* ರೋಹಿಣಿ ಸಿಂಧೂರಿ ತಮ್ಮ ಅಧಿಕೃತ ನಿವಾಸದಲ್ಲಿ ಈಜುಕೊಳ ನಿರ್ಮಿಸಿರುವುದರ ಸಂಬಂಧ ತನಿಖೆ
* ಆರು ಅಂಶಗಳ ನ್ಯೂನತೆಗಳಿರುವುದು ಒಂದು ವರದಿಯಾದರೆ ಎರಡೇ ಅಂಶ ನೀಡಿ ಮತ್ತೊಂದು ವರದಿ
* ಈಜುಕೊಳ ನಿರ್ಮಾಣಕ್ಕೆ 32 ಲಕ್ಷ ರು. ಅಂದಾಜುಪಟ್ಟಿ
ಮೈಸೂರು(ಜೂ.24): ಮೈಸೂರಿನ ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ತಮ್ಮ ಅಧಿಕೃತ ನಿವಾಸದಲ್ಲಿ ಈಜುಕೊಳ ನಿರ್ಮಿಸಿರುವುದರ ಸಂಬಂಧ ತನಿಖೆ ನಡೆಸಿದ ಪ್ರಾದೇಶಿಕ ಆಯುಕ್ತರು ಎರಡು ರೀತಿಯ ವರದಿ ನೀಡಿದ್ದಾರೆ ಎಂದು ಹೇಳಲಾಗಿದೆ.
ಲಭ್ಯವಿರುವ ಮಾಹಿತಿಗಳ ಪ್ರಕಾರ, ಈಗಾಗಲೇ ಪ್ರಕಟವಾಗಿರುವಂತೆ ಆರು ಅಂಶಗಳ ನ್ಯೂನತೆಗಳಿರುವುದು ಒಂದು ವರದಿಯಾದರೆ ಕೇವಲ ಎರಡೇ ಅಂಶ ನೀಡಿ ಮತ್ತೊಂದು ವರದಿ ನೀಡಿದ್ದಾರೆ.
‘ಈಜುಕೊಳ’ದ ಸುಳಿಯಲ್ಲಿ ರೋಹಿಣಿ ಸಿಂಧೂರಿ..!
ಮೊದಲ ವರದಿಯಲ್ಲಿ ನಿರ್ಮಾಣಕ್ಕೆ 32 ಲಕ್ಷ ರು. ಅಂದಾಜುಪಟ್ಟಿಗೆ ಲೋಕೋಪಯೋಗಿ ಇಲಾಖೆ ಅಥವಾ ತಾಂತ್ರಿಕ ವರ್ಗದ ಅನುಮತಿ ಪಡೆದಿಲ್ಲ. ಕಾಮಗಾರಿ ನಡೆಸಿದವರ ಒಪ್ಪಂದ ಪತ್ರಗಳಲ್ಲ ಎಂದು ನಮೂದಾಗಿತ್ತು. ಆದರೆ ಎರಡನೇ ವರದಿಯಲ್ಲಿ ಪಾರಂಪರಿಕ ರಕ್ಷಣಾ ಸಮಿತಿಯ ಅನುಮೋದನೆ ಪಡೆದಿಲ್ಲ. ಈ ಈಜುಕೊಳ ನಿರ್ಮಾಣವು ಯಾವುದೇ ಸಾರ್ವಜನಿಕ ಹಿತಾಸಕ್ತಿ ಹೊಂದಿರುವುದಿಲ್ಲ ಎಂಬ- ಎರಡು ನ್ಯೂನತೆಗಳನ್ನು ಮಾತ್ರ ನಮೂದಿಸಲಾಗಿದೆ ಎಂದು ತಿಳಿದುಬಂದಿದೆ.