ಪ್ರಾಣ ಹೋದ್ರೂ ಮೊಬೈಲ್ ಬಿಡೊಲ್ಲ ಎಂದ ಬಾಲಕಿ; ಅಮ್ಮ ಮೊಬೈಲ್ ಕಿತ್ತುಕೊಂಡಳು, ಮಗಳು ಪ್ರಾಣಬಿಟ್ಟಳು!

Published : Mar 27, 2025, 11:33 AM ISTUpdated : Mar 27, 2025, 12:06 PM IST
ಪ್ರಾಣ ಹೋದ್ರೂ ಮೊಬೈಲ್ ಬಿಡೊಲ್ಲ ಎಂದ ಬಾಲಕಿ; ಅಮ್ಮ ಮೊಬೈಲ್ ಕಿತ್ತುಕೊಂಡಳು, ಮಗಳು ಪ್ರಾಣಬಿಟ್ಟಳು!

ಸಾರಾಂಶ

ಬೀದರ್‌ನ ಡಿಗ್ಗಿ ಗ್ರಾಮದಲ್ಲಿ ಮೊಬೈಲ್ ಬಳಸದಂತೆ ತಾಯಿ ಹೇಳಿದ್ದಕ್ಕೆ 9ನೇ ತರಗತಿ ವಿದ್ಯಾರ್ಥಿನಿ ಸೋನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ರಜೆಯಲ್ಲಿ ಮಕ್ಕಳನ್ನು ಜಾಗರೂಕತೆಯಿಂದ ನೋಡಿಕೊಳ್ಳಿ, ಮೊಬೈಲ್‌ನಿಂದ ದೂರವಿಡಿ. ಏಕಾಏಕಿ ಮೊಬೈಲ್ ಕಿತ್ತುಕೊಳ್ಳುವುದು ಅಪಾಯಕಾರಿ. ಹೊರಾಂಗಣ ಆಟಗಳಿಗೆ ಪ್ರೋತ್ಸಾಹಿಸಿ. ಕಮಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (50 ಪದಗಳು)

ಬೀದರ್ (ಮಾ.27): ಇತ್ತೀಚಿನ ದಿನಗಳಲ್ಲಿ ಮಕ್ಕಳು ಮೊಬೈಲ್‌ಗೆ ತುಂಬಾ ಅಡಿಕ್ಟ್ ಆಗಿದ್ದಾರೆ. ಕೆಲವು ಮಕ್ಕಳು ಮೊಬೈಲ್ ಇಲ್ಲದಿದ್ದರೆ ಮನೆಯವರನ್ನೆಲ್ಲಾ ಹೆದರಿಸುವ ಮಟ್ಟದಿಗೆ ರಚ್ಚೆ ಹಿಡಿಯುತ್ತಾರೆ. ಆದರೆ, ಇಲ್ಲೊಬ್ಬ 9ನೇ ತರಗತಿ ಬಾಲಕಿಗೆ ಮೊಬೈಲ್ ಮುಟ್ಟಬೇಡ ಎಂದು ತಾಯಿ ಹೇಳಿದ್ದಕ್ಕೆ ಸಾವಿಗೆ ಶರಣಾಗಿದ್ದಾಳೆ.

ಇದೀಗ ಶಾಲೆ, ಕಾಲೇಜುಗಳಿಗೆ ರಜೆ ಇರಲಿದ್ದು, ಮಕ್ಕಳನ್ನು ಮನೆಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಜಾಗರೂಕತರೆಯಿಂದ ನೋಡಿಕೊಳ್ಳಬೇಕು. ಮಕ್ಕಳು ಈಜುವುದಕ್ಕೆ ಹಾಗೂ ಆಟವಾಡಲು ಹೋದಾಗ ಪ್ರಾಣಾಪಾಯ ಆಗುವಂತಹ ಸ್ಥಳದಿಂದ ದೂರವಿರಲು ಹೇಳಬೇಕು. ಜೊತೆಗೆ, ಮೊಬೈಲ್‌ಗೆ ಅಡಿಕ್ಟ್ ಆಗಿರುವ ಮಕ್ಕಳಿಗೆ ಹೊರಾಂಗಣ ಮತ್ತು ಒಳಾಂಗಣ ಆಟಗಳನ್ನು ಆಡಲು ಪ್ರೋತ್ಸಾಹಿಸಬೇಕು. ಅದನ್ನು ಬಿಟ್ಟು ಏಕಾಏಕಿ ಮಕ್ಕಳಿಂದ ಮೊಬೈಲ್ ಕಿತ್ತುಕೊಂಡು ದಂಡಿಸಲು ಹೋದರೆ ಕೆಲವು ಸೂಕ್ಷ್ಮ ಸ್ವಭಾವದ ಮಕ್ಕಳು ಜೀವಕ್ಕೆ ಹಾನಿ ಮಾಡಿಕೊಳ್ಳುತ್ತಾರೆ. ಇಂತಹದೇ ಘಟನೆ ಇದೀಗ ಬೀದರ್‌ನಲ್ಲಿ ನಡೆದಿದೆ.

ಇದನ್ನೂ ಓದಿ: ಕುಕ್ಕೆ ಸುಬ್ರಹ್ಮಣ್ಯ ಆಡಳಿತ ಮಂಡಳಿ ವಿವಾದ, ಮಲೆಕುಡಿಯರನ್ನು ಕಡೆಗಣಿಸಿ ರೌಡಿಶೀಟರ್‌ಗೆ ಸ್ಥಾನ ಕೊಟ್ಟ ಸರ್ಕಾರ!

ಮನೆಯಲ್ಲಿ ಅತಿಯಾಗಿ ಮೊಬೈಲ್ ಬಳಕೆ ಮಾಡುತ್ತಿದ್ದ ಮಗಳಿಗೆ ಏಕಾಏಕಿ ಅಮ್ಮ ಮೊಬೈಲ್ ಮುಟ್ಟಬೇಡ ಎಂದು ಬೈದು, ಮೊಬೈಲ್ ಕಿತ್ತುಕೊಂಡಿದ್ದಾರೆ. ಇದರಿಂದ ಮನನೊಂದ ಬಾಲಕಿ ಸೋನಿ ಸಂತೋಷ ಬನವಾಸೆ (15) ಮನೆಯ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಘಟನೆ ಬೀದರ್ ಜಿಲ್ಲೆ ಕಮಲನಗರ ತಾಲೂಕಿನ ಡಿಗ್ಗಿ ಎಂಬ ಗ್ರಾಮದಲ್ಲಿ ನಡೆದಿದೆ. ಇನ್ನು ಘಟನೆ ನಂತರ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳ ಪರಿಶೀಲನೆ ಮಾಡಿದ್ದಾನೆ. ಈ ಘಟನೆಗೆ ಸಂಬಂಧಿಸಿದಂತೆ ಕಮಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.

PREV
Read more Articles on
click me!

Recommended Stories

ಗೃಹ ಲಕ್ಷ್ಮೀ ಅಡಿ 1.24 ಕೋಟಿ ಸ್ತ್ರೀಯರಿಗೆ ₹1.54 ಕೋಟಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಂಗಳೂರು : ಹೊಸ ಮಾರ್ಗಗಳಿಗೆ ಬರಲಿವೆ ಚಾಲಕ ರಹಿತ ರೈಲು