ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಅಳವಡಿಸಿರುವ ಕ್ಯಾಮೆರಾಗೆ ಜೋಡಿ ಹುಲಿಗಳು ಸೆರೆಯಾಗಿವೆ. ಬಂಡೀಪುರ ಹುಲಿ ಯೋಜನೆಯ ಮೂಲೆಹೊಳೆ ಹುಲಿಗಳೆರಡು ಸೂರ್ಯ ಬೆಳಕು ಬೀಳುವ ಸಮಯದಲ್ಲಿ ಕ್ಯಾಮೆರಾಗೆ ಎರಡು ಹುಲಿ ಒಂದೆ ಬಾರಿಗೆ ಸೆರೆಯಾಗಿವೆ.
ಚಾಮರಾಜನಗರ(ಜ.01): ಗುಂಡ್ಲುಪೇಟೆಯ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಅಳವಡಿಸಿರುವ ಕ್ಯಾಮೆರಾಗೆ ಜೋಡಿ ಹುಲಿಗಳು ಸೆರೆಯಾಗಿವೆ. ಬಂಡೀಪುರ ಹುಲಿ ಯೋಜನೆಯ ಮೂಲೆಹೊಳೆ ಹುಲಿಗಳೆರಡು ಸೂರ್ಯ ಬೆಳಕು ಬೀಳುವ ಸಮಯದಲ್ಲಿ ಕ್ಯಾಮೆರಾಗೆ ಎರಡು ಹುಲಿ ಒಂದೆ ಬಾರಿಗೆ ಸೆರೆಯಾಗಿವೆ.
ಮೂಲೆ ಹೊಳೆ ವಲಯದಲ್ಲಿ ಹುಲಿ ಜೋಡಿ ಹುಲಿಗಳು ನೋಡಲು ಸಿಗುವುದು ಅಪರೂಪ. ಕ್ಯಾಮೆರಾ ಕಣ್ಣಿಗೆ ಹೊಸ ವರ್ಷದ ಸಮಯದಲ್ಲಿ ಬಿದ್ದಿರುವುದು ಒಂದು ಬಗೆಯ ಹರ್ಷಕ್ಕೆ ಕಾರಣವಾಗಿದೆ. ಎರಡೂ ಹುಲಿಗಳೂ ಜೊತೆಯಲ್ಲೇ ಕಾಣಿಸಿಕೊಂಡಿರುವುದು ಇನ್ನಷ್ಟು ಅಚ್ಚರಿ ಮೂಡಿಸಿದೆ.
ಮೈಸೂರು: ಆರೋಗ್ಯ ಕೇಂದ್ರದ ಮುಂದೆಯೇ ತುಂಬಿ ನಿಲ್ಲುತ್ತೆ ಕೊಳಚೆ..!
ಅರಣ್ಯ ಇಲಾಖೆಯ ಈ ಕ್ಯಾಮೆರಾಗೆ ಹಲವಾರು ಭಂಗಿ ಗಳಲ್ಲಿ ಈ ಹುಲಿಗಳು ಸೆರೆಯಾಗಿವೆ. ಜೊತೆಗೆ ಒಂದು ಹುಲಿ ಬಿಟ್ಟು ಮತ್ತೊಂದು ಹುಲಿ ಬೇರೆಯಾಗಿಲ್ಲ. ಎಲ್ಲ ಪೋಟೊ ಗಳಲ್ಲಿ ಜೊತೆಯಾಗಿವೆ ಕಂಡಿವೆ.