'ದೊರೆಸ್ವಾಮಿ ಅವರೊಡನೆ ನಾನು ಜೈಲಿನಲ್ಲಿದ್ದೆ'...!

Kannadaprabha News   | Asianet News
Published : Mar 09, 2020, 09:57 AM IST
'ದೊರೆಸ್ವಾಮಿ ಅವರೊಡನೆ ನಾನು ಜೈಲಿನಲ್ಲಿದ್ದೆ'...!

ಸಾರಾಂಶ

ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ ಅವರೊಂದಿಗೆ ನಾನೂ ಕೂಡ ಜೈಲುವಾಸ ಅನುಭವಿಸಿದ್ದೇನೆ ಎಂದು ನಗರದ ನಿವಾಸಿ ಅನಂತರಾಮ್‌ ತಿಳಿಸಿದ್ದಾರೆ.

ಮೈಸೂರು(ಮಾ.09): ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ ಅವರೊಂದಿಗೆ ನಾನೂ ಕೂಡ ಜೈಲುವಾಸ ಅನುಭವಿಸಿದ್ದೇನೆ ಎಂದು ನಗರದ ನಿವಾಸಿ ಅನಂತರಾಮ್‌ ತಿಳಿಸಿದ್ದಾರೆ.

ದೊರೆಸ್ವಾಮಿ ಅವರು ಜೈಲಿನಲ್ಲಿದ್ದದ್ದನ್ನು ನಾನು ಕಾಣಲಿಲ್ಲ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅವರು, ‘ತುರ್ತು ಪರಿಸ್ಥಿತಿ’ಯಲ್ಲಿ ಬೆಂಗಳೂರು ಸೆಂಟ್ರಲ್‌ ಜೈಲಿನಲ್ಲಿ ನಾನು ಇದ್ದ ಬ್ಯಾಂಕ್‌ನಲ್ಲಿಯೇ ದೊರೆಸ್ವಾಮಿ ಅವರೂ ಇದ್ದರು. 3 ತಿಂಗಳ ಕಾಲ ನಾನು ಅವರ ಜೊತೆ ಜೈಲಿನಲ್ಲಿದ್ದೆ ಎಂದಿದ್ದಾರೆ.

'ದೊರೆಸ್ವಾಮಿ ವಿರುದ್ಧ ಮಾತನಾಡುವವರಿಗೆ ಹುಚ್ಚು ಹಿಡಿದಿದ್ದು, ರೇಬಿಸ್‌ ಚುಚ್ಚುಮದ್ದು ಹಾಕಲಿ'

ಈ ವೇಳೆ ನಾನೂ ಕೂಡ 4 ತಿಂಗಳು ಡಿಫೆನ್ಸ್‌ ಆಪ್‌ ಇಂಡಿಯಾ ರೂಲ್ಸ್‌ ಅಡಿ ಅಂಡರ್‌ ಟ್ರಯಲ್‌ ಬೇಸಿಸ್‌ನಲ್ಲಿ ಇದ್ದಾಗ ಅವರು ಪ್ರತಿದಿನವೂ ನನಗೆ ಸಾಮಾನ್ಯ ಜೀವನದ ಬಗ್ಗೆ ಮಾರ್ಗದರ್ಶನ ಮಾಡಿದ್ದಾರೆ. ನಂತರ ನಾನು ಯಾವುದೇ ಅಪರಾಧ ಮಾಡಿಲ್ಲ ಎಂದು ಬಿಡುಗಡೆ ಮಾಡಿದ್ದಾರೆ. ದೊರೆಸ್ವಾಮಿ ಅವರು ನನ್ನನ್ನು ಬಹಳವಾಗಿ ಮೆಚ್ಚಿಕೊಂಡಿದ್ದರು. ಆ ಸಮಯದಲ್ಲಿ ನಾನು ಬಿ ಕ್ಲಾಸ್‌ ಅಂಡರ್‌ ಟ್ರಯಲ್‌ ಆಗಿದ್ದೆ. ಇದಕ್ಕೆ ಸಂಬಂಧಿಸಿದ ದಾಖಲೆಯೂ ತಮ್ಮ ಬಳಿ ಇರುವುದಾಗಿ ಅವರು ತಿಳಿಸಿದ್ದಾರೆ.

PREV
click me!

Recommended Stories

ಸಿಸೇರಿಯನ್‌ ಹೆರಿಗೆ ಹೆಚ್ಚಳ ಏಕೆ ಎಂದು ತಿಳಿಯಲು ಆಡಿಟ್‌: ಸಚಿವ ದಿನೇಶ್‌ ಗುಂಡೂರಾವ್
ಮಂಗಳಮುಖಿಯರಿಂದ ಯುವಕನ ಅಪಹರಣ; ಶಸ್ತ್ರಚಿಕಿತ್ಸೆ ನಡೆಸಿ ಪರಿವರ್ತನೆಗೆ ಯತ್ನ?