ರಂಝಾನ್ ತಿಂಗಳಲ್ಲೂ ಲಾಕ್‌ಡೌನ್ ಕಡ್ಡಾಯವಾಗಿ ಪಾಲನೆ ಮಾಡುವಂತೆ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಅಧ್ಯಕ್ಷ ಯಾಸೀನ್ ಮಲ್ಪೆ ಕರೆ ನೀಡಿದ್ದಾರೆ.
ಉಡುಪಿ(ಏ.17): ಲಾಕ್‌ಡೌನ್ ಹಿನ್ನೆಲೆಯಲ್ಲಿ ಸರ್ಕಾರದ ಸೂಚನೆಯಂತೆ ಮಸೀದಿಗಳಲ್ಲಿ ಸಾಮೂಹಿಕ ನಮಾಜ್ ನಿಲ್ಲಿಸಲಾಗಿದೆ. ಈಗ ಕೇಂದ್ರ ಸರ್ಕಾರ ಮೇ 3ರವರೆಗೆ ಲಾಕ್‌ಡೌನ್ ವಿಸ್ತರಿಸಿದೆ.
ಈ ನಡುವೆ ಪ್ರಾರಂಭವಾಗುವ ರಂಝಾನ್ ತಿಂಗಳಲ್ಲೂ ಲಾಕ್‌ಡೌನ್ ಕಡ್ಡಾಯವಾಗಿ ಪಾಲನೆ ಮಾಡುವಂತೆ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಅಧ್ಯಕ್ಷ ಯಾಸೀನ್ ಮಲ್ಪೆ ಕರೆ ನೀಡಿದ್ದಾರೆ.
undefined
ದಾದಿಗೂ ಕೊರೋನಾ ಸೋಂಕು ದೃಢ: ಇಡೀ ಆಸ್ಪತ್ರೆಯೇ ಕ್ವಾರಂಟೈನ್..!
ರಮಝಾನ್ ಪ್ರಯುಕ್ತ ಯಾರೂ ಮಸೀದಿಗಳಿಗೆ ತೆರಳದೆ ಪ್ರತಿದಿನದ 5 ಹೊತ್ತಿನ ನಮಾಜನ್ನು ಮನೆಯಲ್ಲಿ ಕುಟುಂಬದ ಸದಸ್ಯರು ಸೇರಿ ಮಾಡಬೇಕು. ನಿತ್ಯದ ಅಗತ್ಯ ವಸ್ತುಗಳ ಖರೀದಿ ವಿಚಾರದಲ್ಲೂ ಸರ್ಕಾರದ ನಿರ್ದೇಶನಗಳನ್ನು ತಪ್ಪದೆ ಪಾಲಿಸಬೇಕು.
ರಂಜಾನ್; ಲೌಡ್ ಸ್ಪೀಕರ್, ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಇಲ್ಲ
ಸಹರಿ-ಇಫ್ತಾರ್ ಕೂಟಗಳನ್ನು ಕೈಬಿಟ್ಟು, ರಮಝಾನ್ ಮಾಸದಲ್ಲಿ ಬಡವರು, ಅಗತ್ಯ ಇರುವವರಿಗೆ ನೆರವು ನೀಡಬೇಕು. ಝಕಾತ್ ಹಾಗೂ ಸದಖಾ ಮೂಲಕ ಸಂಬಂಧಿಕರು, ನೆರೆಹೊರೆಯ, ಅಗತ್ಯ ಇರುವಂತಹ ಸರ್ವಧರ್ಮೀಯರಿಗೆ ನೆರವು ನೀಡಬೇಕು ಎಂದವರು ತಿಳಿಸಿದ್ದಾರೆ.