ಬಿಸಿ ಸಾಂಬರ್‌ ಮೈಮೇಲೆ ಬಿದ್ದು ಮಗು ಸಾವು

Published : Jun 24, 2021, 07:19 AM ISTUpdated : Jun 24, 2021, 09:35 AM IST
ಬಿಸಿ ಸಾಂಬರ್‌ ಮೈಮೇಲೆ ಬಿದ್ದು ಮಗು ಸಾವು

ಸಾರಾಂಶ

ಕುದಿಯುತ್ತಿದ್ದ ಸಾಂಬಾರ್ ಮಗುವಿನ ಜೀವವನ್ನೇ ತೆಗೆಯಿತು ಎರಡು ವರ್ಷದ ಕಂದಮ್ಮ ಸಾವು

ರಾಮನಗರ(ಜೂ.24): ಸ್ಟೌಮ್‌ ಮೇಲೆ ಕುದಿಯುತ್ತಿದ್ದ ಬಿಸಿ ಸಾಂಬರ್‌ ಮೈಮೇಲೆ ಸುರಿದು ಕೊಂಡಿದ್ದರಿಂದ ಎರಡು ವರ್ಷದ ಮಗು ಸಾವಿಗೀಡಾಗಿರುವ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ದೇವರಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಚೌಡೇಶ್‌ ಮತ್ತು ರಾಧಾ ದಂಪತಿಯ ಪುತ್ರ ಧ್ವನಿಕ್‌ ಸಾವಿಗೀಡಾದ ಮಗು. ಮಂಗಳವಾರ ಮನೆಯಲ್ಲಿ ಆಟವಾಡುತ್ತಾ ಅಡುಗೆ ಮನೆಗೆ ಬಂದ ಕಂದಮ್ಮ ಸ್ಟೌವ್‌ ಮೇಲೆ ಇದ್ದ ಬಿಸಿ ಸಾಂಬರ್‌ ಪಾತ್ರೆಯನ್ನು ಎಳೆದಿದೆ.

ಫೋನ್ ಟ್ಯಾಪಿಂಗ್ ಕೇಸ್: ಗೊಂದಲಗಳಿಗೆ ತೆರೆ ಎಳೆದ ಬಿಜೆಪಿ ಶಾಸಕ

ಸಾಕಷ್ಟುಬಿಸಿ ಇದ್ದ ಸಾಂಬರ್‌ ಮೈಮೇಲೆ ಬಿದ್ದಿದ್ದರಿಂದ ಮಗು ತೀವ್ರ ಗಾಯಗೊಂಡಿತ್ತು. ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರೂ ಫಲಿಸದೆ ಸಾವಿಗೀಡಾಗಿದೆ. ಅಡುಗೆ ಮನೆಯಲ್ಲಿ ಇಂತಹ ಘಟನೆಗಳು ಸಾಮಾನ್ಯವಾಗಿದ್ದರೂ, ಮಕ್ಕಳನ್ನು ಅಡುಗೆ ಮನೆಯಿಂದ ದೂರ ನಿಲ್ಲಿಸುವುದು ಅಗತ್ಯ.

 

 

PREV
click me!

Recommended Stories

ಚಿಕ್ಕಬಳ್ಳಾಪುರದಲ್ಲಿ ಮಾನವ ಹಕ್ಕುಗಳ ದಿನಾಚರಣೆ: ಸಾವಿರಾರು ಜನರಲ್ಲಿ ನಾಯಕತ್ವ ಬಿತ್ತಿದ ನವಶಕ್ತಿ ನಾಟಕ
ಹಿಂದೂಗಳು ಒಂದಾಗದಿದ್ರೆ ದೇಶ, ಸಂವಿಧಾನ ಉಳಿಯಲ್ಲ: ಶಾಸಕ ಬಸನಗೌಡ ಪಾಟೀಲ ಯತ್ನಾಳ