
ಕಲಬುರಗಿ(ಸೆ.27): ಕಲಬುರಗಿ ನಗರದ ರಿಂಗ್ ರಸ್ತೆಯ ನಾಗನಹಳ್ಳಿ ಬಳಿ ಇರುವ ರೇಲ್ವೆ ಮೇಲ್ಸೇತುವೆಯ ರಸ್ತೆ ವಿಭಜಕಕ್ಕೆ ಬೈಕ್ ಡಿಕ್ಕಿ ಹೊಡೆದು ಇಬ್ಬರು ಎಸ್ಸೆಸ್ಸೆಲ್ಸಿ ಬಾಲಕರು ಸ್ಥಳದಲ್ಲೇ ಸಾವನನಪ್ಪಿರುವ ದಾರುಣ ಘಟನೆ ಮಂಗಳವಾರ ನಡೆದಿದೆ.
ಅಬ್ಬಾಸ ಅಲಿ ಮತ್ತು ಇರ್ಫಾನ್ ಮೃತ ಮಕ್ಕಳು. ಇವರಿಬ್ಬರು ಎಸ್ಸೆಸ್ಸೆಲ್ಸಿ ಓದುತ್ತಿದ್ದರು, ಹುಟ್ಟುಹಬ್ಬ ಆಚರಣೆಗೆಂದು ಇವರಿಬ್ಬರು ಹೊರಟಿದ್ದರು.
ಕಲಬುರಗಿ: ರೈಲು ಡಿಕ್ಕಿ ಹೊಡೆದು ಸಾಯಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸಾವು
ಅತೀ ವೇಗದಲ್ಲಿ ಬೈಕ್ ಚಲಾವಣೆ ಮಾಡಿಕೊಂಡು ಹೊರಟ ಸಂದರ್ಭದಲ್ಲಿ ರಸ್ತೆ ವಿಭಜಕಕ್ಕೆ ಬೈಕ್ ಡಿಕ್ಕಿ ಹೊಡೆದು ಇವರು ಸಾವನ್ನಪ್ಪಿದ್ದಾರೆಂದು ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ.