ಉಡುಪಿ ಜಿಲ್ಲೆ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 169ಕ್ಕೆ ಭೂಮಿಯನ್ನು ನೀಡಿದ ರೈತರು ಪರಿಹಾರಕ್ಕಾಗಿ ಪರದಾಡುತ್ತಿದ್ದಾರೆ. ಹೈಕೋರ್ಟ್ ಸೂಚನೆಯನ್ನೂ ಹೆದ್ದಾರಿ ಪ್ರಾಧಿಕಾರ ಪಾಲಿಸುತ್ತಿಲ್ಲ.
ಉಡುಪಿ (ಜೂ.13): ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 169ರ ಸಾಣೂರಿನಿಂದ ಮಂಗಳೂರಿನ ಕುಲಶೇಖರ ತನಕ ಹೆದ್ದಾರಿಯ ಅಭಿವೃದ್ಧಿ ಕಾಮಗಾರಿ ಕುಂಟುತ್ತ ಸಾಗುತ್ತಿದೆ. ಇದಕ್ಕೆ ಕಾರಣಗಳು ಒಂದೆರಡಲ್ಲ. ಪ್ರಾರಂಭದಿಂದಲೇ ಪರಿಹಾರ ನೀಡಲು ಹಿಂದೇಟು ಹಾಕುತ್ತಿರುವ ಹೆದ್ದಾರಿ ಇಲಾಖೆಗೆ, ಈಗ ಹೈಕೋರ್ಟ್ ಪರಿಷ್ಕೃತ ದರವನ್ನು ಭೂ ಮಾಲೀಕರಿಗೆ ನೀಡುವಂತೆ ತಿಳಿಸಿದ್ದರೂ ಸಹ ಪರಿಹಾರ ನೀಡುತ್ತಿಲ್ಲ. ಪ್ರತಿಬಾರಿ ಒಂದಲ್ಲಾ ಒಂದು ರೀತಿಯ ಕುಂಟು ನೆಪ ತೋರಿಸುತ್ತಿದೆ ಎಂದು ರಾಷ್ಟ್ರೀಯ ಹೆದ್ದಾರಿ 169 ಭೂಸಂತ್ರಸ್ತರ ಹೋರಾಟ ಸಮಿತಿ ಆರೋಪಿಸಿದೆ.
ಪರಿಹಾರ ನೀಡಲು ಪರಿಷ್ಕೃತ ಪಟ್ಟಿಯನ್ನು ಅನುಮೋದನೆಗಾಗಿ ದೆಹಲಿಗೆ ಕಳಿಸಲಾಗಿದೆ ಎಂದು ಸ್ಥಳೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳು ಹೇಳುತ್ತಿದ್ದಾರೆ. 2020 ರಲ್ಲಿ ತಯಾರಿಸಿದ ಅಂದಾಜು ಪಟ್ಟಿ ಕೇವಲ ರೂ.485 ಕೋಟಿಯದ್ದಾಗಿತ್ತು. ಈಗ ಕೋರ್ಟು ನಿರ್ದೇಶನದಂತೆ ಪರಿಹಾರ ನೀಡುವುದಾದರೆ ತಮಗೆ ಸುಮಾರು ರೂ.1216/- ಕೋಟಿ ಬೇಕಾಗುತ್ತದೆ. ಈ ಬಗ್ಗೆ ಪರಿಷ್ಕೃತ ಪಟ್ಟಿ ತಯಾರಿಸಲಾಗಿದೆ. ಸಾಣೂರು ಪಡುಮಾರ್ನಾಡು ಮತ್ತು ಪುತ್ತಿಗೆ ಗ್ರಾಮಗಳ ಪರಿಹಾರವನ್ನು ನೀಡುವಂತೆ ಉಚ್ಚ ನ್ಯಾಯಾಲಯ ತೀರ್ಪು ನೀಡಿ ಸುಮಾರು ಮೂರು ತಿಂಗಳು ಈಗಾಗಲೇ ಕಳೆದು ಹೋಗಿದೆ. ಇಲಾಖೆಯಲ್ಲಿ ವಿಚಾರಿಸಿದರೆ ಕೇಂದ್ರದಿಂದ ಹಣ ಬಂದಿರುವುದಿಲ್ಲ ಎಂದು ತಿಳಿಸುತ್ತಿದ್ದಾರೆ ಎಂದು ಸಮಿತಿ ಹೇಳಿದೆ.
undefined
ಹೊಂದಾಣಿಕೆ ರಾಜಕೀಯ ಬಿಜೆಪಿಯಲ್ಲಿಯೂ ಇದೆ : ಸಂಸದರ ಟೀಕೆ ಒಪ್ಪಿಕೊಂಡ ಸಿ.ಟಿ. ರವಿ
ಪರಿಹಾರ ಕೊಡದೇ ಭರವಸೆ ಮಾತ್ರ ಕೊಡ್ತಾರೆ: ಇನ್ನುಳಿದಂತೆ ತೆಂಕ ಮಿಜಾರು, ತೆಂಕ ಎಡಪದವು, ಬಡಗ ಎಡಪದವು, ತೆಂಕ ಉಳಿಪಾಡಿ, ತಿರುವೈಲು ಮತ್ತು ಕುಡುಪು ಗ್ರಾಮಗಳ ಭೂ ಮಾಲೀಕರಿಗೆ ಕೂಡ ಪರಿಹಾರವನ್ನು ಪರಿಷ್ಕರಿಸಿ ಕೊಡಬೇಕೆಂದು ಮಾನ್ಯ ಜಿಲ್ಲಾಧಿಕಾರಿಯವರು ತೀರ್ಪನ್ನು ನೀಡಿ ಈಗಾಗಲೇ ಒಂದು ತಿಂಗಳು ಕಳೆದಿದೆ. ಪರಿಹಾರ ನೀಡಲು ನಮ್ಮಲ್ಲಿ ಯಾವುದೇ ಹಣದ ಕೊರತೆ ಇಲ್ಲ ಎಂದು ಹೇಳುತ್ತಿರುವ ಅಧಿಕಾರಿಗಳಾಗಲಿ ರಾಜಕಾರಣಿಗಳಾಗಲಿ ಈಗ ಯಾಕೆ ಮಾತಾಡುತ್ತಿಲ್ಲ ಎನ್ನುವುದು ಯಕ್ಷ ಪ್ರಶ್ನೆ ಎಂದು ಕಾರ್ಯಕಾರಿ ಸಮಿತಿ ಸದಸ್ಯ, ಸಾಣೂರು ನರಸಿಂಹ ಕಾಮತ್ ಹೇಳಿದ್ದಾರೆ.
ಪರಿಹಾರ ಕೊಡದಿದ್ದಕ್ಕೆ ಭೂಮಿ ಕೊಡಲು ತಕರಾರು: ಹೆದ್ದಾರಿ ಅಭಿವೃದ್ಧಿ ಕೆಲಸ ಸಾಣೂರು, ಬೆಳುವಾಯಿ ಪಡುಮಾರ್ನಾಡು ಅಲ್ಲದೆ ತೆಂಕ ಉಳಿಪಾಡಿ ಮತ್ತು ಬಡಗ ಉಳಿಪಾಡಿ ಗ್ರಾಮಗಳಲ್ಲಿ ಮಾತ್ರ ವೇಗದಿಂದ ನಡೆಯುತ್ತಿದೆ. ಪರಿಹಾರ ನೀಡದೆ ಇರುವುರಿಂದಾಗಿ ಭೂ ಮಾಲೀಕರು ತಮ್ಮ ಜಾಗವನ್ನು ಹೆದ್ದಾರಿ ಇಲಾಖೆಗೆ ಬಿಟ್ಟು ಕೊಡುತ್ತಿಲ್ಲ. ಕಳೆದ ಅಕ್ಟೋಬರ್ ತಿಂಗಳಲ್ಲಿ ಕಾಮಗಾರಿಯ ಒಪ್ಪಂದ ಪತ್ರಕ್ಕೆ ಸಹಿ ಹಾಕಿರುವ ದಿಲೀಪ್ ಬಿಲ್ಡ್ಕಾನ್ ಕಂಪನಿಯವರಿಗೆ ರಸ್ತೆಯ ಕೆಲಸಗಳನ್ನು ಮಾಡಲು ಜಾಗ ಸಿಗದೆ ಪರದಾಡುತ್ತಿದ್ದಾರೆ. ಇನ್ನು ಮೂರು ನಾಲ್ಕು ತಿಂಗಳು ಮಳೆ ಇರುವುದರಿಂದ ಹೆದ್ದಾರಿಯ ಎಲ್ಲಾ ಕೆಲಸಗಳು ಸ್ಥಗಿತಗೊಳ್ಳುವ ಸಂಭವಿದೆ. ಅರ್ಧಂಬರ್ಧ ಕೆಲಸ ಆಗಿರುವ ಜಾಗಗಳಲ್ಲಿ ಸಾರ್ವಜನಿಕರಿಗೆ ತುಂಬಾ ತೊಂದರೆ ಆಗಲಿದೆ ಎಂದು ಗಮನ ಸೆಳೆದಿದ್ದಾರೆ.
ನೆರೆ ಸಂಕಷ್ಟದ ಪ್ರದೇಶಗಳಿಗೆ ಶಾಸಕ ಗುರುರಾಜ್ ಗಂಟಿಹೊಳೆ ಭೇಟಿ
ಉಡುಪಿ (ಜೂ.13): ಬೈಂದೂರು ತಾಲೂಕಿನ ಸೌಪರ್ಣಿಕ ನದಿ ಸಮೀಪದಲ್ಲಿರುವ ಊರುಗಳಾದ ಸಾಲ್ಬುಡ-ನಾವುಂದ ಬಡಾಕೆರೆ, ಮರವಂತೆ, ಚಿಕ್ಕಳ್ಳಿ, ಪಡುಕೋಣೆ, ಅರೆಹೊಳೆ,ಹೇರೂರು, ಮುಂತಾದ ಪ್ರದೇಶಗಳು ಪ್ರತಿ ವರ್ಷ ಮಳೆಗಾಲ ಬಂದರೆ ಇಲ್ಲಿನ ಜನರಿಗೆ ನೆರೆಯ ಸಮಸ್ಯೆ ತಪ್ಪಿದ್ದಲ್ಲ. ಮಳೆಗಾಲದಲ್ಲಿ ಇಲ್ಲಿನ ನೂರಕ್ಕೂ ಅಧಿಕ ಮನೆಯವರಿಗೆ ರಸ್ತೆ ಸಂಪರ್ಕವಿಲ್ಲದೆ ದೋಣಿ ಮೂಲಕವೇ ಮೂಲಕವೇ ತಮ್ಮ ದೈನಂದಿನ ಚಟುವಟಿಕೆಯನ್ನು ಸಾಗಿಸಬೇಕು. ಈ ಪರಿಸರದ ಜನರ ಸಂಕಷ್ಟ ಕೇಳಲು ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಭೇಟಿ ನೀಡಿ ಸಮಾಲೋಚನೆ ನಡೆಸಿದರು.
ಉಚಿತ ಪ್ರಯಾಣಕ್ಕಾಗಿ ಪಶ್ಚಿಮ ಬಂಗಾಳ ಮಹಿಳೆ ಹಿಂಗಾ ಮಾಡೋದು! ದಂಗಾದ ಕಂಡಕ್ಟರ್
ಈ ಪರಿಸರದ ಜನರಿಗೆ ನೆರೆ ಬಂದರೆ ಹೆಚ್ಚು ಕಮ್ಮಿ ನಾಲ್ಕೈದು ದಿನವಾದರೂ ಮನೆ ಬಿಟ್ಟು ಹೊರಬಾರಲಾಗದ ದುಸ್ಥಿತಿ. ಹಿಡಿ ಉಪ್ಪು, ದಿನಸಿ, ತರಕಾರಿ ತರಬೇಕಾದರೂ ಕೂಡ ದೋಣಿ ಬೇಕು…ಅಲ್ಲದೆ ಸಾವಿರಾರು ಎಕರೆ ಕೃಷಿ ಭೂಮಿಗಳು ನೆರೆಯಿಂದ ಸಂಪೂರ್ಣ ಜಲಾವೃತವಾಗುತ್ತೆ. ಕುಡಿಯುವ ನೀರಿಗೂ ಸಮಸ್ಯೆ ಆಗುತ್ತೆ. ನೆರೆ ನೀರು ಜೊತೆ ಕೆಲವೊಂದು ಹಾವುಗಳು ಮನೆ ಒಳಗೆ ನುಗ್ಗುವ ಭೀತಿಉಂಟಾಗುತ್ತದೆ. ನೆರಪೀಡಿತ ಪ್ರದೇಶವಾದ ಸಾಲ್ಬುಡ,ಕಂಡಿಕೇರಿ,ಕುದ್ರುಭಾಗಗಳಿಗೆ ಮಾನ್ಯ ಶಾಸಕರಾದ ಗುರುರಾಜ ಗಂಟಿಹೊಳೆ ಬೇಟಿ ನೀಡಿ ಮಾತನಾಡಿದರು. ನೆರೆ ಹಾವಳಿಯಿಂದಾಗುವ ಆವಂತರಗಳ ಬಗ್ಗೆ ಜನರೊಂದಿಗೆ ಚರ್ಚೆ ಮಾಡಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಆದೇಶ ನೀಡಿದರು.