ಕೊರೋನಾ ಆತಂಕ ಬೆನ್ನಲ್ಲೇ ಶಿವಮೊಗ್ಗದಲ್ಲಿ ಹೆಚ್ಚುತ್ತಿದೆ ಮಹಾಮಾರಿ

By Kannadaprabha News  |  First Published Mar 9, 2020, 10:17 AM IST

ಕೊರೋನಾ ಎಂಬ ಮಹಾಮಾರಿ ವಿಶ್ವದಾದ್ಯಂತ ತಲ್ಲಣ ಸೃಷ್ಟಿಸುತ್ತಿರುವ ಬೆನ್ನಲ್ಲೇ ಶಿವಮೊಗ್ಗದಲ್ಲಿ ಮಹಾಮಾರಿಯೊಂದು ತಾಂಡವವಾಡುತ್ತಿದೆ. 


ತೀರ್ಥಹಳ್ಳಿ [ಮಾ.09]: ತಾಲೂಕಿನ ಕೋಣಂದೂರು ಸಮೀಪದ ಹುಲ್ಲತ್ತಿ ಸುಮಿತ್ರ (35) ಹಾಗೂ ಹಾದಿಗಲ್ಲು ಗ್ರಾಮದ ಗಿರೀಶ್‌(35) ಎಂಬುವರಿಗೆ ಮಂಗನ ಕಾಯಿಲೆ ಇರುವುದು ದೃಢಪಟ್ಟಿದೆ. 

ತಾಲೂಕಿನಲ್ಲಿ ಈವರೆಗೆ ಒಟ್ಟು 65 ಪ್ರಕರಣಗಳಲ್ಲಿ ಮಂಗನ ಕಾಯಿಲೆ ಇರುವುದು ದೃಢಪಟ್ಟಿದೆ. 

Tap to resize

Latest Videos

ಮಲೆನಾಡಿನಲ್ಲಿ ಮತ್ತೆ ಮಂಗನ ಕಾಯಿಲೆ ಆರ್ಭಟ : 63 ಪ್ರಕರಣ ವರದಿ...

ಪ್ರಸ್ತುತ ತಾಲೂಕು ಜೆ.ಸಿ. ಆಸ್ಪತ್ರೆಯಲ್ಲಿ 8 ಮಂದಿ ಒಳರೋಗಿಗಳಾಗಿ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಮಣಿಪಾಲ, ಉಡುಪಿಯ ಆದರ್ಶ ಆಸ್ಪತ್ರೆ ಹಾಗೂ ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಯಲ್ಲಿ ತಲಾ ಒಂದು ಪ್ರಕರಣ ದಾಖಲಾಗಿವೆ.

ದಿನದಿಂದ ದಿನಕ್ಕೆ ಮಂಗನ ಕಾಯಿಲೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು ಜಿಲ್ಲೆಯ ಜನರಲ್ಲಿ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.

click me!