ಮಾನ್ವಿ: ಮಿನಿ ಲಾರಿ ಪಲ್ಟಿ, ಇಬ್ಬರ ದುರ್ಮರಣ

By Kannadaprabha News  |  First Published Oct 13, 2020, 2:09 PM IST

ಮಿನಿ ಲಾರಿ ಪಲ್ಟಿಯಾಗಿ ಸ್ಥಳದಲ್ಲಿಯೇ ಇಬ್ಬರ ಸಾವು| ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕಲ್ಲೂರು ಗ್ರಾಮದ ಬಳಿ ನಡೆದ ಘಟನೆ| ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲು| ಈ ಸಂಬಂಧ ಸಿರವಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು| 


ಮಾನ್ವಿ(ಅ.13): ಕಲ್ಲೂರು ಗ್ರಾಮದ ಬಳಿ ಭತ್ತ ಕಟಾವ್‌ ಮಾಡುವ ಯಂತ್ರ ಹೂತ್ತೊಯ್ಯೂತ್ತಿದ್ದ ಮಿನಿ ಲಾರಿಯ ಸ್ಟೇರಿಂಗ್‌ ಕಟ್‌ ಆಗಿ ಮಿನಿ ಲಾರಿ ಪಲ್ಟಿಯಾಗಿ ಸ್ಥಳದಲ್ಲಿಯೇ ಇಬ್ಬರು ಸಾವನ್ನಪ್ಪಿದ್ದು ಒಬ್ಬರಿಗೆ ಗಾಯವಾಗಿರುವ ಘಟನೆ ಸೋಮವಾರ ಜರುಗಿದೆ. 

ಮಿನಿ ಲಾರಿ ಪಲ್ಟಿಯಾಗಿ ಮೃತಪಟ್ಟವರು ಚಾಲಕ ಸುರೇಶ (36) ಹಾಗೂ ಕ್ಲಿನರ್‌ ಮರಿಯಾ (20) ಎಂದು ತಿಳಿದುಬಂದಿದ್ದು ಮುಖ್ಯರಸ್ತೆ ಪಕ್ಕದಲ್ಲಿ ಪಲ್ಟಿಯಾಗಿ ಬಿದ್ದಿದ್ದ ಲಾರಿಯನ್ನು ಕ್ರೇನ್‌ ಸಹಾಯದಿಂದ ಮೇಲೆತ್ತಿ ನಂತರ ಸುಗಮ ಸಂಚಾರಕ್ಕೆ ಅನುವು ಮಾಡಿಕೂಡಲಾಯಿತು. 

Tap to resize

Latest Videos

ಬಹಿರ್ದೆಸೆಗೆ ಹೋಗಿದ್ದ ಯುವಕ 3 ದಿನಗಳ ಹಿಂದೆ ನಾಪತ್ತೆ; ಮುಂದುವರೆದ ಶೋಧ ಕಾರ್ಯ

ಅಪಘಾತದಲ್ಲಿ ಗಾಯಗೊಂಡ ನಾಲ್ಕು ಜನರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಈ ಕುರಿತಂತೆ ಸಿರವಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದೆ.
 

click me!