ಟೇಕಲ್‌ ಬಳಿ ರೈಲಿಗೆ ಸಿಲುಕಿ ಚಿರತೆ ಸಾವು?

Kannadaprabha News   | Asianet News
Published : Mar 09, 2020, 10:14 AM IST
ಟೇಕಲ್‌ ಬಳಿ ರೈಲಿಗೆ ಸಿಲುಕಿ ಚಿರತೆ ಸಾವು?

ಸಾರಾಂಶ

ಟೇಕಲ್‌ನ ಸೋಮಸಂದ್ರ ಬಳಿ ಎರಡು ವರ್ಷದ ಹೆಣ್ಣು ಚಿರತೆಯೊಂದು ರೈಲಿಗೆ ಸಿಕ್ಕಿ ಮೃತಪಟ್ಟಿರುವ ಘಟನೆ ಶನಿವಾರ ತಡರಾತ್ರಿ ಸಂಭವಿಸಿದೆ. ಸೋಮಸಂದ್ರ ಗ್ರಾಮದ ಸಮೀಪ ರೈಲು ಮಾರ್ಗ(ಚೆನ್ನೈ-ಬೆಂಗಳೂರು)ದಲ್ಲಿ ರೈಲುಗಳು ರಾತ್ರಿ ಹಗಲು ಓಡಾಡುತ್ತಿರುತ್ತದೆ.  

ಕೋಲಾರ(ಮಾ.09): ಟೇಕಲ್‌ನ ಸೋಮಸಂದ್ರ ಬಳಿ ಎರಡು ವರ್ಷದ ಹೆಣ್ಣು ಚಿರತೆಯೊಂದು ರೈಲಿಗೆ ಸಿಕ್ಕಿ ಮೃತಪಟ್ಟಿರುವ ಘಟನೆ ಶನಿವಾರ ತಡರಾತ್ರಿ ಸಂಭವಿಸಿದೆ. ಸೋಮಸಂದ್ರ ಗ್ರಾಮದ ಸಮೀಪ ರೈಲು ಮಾರ್ಗ(ಚೆನ್ನೈ-ಬೆಂಗಳೂರು)ದಲ್ಲಿ ರೈಲುಗಳು ರಾತ್ರಿ ಹಗಲು ಓಡಾಡುತ್ತಿರುತ್ತದೆ.

ಈ ಮಾರ್ಗದ ಸಮೀಪದಲ್ಲೇ ಬೆಟ್ಟವಿದ್ದು ಚಿರತೆ ಈ ಬೆಟ್ಟದಿಂದ ರೈಲು ಹಳಿ ಪಕ್ಕ ಇರುವ ಕೆರೆಗೆ ನೀರು ಕುಡಿಯಲು ಬರುವಾಗ ರೈಲಿಗೆ ಸಿಕ್ಕಿ ಸಾವನ್ನಪ್ಪಿರಬೇಕೆಂದು ಶಂಕಿಸಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು ಚಿರತೆ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದಾರೆ.

ನರಭಕ್ಷಕ ಚಿರತೆಯ ಸೆರೆಗೆ ನಾಗರಹೊಳೆಯ ಆನೆ

ಇದೇ ಸ್ಥಳದಲ್ಲಿ ಕೆಲವು ವರ್ಷಗಳ ಹಿಂದೆ ಗಂಡು ಚಿರತೆಯೊಂದು ರೈಲಿಗೆ ಸಿಕ್ಕಿ ಸಾವನ್ನಪ್ಪಿತ್ತು. ಟೇಕಲ್‌ ಸುತ್ತಮುತ್ತಲ ಪ್ರದೇಶಗಳಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿದೆ. ಈಗಾಲೇ ವ್ಯಕ್ತಿಯೊಬ್ಬ ಚಿರತೆಗೆ ಬಲಿಯಾಗಿದ್ದು, ಕೆಲವರು ಗಾಯಗೊಂಡ ಪ್ರಕರಣಗಳು ನಡೆದಿವೆ.

PREV
click me!

Recommended Stories

ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮುಗಿಸಿ ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ಸಾವು
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ