ಭಾರತದಲ್ಲಿರುವ ಹಿಂದೂ ಧರ್ಮದ ಜನರೇ ಸಿಂಹಗಳು: ಯತ್ನಾಳ

By Kannadaprabha News  |  First Published Sep 27, 2023, 8:01 AM IST

ನಮ್ಮ ಈ ದೇಶದ ನಿಜವಾದ ಹೆಸರು ಭಾರತ. ಅದನ್ನು ಇಂಡಿಯಾ ಮಾಡಿ ಇಟ್ಟು ಬಿಟ್ಟಿದ್ದರೂ ಸದ್ಯ ಮತ್ತರ ಭಾರತ ದೇಶವಾಗಿದೆ. ಈ ದೇಶದ ಹೆಸರು ಭಾರತವೆಂದು ಎಲ್ಲ ದೇಶಗಳು ಒಪ್ಪಿಕೊಂಡಿವೆ. ಆದರೆ ದೇಶದಲ್ಲಿರುವ ಅಯೋಗ್ಯರು ಭಾರತವೆಂದು ಒಪ್ಪಿಕೊಳ್ಳಲು ತ್ರಾಸ ಮಾಡಿಕೊಳ್ಳುತ್ತಿದ್ದಾರೆ: ಶಾಸಕ ಬಸನಗೌಡ ಪಾಟೀಲ ಯತ್ನಾಳ


ತಾಳಿಕೋಟೆ(ಸೆ.27):  ಸನಾತನ ಧರ್ಮವು ಹುಟ್ಟಿದಕ್ಕೆ ಆದಿಯೂ ಇಲ್ಲ. ಅಂತ್ಯವೂ ಇಲ್ಲ. ಈ ಧರ್ಮ ಭಗವಂತನೇ ಸೃಷ್ಟಿಸಿದ್ದಾಗಿದ್ದು, ಈ ಧರ್ಮವನ್ನು ನಾಶ ಮಾಡುತ್ತೇವೆಂದು ಹೋದ ಲಕ್ಷಾಂತರ ಜನರೇ ನಾಶವಾಗಿ ಹೋಗಿದ್ದಾರೆ. ಸನಾತನ ಧರ್ಮ ಉಳಿದರೆ ದೇಶ ಉಳಿಯಲು ಸಾಧ್ಯ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಹೇಳಿದರು.

ಮಂಗಳವಾರ ಪಟ್ಟಣದ ತಿಲಕ ರಸ್ತೆಯಲ್ಲಿ ಹಿಂದೂ ಮಹಾ ಗಣಪತಿ ಮಹಾ ಮಂಡಳಿಯ ವತಿಯಿಂದ ಪ್ರತಿಷ್ಠಾಪಿಸಲಾದ ಗಣೇಶ ಮೂರ್ತಿಯ ವಿಸರ್ಜನೆಯ ಭವ್ಯ ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ದೇಶದಲ್ಲಿ ಹಿಂದೂ ಧರ್ಮವನ್ನು ನಾಶ ಮಾಡಲು ಬಾಬರ ಬಂದ, ಔರಂಗಜೇಬ ಬಂದ, ಮೊಘಲರು ಬಂದರು. ಆವಾಗಲೂ ಸಹ ಸನಾತನ ಧರ್ಮಕ್ಕೆ ಏನೂ ಮಾಡಲು ಆಗಲಿಲ್ಲ ಈ ದೇಶದಲ್ಲಿ ಇರುವ ಹಿಂದೂಗಳು ಅಭಿಮಾನ ಪಡಬೇಕು. ನಾವು ಯಾವುದೇ ಆಸೆ ಆಮೀಷಕ್ಕೆ ಒಳಗಾಗಬಾರದು. ಈ ದೇಶದಲ್ಲಿರುವ ಹಿಂದೂ ಧರ್ಮದ ಜನರೇ ಸಿಂಹಗಳಾಗಿದ್ದಾರೆ. ನಮ್ಮ ಪೂರ್ವಜರು ಯಾವುದಕ್ಕೂ ಅಂಜದೇ ಹಿಂದೂ ಧರ್ಮದ ರಕ್ಷಣೆಗೆ ಕಟಿಬದ್ಧವಾಗಿ ನಿಂತ ಪರಿಣಾಮ ನಾವು ಹಿಂದೂಗಳಾಗಿ ಉಳಿದಿದ್ದೇವೆಂದರು.

Latest Videos

undefined

ಕಾವೇರಿ ಹೋರಾಟಕ್ಕೆ ಉತ್ತರ ಕರ್ನಾಟಕದವರಿಗೆ ಬೆಂಬಲ ಕೊಡಿ ಅಂತೀರಿ, ಕೃಷ್ಣೆಗೆ ಬಂದಾಗ ಯಾಕೆ ಮಲಗಿಕೊಳ್ತಿರಿ?:

ನಮ್ಮ ಈ ದೇಶದ ನಿಜವಾದ ಹೆಸರು ಭಾರತ. ಅದನ್ನು ಇಂಡಿಯಾ ಮಾಡಿ ಇಟ್ಟು ಬಿಟ್ಟಿದ್ದರೂ ಸದ್ಯ ಮತ್ತರ ಭಾರತ ದೇಶವಾಗಿದೆ. ಈ ದೇಶದ ಹೆಸರು ಭಾರತವೆಂದು ಎಲ್ಲ ದೇಶಗಳು ಒಪ್ಪಿಕೊಂಡಿವೆ. ಆದರೆ ದೇಶದಲ್ಲಿರುವ ಅಯೋಗ್ಯರು ಭಾರತವೆಂದು ಒಪ್ಪಿಕೊಳ್ಳಲು ತ್ರಾಸಮಾಡಿಕೊಳ್ಳುತ್ತಿದ್ದಾರೆಂದರು.

ಬಾಬಾಸಾಹೇಬ ಅಂಬೇಡ್ಕರ್ ಅವರು ಭಾರತೀಯ ರಿಪಬ್ಲಿಕನ್ ಪಾರ್ಟಿ ಅಂತ ಹೆಸರಿಟ್ಟಿದ್ದರು. ಆದರೆ ಇವರು ಇಂಡಿಯನ್ ರಿಪಬ್ಲಿಕನ್ ಪಾರ್ಟಿ ಮಾಡಿಬಿಟ್ಟರು. ದೇಶದ ಬಗ್ಗೆ ಗೌರವವಿಲ್ಲದವರು ಧರ್ಮವನ್ನು ಹೇಗೆ ರಕ್ಷೆ ಮಾಡುತ್ತಾರೆಂದು ಪ್ರಶ್ನಿಸಿದ ಅವರು, ಸನಾತನ ಧರ್ಮವನ್ನು ರಕ್ಷಣೆಗಾಗಿ ಕೆಲವು ಸ್ವಾಮಿಗಳು ಟೊಂಕಕಟ್ಟಿ ನಿಂತಿದ್ದಾರೆ. ಅದರಲ್ಲಿ ತಾಳಿಕೋಟೆ ಹಿಂದೂ ಮಹಾ ಗಣಪತಿ ಮಹಾ ಮಂಡಳಿಯ ಕೆಸರಟ್ಟಿಶ್ರೀಗಳು, ಗುಂಡಕನಾಳಶ್ರೀಗಳಾಗಿದ್ದಾರೆಂದರು.

ಕಾವೇರಿ ಹೋರಾಟಕ್ಕೆ ಬಾರದ ನಟ-ನಟಿಯರ ಚಿತ್ರಗಳನ್ನು ಬಹಿಷ್ಕರಿಸಿ: ಶಾಸಕ ಯತ್ನಾಳ್‌ ಒತ್ತಾಯ

ಬಾಲಗಂಗಾಧರ ತಿಲಕರು ನಮ್ಮ ದೇಶದ ಜನರು ಒಗ್ಗಟ್ಟಾಗಬೇಕು ಎಂಬ ಉದ್ದೇಶದಿಂದ ಗಣೇಶ ಮೂರ್ತಿಯನ್ನು ಸಾರ್ವಜನಿಕವಾಗಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿದರು. ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಯಾವುದೇ ಪರ್ಮಿಶನ್‌ ಬೇಕಿಲ್ಲ. ವಿಜಯಪುರ ನಗರದಲ್ಲಿ ೫೨೦ ಗಣೇಶ ಮೂರ್ತಿ ಕುಳಿತಿವೆ ಎಲ್ಲಗಣಪತಿಗೆ ಕಮಿಟಿಗೆ ೫ ಸಾವಿರ ರು. ಪಟ್ಟಿ ಕೊಟ್ಟಿದ್ದೇನೆ. ಯಾವುದೇ ಗಣಪತಿಗೂ ಪರ್ಮಿಷನ್ ತೊಗೊಂಡಿಲ್ಲ. ಸಂಭ್ರಮದಿಂದ ಗಣೇಶ ಉತ್ಸವ ಆಚರಣೆ ಮಾಡುತ್ತಿದ್ದೇವೆಂದರು.

ವೇದಿಕೆಯ ಮೇಲೆ ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ(ಕೂಚಬಾಳ), ಜಿಪಂ ಮಾಜಿ ಅಧ್ಯಕ್ಷ ಪ್ರಭುಗೌಡ ದೇಸಾಯಿ, ಹಿಂದೂ ಮಹಾ ಗಣಪತಿ ಮಹಾ ಮಂಡಳಿಯ ಗೌರವ ಅಧ್ಯಕ್ಷ ಗುಂಡಕನಾಳ ಹಿರೇಮಠದ ಶ್ರೀ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಉಪಾಧ್ಯಕ್ಷ ಕೆಸರಟ್ಟಿಯ ಶ್ರೀ ಸೋಮಲಿಂಗ ಮಹಾ ಸ್ವಾಮಿಗಳು, ಕಾರ್ಯದರ್ಶಿ ವೇ.ಸಂತೋಷಬಟ್ ಜೋಶಿ ಹಾಗೂ ಹಿಂದೂ ಮಹಾ ಗಣಪತಿ ಮಹಾ ಮಂಡಳಿಯ ಕಾರ್ಯಕರ್ತರು ಉಪಸ್ಥಿತರಿದ್ದರು.

click me!