ಮಾಜಿ ಶಾಸಕ ಮಲ್ಲಪ್ಪ ನಿಧನ

By Kannadaprabha News  |  First Published Oct 13, 2020, 7:36 AM IST

ಮಾಜಿ ಶಾಸಕ ಮಲ್ಲಪ್ಪ ನಿಧನರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.


ದಾವಣಗೆರೆ (ಅ.13) : ಹಿರಿಯ ಗಾಂಧಿವಾದಿ, ಕುರುಬ ಸಮಾಜದ ಹಿರಿಯರಾದ ಮಾಜಿ ಶಾಸಕ ಕೆ.ಮಲ್ಲಪ್ಪ ನಗರದ ಆಂಜನೇಯ ಬಡಾವಣೆಯ ತಮ್ಮ ಸ್ವಗೃಹದಲ್ಲಿ ಸೋಮವಾರ ಬೆಳಗಿನ ಜಾವ ನಿಧನರಾದರು.

 ಅವರಿಗೆ 92 ವರ್ಷ ವಯಸ್ಸಾಗಿತ್ತು. ಸ್ವತಃ ಕುಸ್ತಿಪಟುವಾಗಿದ್ದ ಮಲ್ಲಪ್ಪ 1983ರಲ್ಲಿ ಹರಿಹರ ಕ್ಷೇತ್ರದಿಂದ, 1985ರಲ್ಲಿ ಮಾಯಕೊಂಡ ಕ್ಷೇತ್ರದಿಂದ ಶಾಸಕರಾಗಿ ಹಾಗೂ ಒಮ್ಮೆ ವಿಧಾನ ಪರಿಷತ್‌ ಸದಸ್ಯರಾಗಿದ್ದರು. 

Tap to resize

Latest Videos

ದೇವರಾಜ ಅರಸು ಹಿಂದುಳಿದ ವರ್ಗಗಳ ನಿಗಮ ಹಾಗೂ ಬಯಲುಸೀಮೆ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾಗಿ ನಿರಂತರವಾಗಿ ಸೇವೆ ಸಲ್ಲಿಸಿದ್ದರು.

ಆರೋಗ್ಯ ಖಾತೆಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ: ಸುಧಾಕರ್ ...

 ಅನಾರೋಗ್ಯದಿಂದ ಬಳಲುತ್ತಿದ್ದ ಮಲ್ಲಪ್ಪ ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ. ಸೋಮವಾರ ಸಂಜೆ ನಗರದ ಹಿಂದು ರುದ್ರಭೂಮಿಯಲ್ಲಿ ಮೃತರ ಅಂತ್ಯಕ್ರಿಯೆ ನೆರವೇರಿತು.

ಮಲ್ಲಪ್ಪ ಅವರ ನಿಧನಕ್ಕೆ ಹಲವು ಗಣ್ಯರು ಸಂತಾಪ ಸೂಚಿಸಿದರು. 

click me!