ಬಿ.ಶ್ರೀರಾಮುಲು ಅವರು ಜಿಲ್ಲಾ ಮಟ್ಟದ ನಾಯಕರಲ್ಲ. ರಾಜ್ಯ ಮಟ್ಟದ ನಾಯಕರು| ಜಿಲ್ಲಾ ಉಸ್ತುವಾರಿ ಸಚಿವರಾದರೆ ಖಂಡಿತ ಬಳ್ಳಾರಿ ಜಿಲ್ಲೆ ಸಮಗ್ರ ಅಭಿವೃದ್ಧಿಯಾಗಲಿದೆ ಎಂಬ ಭರವಸೆ ನನಗಿದೆ| ನಾನೇ ಸಿಎಂ ಬಳಿ ಮಾತನಾಡುವೆ ಎಂದ ಆನಂದ ಸಿಂಗ್|
ಬಳ್ಳಾರಿ(ಏ.22): ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಲು ಬಿ.ಶ್ರೀರಾಮುಲು ಸೂಕ್ತ ವ್ಯಕ್ತಿ. ಅವರನ್ನು ಬಳ್ಳಾರಿಗೆ ಉಸ್ತುವಾರಿಯನ್ನಾಗಿಸುವಂತೆ ಮುಖ್ಯಮಂತ್ರಿಗಳ ಬಳಿ ನಾನೇ ಮನವಿ ಮಾಡಿಕೊಳ್ಳುವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಬಿ.ಶ್ರೀರಾಮುಲು ಅವರು ಜಿಲ್ಲಾ ಮಟ್ಟದ ನಾಯಕರಲ್ಲ. ರಾಜ್ಯ ಮಟ್ಟದ ನಾಯಕರು. ಜಿಲ್ಲಾ ಉಸ್ತುವಾರಿ ಸಚಿವರಾದರೆ ಖಂಡಿತ ಬಳ್ಳಾರಿ ಜಿಲ್ಲೆ ಸಮಗ್ರ ಅಭಿವೃದ್ಧಿಯಾಗಲಿದೆ ಎಂಬ ಭರವಸೆ ನನಗಿದೆ. ಹೀಗಾಗಿ ನಾನೇ ಸಿಎಂ ಬಳಿ ಮಾತನಾಡುವೆ ಎಂದು ತಿಳಿಸಿದ್ದಾರೆ.
ಹಿರಿಯ ಕಾಂಗ್ರೆಸ್ ಮುಖಂಡ ಬಿಜೆಪಿಗೆ ಸೇರ್ಪಡೆ
ಕಾಂಗ್ರೆಸ್ ಪಕ್ಷದಲ್ಲಿ ಸೂಕ್ತ ನಾಯಕತ್ವ ಇಲ್ಲ. ಅದೊಂದು ಒಡೆದ ಮನೆಯಿದ್ದಂತೆ. ಸ್ಥಾನ ಖಾಲಿಯಾಗುತ್ತಿದ್ದಂತೆಯೇ ನನಗೆ ಬೇಕು ಎಂದು ಹೊಡೆದಾಡಿಕೊಳ್ಳುವವರೇ ಆ ಪಕ್ಷದಲ್ಲಿ ಹೆಚ್ಚಾಗಿದ್ದಾರೆ. ಬರೀ ಟೀಕೆಗಳನ್ನು ಮಾಡುವ ಕಾಂಗ್ರೆಸ್‌ಗೆ ಉಪ ಚುನಾವಣೆ ಸೂಕ್ತ ಉತ್ತರ ದೊರೆಯಲಿದೆ ಎಂದು ಹೇಳಿದ್ದಾರೆ.