರು ಉಡುಪಿಯ ಕರಂಬಳ್ಳಿಯ ಮೊಹಮ್ಮದ್ ಅಕ್ರಂ ಎಂಬಾತನ ವಿರುದ್ಧ ಕಿಡ್ನಾಪ್ ದೂರು ದಾಖಲಿಸಿದ್ದಾರೆ.
ಉಡುಪಿ(ಮಾ.29): ಹೀಗೊಂದು ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದಿದೆ. ಕ್ರೈಸ್ತ ಯುವತಿಯನ್ನು ಮುಸ್ಲಿಂ ಯುವಕ ಕಿಡ್ನಾಪ್ ಮಾಡಿರೋದಾಗಿ ಆರೋಪ ಮಾಡಲಾಗುತ್ತಿದೆ. ಪುತ್ರಿಯನ್ನು ಕಿಡ್ನಾಪ್ ಮಾಡಿದ್ದಾನೆ ಎಂದು ಪೋಷಕರ ಆರೋಪ ಮಾಡಿದ್ದಾರೆ. ದಕ್ಷಿಣ ಕನ್ನಡದ ಜಿಲ್ಲೆ ಮೂಡುಬಿದಿರೆಯ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿಯಾಗಿರುವ ಉಡುಪಿಯ ಕೊಡವೂರಿನ ಜೀನಾ ಮರಿಲ್ ನಾಪತ್ತೆಯಾಗಿದ್ದಾಳೆ. ಈ ಹಿನ್ನೆಲೆಯಲ್ಲಿ ಮಗಳ ಅಪಹರಣವಾಗಿದೆ ಎಂದು ಉಡುಪಿಯ ಕರಂಬಳ್ಳಿಯ ಮೊಹಮ್ಮದ್ ಅಕ್ರಂ ಮೇಲೆ ಠಾಣೆಯಲ್ಲಿ ಕಿಡ್ನಾಪ್ ದೂರು ದಾಖಲು ಮಾಡಲಾಗಿದೆ.
ಜೀನಾ ಮತ್ತು ಅಕ್ರಂ ರಿಜಿಸ್ಟರ್ ಮ್ಯಾರೇಜ್ ಗೆ ಮುಂದಾಗಿದ್ದರು. ಪ್ರೇಮ ವಿವಾಹ ಆಗುವುದಾಗಿ ಪೊಲೀಸರ ರಕ್ಷಣೆ ಕೋರಿರುವ ಜೋಡಿ ಡಿವೈಎಸ್ಪಿ ವೈ. ಪ್ರಭು ಜೊತೆಯಲ್ಲಿ ಹೈಕೋರ್ಟಿಗೆ ಹಾಜರಾಗಿದ್ದರು. ಅವಧಿ ಮುಗಿದ ಕಾರಣ ಹೈಕೋರ್ಟ್ ವಿಚಾರಣೆ ಮುಂದೂಡಿತ್ತು. ಇದರಿಂದ ನೊಂದ ಪೋಷಕರು ಹೈಕೋರ್ಟ್ ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.
ಗೋಬಿ ಮಹೇಶ್‌ನ ವಿವಾದಾತ್ಮಕ ಕೃತ್ಯ: ಹಿಂದೂ ಹುಡುಗಿ ಮುಸ್ಲಿಂ ಯುವಕನೊಂದಿಗಿನ ಮದುವೆಗೆ ಹಿಂದೂ ಸಂಘಟನೆಗಳ ತೀವ್ರ ಆಕ್ಷೇಪ
ಯುವಕನಿಂದ ಮಗಳ ಕಿಡ್ನಾಪ್
ನಮ್ಮ ಮಗಳು ಜೀನಾಳನ್ನು ಅಕ್ರಮ್ ಕಿಡ್ನಾಪ್ ಮಾಡಿದ್ದಾನೆ ಎಂದು ತಂದೆ ತಾಯಿಯಾದ ಮೇರುಸ್ ಪುಷ್ಪಲತಾ ಮತ್ತು ಗೋಡ್ವಿನ್ ಅಳಲು ತೋಡಿಕೊಂಡಿದ್ದಾರೆ. ಅಪ್ರಾಪ್ತೆಯಾಗಿದ್ದಾಗಲೇ ನಮ್ಮ ಮಗಳಿಗೆ ಅಕ್ರಂ ಕಿರುಕುಳ ನೀಡಿದ್ದ ಐದು ವರ್ಷದ ಹಿಂದೆ ಪೋಕ್ಸೋ ಕೇಸು ದಾಖಲು ಮಾಡಿದ್ದೆವು. ಲೈಂಗಿಕ ಕಿರುಕುಳ ನೀಡಿಲ್ಲ ಎಂಬ ಕಾರಣಕ್ಕೆ ಕೇಸು ವಜಾ ಗೊಂಡಿತ್ತು. ಸೇಡು ತೀರಿಸಲು ಅಪಹರಿಸಿದ್ದಾನೆ. ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾಗಿ ಐದು ವರ್ಷದಿಂದ ನಿರಂತರ ಸಂಪರ್ಕ ಇಟ್ಟುಕೊಂಡಿದ್ದ. ಮಗಳನ್ನು ಪುಸಲಾಯಿಸಿ ಅಶ್ಲೀಲ ಫೋಟೋ ವಿಡಿಯೋ ತೆಗೆದಿದ್ದಾನೆ ಎಂದು ಆರೋಪಿಸಿದ್ದಾರೆ.
ಅಶ್ಲೀಲ ಫೋಟೋ ಹರಿಬಿಡುವುದಾಗಿ ಧಮ್ಕಿ!
ಇದರ ಜೊತೆಗೆ ಅಶ್ಲೀಲ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಪೋಷಕರಿಗೆ ಧಮ್ಕಿ ಹಾಕಿದ್ದಾನಂತೆ. ಒಮ್ಮೆ ನಮ್ಮ ಮಗಳನ್ನು ತಂದು ನಮ್ಮ ಮುಂದೆ ನಿಲ್ಲಿಸಿ. ಆರೋಪಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾನೆ ಆತನನ್ನು ಕೊಡಲೇ ಬಂಧಿಸಿ. ಮೊಹಮ್ಮದ್ ಅಕ್ರಂ ಗರುಡ ಗ್ಯಾಂಗ್ ನ ಸದಸ್ಯ ಎಂಬ ಮಾಹಿತಿ ಇದೆ.
ಪೊಲೀಸರ ಬಳಿ ಹೋದರೆ ಇಬ್ಬರೂ ವಯಸ್ಕರು, ಕ್ರಮ ಕೈಗೊಳ್ಳು ಸಾಧ್ಯವಿಲ್ಲ ಎನ್ನುತ್ತಾರೆ. ಇಬ್ಬರು ಜೊತೆಗೆ ಸೇಫ್ ಆಗಿದ್ದಾರೆ ಎಂದು ವಿಡಿಯೋ ತೋರಿಸಿ ಪೊಲೀಸರು ನಮ್ಮನ್ನು ವಾಪಸ್ ಕಳುಹಿಸುತ್ತಾರೆ. ಉಡುಪಿ ಎಸ್‌ಪಿ ಡಾ. ಅರುಣ್ ಕುಮಾರ್ ಯಾವ ಕ್ರಮ ತೆಗೆದುಕೊಂಡಿಲ್ಲ. ಅಕ್ರಂ ಡ್ರಗ್ಸ್ ವ್ಯಸನಿ ಆತನಿಗೆ ಯಾವುದೇ ಉದ್ಯೋಗವಿಲ್ಲ ನಾವು ಮಗಳನ್ನು ಕಳುಹಿಸುವುದಿಲ್ಲ. ಮುಸ್ಲಿಮರು ಎಲ್ಲರೂ ಕೆಟ್ಟವರೆಂದು ಹೇಳುವುದಿಲ್ಲ. ಹಬ್ಬದ ಸಂದರ್ಭದಲ್ಲಿ ಹೀಗೆ ಮಾಡಬಹುದಾ? ಸಭ್ಯ ಹುಡುಗನಾಗಿದ್ದರೆ ನಮ್ಮದು ಯಾವುದೇ ತಕರಾರು ಇರಲಿಲ್ಲ. ಕಳೆದ ಐದು ವರ್ಷಗಳಿಂದ ಮಗಳಿಗೆ ನಿರಂತರವಾಗಿ ಕಿರುಕುಳ ನೀಡಿದ್ದಾನೆ. ಯಾರೂ ಗೆಳೆಯರ ಜೊತೆ ಬೆರೆಯದಂತೆ ಮೊಹಮ್ಮದ್ ಅಕ್ರಂ ಒತ್ತಡ ಹೇರುತ್ತಿದ್ದ ಎಂದು ಆರೋಪಿಸಿದ್ದಾರೆ.
‘ಗುಡ್ ಗರ್ಲ್ ಸಿಂಡ್ರೋಮ್’ನಿಂದ ಸ್ತ್ರೀಯರು ಹೊರಬನ್ನಿ: ಖ್ಯಾತ ಲೇಖಕಿ ಬಾನು ಮುಷ್ತಾಕ್
ಉಡುಪಿಯಲ್ಲಿ ಗರುಡಗ್ಯಾಂಗ್ ಕ್ರಿಮಿನಲ್ ಜಾಲ
ಲವ್ ಜಿಹಾದ್ ಆರೋಪ ಮಾಡಿರುವ ಹುಡುಗಿ ಪೋಷಕರು ಗರುಡ ಗ್ಯಾಂಗ್ ಸದಸ್ಯನಿಂದ ಲವ್ ಜಿಹಾದ್ ಯತ್ನ ಎಂದು ಹೇಳಿರುವುದು ಮತ್ತೆ ಉಡುಪಿಯಲ್ಲಿ ಗರುಡಗ್ಯಾಂಗ್ ಕ್ರಿಮಿನಲ್ ಜಾಲ ಸದ್ದು ಮಾಡಿದೆ. ಯುವತಿಯನ್ನ ಪುಸಲಾಯಿಸಿ ಲವ್ ಜಿಹಾದ್ ಯತ್ನ ಮಾಡಲಾಗಿದೆ. ಕೃತ್ಯಕ್ಕೆ ಆರೋಪಿ ಯುವಕ ಸಮುದಾಯದ ಕೆಲವರ ಸಾಥ್ ನೀಡಿದ್ದಾರೆಂದು ಪೋಷಕರು ಸ್ಪೋಟಕ ಹೇಳಿಕೆ ನೀಡಿದ್ದಾರೆ. ವ್ಯವಸ್ಥಿತ ಲವ್ ಜಿಹಾದ್ ಗೆ ಯುವತಿಯನ್ನ ಬಳಸುತ್ತಿರುವ ಹುನ್ನಾರ ಎಂದು ಆರೋಪಿಸಿದ್ದಾರೆ.
ಪೊಲೀಸರ ನಿರ್ಲಕ್ಷ್ಯವೆಂದು ಆರೋಪ
ಕೇಸ್ ಹಿಂಪಡೆದರೆ ಯುವತಿಯ ಜೊತೆ ಮಾತನಾಡಿಸುತ್ತೇವೆ ಎಂದು ಸಮುದಾಯದ ವ್ಯಕ್ತಿಗಳು ಮನೆಗೆ ಬಂದಿದ್ದರು. ಮಗಳನ್ನ ಈಗಲೇ ಮಾತನಾಡಿಸಿ ಎಂದಾಗ ಆಕೆ ಎಲ್ಲಿದ್ದಾಳೆ ಗೊತ್ತಿಲ್ಲ ಎಂದಿದ್ದಾರೆ ಆರೋಪಿ ಯುವಕನ ಕಡೆಯವರು ನನ್ನ ಮಗಳನ್ನ ಬಚ್ಚಿಟ್ಟಿದ್ದಾರೆ. ವ್ಯವಸ್ಥಿತ ಲವ್ ಜಿಹಾದ್ ಶಂಕೆ ಇದೆ. ಆತ ಗರುಡ ಗ್ಯಾಂಗ್ ನಲ್ಲಿದ್ದ ಡ್ರಗ್ಸ್ , ರಾಬರಿಯಲ್ಲೂ ಈತನ ಪಾಲಿದೆ. ಈ ಬಗ್ಗೆ ನಮಗೆ ಖಚಿತ ಮಾಹಿತಿ ಇದೆ. ನನ್ನ ಮಗಳನ್ನ ಕೆಟ್ಟ ಕೆಲಸಕ್ಕೆ ಬಳಸುವ ಆತಂಕ ಇದೆ. ಪೊಲೀಸರು ಇಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ. ಪೊಲೀಸರು ಆಕೆ ಸುರಕ್ಷಿತ ಆಗಿದ್ದಾಳೆ ಎನ್ನುತ್ತಾರೆ. ಹೊರತು ಆಕೆಯ ಜೊತೆ ಮಾತನಾಡಿಸುತ್ತಿಲ್ಲ. ಪೋಕ್ಸೋ ಪ್ರಕರಣ ಇದ್ದ ಯುವಕನ ಜೊತೆ ಪೊಲೀಸರು ನಮ್ಮ ಮಗಳನ್ನ ಕಳುಹಿಸಲು ಮುಂದಾಗಿದ್ದಾರೆ. ಆರೋಪಿ ಅಕ್ರಂನನ್ನ ಬಂಧಿಸಿ ನಮ್ಮ ಮಗಳನ್ನ ಸ್ಟೇಟ್ ಹೋಮ್ ಗೆ ಸೇರಿಸಬೇಕು. ಎಂದು ಮಾಧ್ಯಮದ ಮೂಲಕ ಯುವತಿಯ ತಾಯಿ ಪುಷ್ಪಲತಾ, ತಂದೆ ಗಾಡ್ವಿನ್ ಮನವಿ ಮಾಡಿದ್ದಾರೆ.