
ಮಂಡ್ಯ(ಏ.22): ವಿಶ್ವೇಶ್ವರಯ್ಯ ನಾಲೆಯಲ್ಲಿ ಈಜಲು ಹೋದ ಯುವಕರಿಬ್ಬರು ನೀರು ಪಾಲಾದ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ನಾರ್ತ್ ಬ್ಯಾಂಕ್ ಬಳಿ ಇಂದು(ಗುರುವಾರ) ನಡೆದಿದೆ.
ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಮಲ್ಲಿನಾಥಪುರದ ಬಸವೇಗೌಡ ಮತ್ತು ಜವರೇಗೌಡ ನೀರುಪಾಲಾದ ಯುವಕರಾಗಿದ್ದಾರೆ ಎಂದು ತಿಳಿದು ಬಂದಿದೆ.
ಕೈ-ಜೆಡಿಎಸ್ ದೋಸ್ತಿಗೆ ಬಂಪರ್ : ಬಿಜೆಪಿಗೆ ಮುಖಭಂಗ-'ಕಣ್ಮರೆ ಖಚಿತ'
ಕೆಆರ್‌ಎಸ್ ಸಮೀಪದ ಶ್ರೀ ಕಾಳಮ್ಮ ದೇವಸ್ಥಾನಕ್ಕೆ ಪೂಜೆಗೆಂದು ಬಂದಿದ್ದ ಯುವಕರು ವಿಶ್ವೇಶ್ವರಯ್ಯ ನಾಲೆಯಲ್ಲಿ ಈಜಲು ತೆರಳಿದ್ದ ಸಮಯದಲ್ಲಿ ಈ ದುರ್ಘಟನೆ ಸಂಭವಿಸಿದೆ. ನಾಲೆಯಲ್ಲಿ 2500 ಕ್ಯೂಸೆಕ್ ನೀರು ಹರಿಯುತ್ತಿರುವುದನ್ನು ಗಮನಿಸದೆ ನೀರಿಗಿಳಿದ ವೇಳೆ ಇಬ್ಬರೂ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಮೃತ ಯುವಕರಲ್ಲಿ ಓರ್ವನ ಶವ ಪತ್ತೆಯಾಗಿದ್ದು ಮತ್ತೊಬ್ಬನ ಶವಕ್ಕಾಗಿ ಹುಡುಕಾಟ ನಡೆದಿದ. ಈ ಸಂಬಂಧ ಕೆಆರ್‌ಎಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.