ವಿದ್ಯುತ್‌ ಸ್ಥಾವರ ಸ್ಫೋಟ: ಇಬ್ಬರ ಸಾವು

Kannadaprabha News   | Asianet News
Published : Oct 13, 2020, 08:01 AM IST
ವಿದ್ಯುತ್‌ ಸ್ಥಾವರ ಸ್ಫೋಟ: ಇಬ್ಬರ ಸಾವು

ಸಾರಾಂಶ

ಯಲಹಂಕ ಅನಿಲ ಆಧಾರಿತ ವಿದ್ಯುತ್‌ ಸ್ಥಾವರದಲ್ಲಿ ನಡೆದಿದ್ದ ಸ್ಫೋಟ| ಚಿಕಿತ್ಸೆ ಫಲಿಸದೆ ಇಬ್ಬರು ಎಂಜಿನಿಯರ್‌ಗಳ ಸಾವು| ಈ ಘಟನೆಯಲ್ಲಿ 15 ಮಂದಿ ಎಂಜಿನಿಯರ್‌ಗಳಿಗೆ ತೀವ್ರ ಗಾಯ| 

ಬೆಂಗಳೂರು(ಅ.13): ಇತ್ತೀಚಿಗೆ ಯಲಹಂಕ ಅನಿಲ ಆಧಾರಿತ ವಿದ್ಯುತ್‌ ಸ್ಥಾವರದಲ್ಲಿ ನಡೆದಿದ್ದ ಸ್ಫೋಟ ಘಟನೆಯಲ್ಲಿ ಗಾಯಗೊಂಡಿದ್ದ ಇಬ್ಬರು ಎಂಜಿನಿಯರ್‌ಗಳು ಚಿಕಿತ್ಸೆ ಫಲಿಸದೆ ಸೋಮವಾರ ಮೃತಪಟ್ಟಿದ್ದಾರೆ. 

ಕರ್ನಾಟಕ ವಿದ್ಯುತ್‌ ನಿಗಮದ ನೌಕರರಾದ ಕೃಷ್ಣ ಭಟ್‌ ಹಾಗೂ ಮಂಜಪ್ಪ ಮೃತ ದುರ್ದೈವಿಗಳು. ಯಲಹಂಕದ ವಿದ್ಯುತ್‌ ಸ್ಥಾವರದಲ್ಲಿ 370 ಮೆಗಾ ವಾಟ್‌ ವಿದ್ಯುತ್‌ ಉತ್ಪಾದನಾ ಸಾಮರ್ಥ್ಯದ 1ನೇ ಘಟಕವನ್ನು ಕಾರ್ಯಾಚರಣೆಗೆ ಸಿದ್ಧಗೊಳಿಸುವಾಗ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿತ್ತು. 

ಬೆಂಗಳೂರು ಗಲಭೆ: ಶಾಸಕ ಅಖಂಡ ಮನೆ ಬೆಂಕಿಗೆ ಕಾಂಗ್ರೆಸ್ಸಿಗರ ದ್ವೇಷವೇ ಕಾರಣ

ಈ ಘಟನೆಯಲ್ಲಿ 15 ಮಂದಿ ಎಂಜಿನಿಯರ್‌ಗಳು ತೀವ್ರವಾಗಿ ಗಾಯಗೊಂಡಿದ್ದರು. ಈ ಪೈಕಿ ಇದುವರೆಗೆ ಚಿಕಿತ್ಸೆ ಫಲಿಸದೆ ಮೂವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
 

PREV
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ