ಬಾಗಲಕೋಟೆ ಜಿಲ್ಲೆಯ ಮಣ್ಣೇರಿಯಲ್ಲಿ ನದಿಗೆ ಸ್ನಾನಕ್ಕೆ ಹೋದ ಯುವಕ ಮುಳುಗುತ್ತಿದ್ದಾಗ ರಕ್ಷಿಸಲು ಹೋದ ಸೈನಿಕರಿಬ್ಬರೂ ಸಾವನ್ನಪ್ಪಿದ್ದಾರೆ. ಈ ಕುರಿತು ಬಾದಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ : ಮಲ್ಲಿಕಾರ್ಜುನ ಹೊಸಮನಿ. ಏಷ್ಯಾನೆಟ್ ಸುವರ್ಣನ್ಯೂಸ್
ಬಾಗಲಕೋಟೆ (ಏ.13): ನದಿಯಲ್ಲಿ ಮುಳುಗುತ್ತಿದ್ದ ಯುವಕನ ರಕ್ಷಣೆಗಾಗಿ ಹೋದ ಸೈನಿಕನೂ ಸೇರಿದಂತೆ ಇಬ್ಬರು ನೀರಿನಲ್ಲಿ ಮುಳುಗಿ ಆಕಸ್ಮಿಕವಾಗಿ ಸಾವನ್ನಪ್ಪಿರೋ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಮಣ್ಣೇರಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮಲಪ್ರಭಾ ನದಿಯಲ್ಲಿ ಈ ಘಟನೆ ನಡೆದಿದ್ದು, ಮೃತ ದುರ್ದೈವಿಗಳನ್ನ ಬಾದಾಮಿ ತಾಲೂಕಿನ ಹಂಸನೂರ ಗ್ರಾಮದ ಶೇಖಪ್ಪ ಮುತ್ತಪ್ಪ ಮೂಲಿಮನಿ(15) ಹಾಗೂ ಗದಗ ಜಿಲ್ಲೆಯ ರೋಣ ತಾಲೂಕಿನ ಬೆನಹಾಳ ಗ್ರಾಮದ ಸೈನಿಕ ಮಹಾಂತೇಶ ಹೂವಪ್ಪ ಹೊಸಮನಿ(25) ಎಂದು ಗುರುತಿಸಲಾಗಿದೆ. ಶೇಖಪ್ಪ ಮಲಪ್ರಭಾ ನದಿಯಲ್ಲಿ ಸ್ನಾನ ಮಾಡಲು ಹೋಗಿ ಈಜು ಬಾರದೇ ಕೂಗಿದಾಗ ಆತನ ರಕ್ಷಣೆಗಾಗಿ ಸೈನಿಕ ಮಹಾಂತೇಶ ನದಿಯಲ್ಲಿ ಹೋಗಿ ಶೇಖಪ್ಪನ ಬಳಿ ಹೋದಾಗ ಗಾಬರಿಯಾಗಿ ಕುತ್ತಿಗೆ ಹಿಡಿದು ಒದ್ದಾಡಿದ್ದಾನೆ, ಆಗ ನದಿ ದಡಸೇರಿಸಲಾಗದೇ ಇಬ್ಬರು ಮೃತಪಟ್ಟಿದ್ದು, ಸಂಭಂದಿಗಳ ಆಕ್ರಂದನ ಮುಗಿಲು ಮುಟ್ಟಿತ್ತು. ಇನ್ನು ಈ ಕುರಿತು ಬಾದಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈಜು ಬಾರದ ಸೀರಿಯಲ್ ನಟಿ ಶೂಟಿಂಗ್ ವೇಳೆ ಬಾವಿಗೆ ಹಾರಿದಾಗ ನಡೆದದ್ದೇ ಬೇರೆ! ವಿಡಿಯೋ ವೈರಲ್
ಬಳ್ಳಾರಿಯಲ್ಲಿ ಕೃಷಿ ಹೊಂಡದಲ್ಲಿ ಈಜಲು ಹೋದ ಇಬ್ಬರು ಬಾಲಕರು ಸಾವು
ಈ ದುರ್ಘಟನೆ ತಾಲೂಕಿನ ಶಿಡಗಿನಮೊಳ ಗ್ರಾಮದ ಹೊರ ವಲಯದಲ್ಲಿ ಗುರುವಾರ ಸಂಜೆ ಸಂಭವಿಸಿದೆ. ರಾಜೇಶ್ (13) ಹಾಗೂ ಶಿವಶಂಕರ್ (13) ಮೃತಪಟ್ಟವರು. ಶಾಲೆ ರಜೆ ಹಿನ್ನೆಲೆಯಲ್ಲಿ ಕ್ರಿಕೆಟ್ ಆಡಲು ತೆರಳಿದ್ದ ನಾಲ್ವರು ಬಾಲಕರ ಪೈಕಿ ಮೃತ ಇಬ್ಬರು ಕೃಷಿ ಹೊಂಡದಲ್ಲಿ ಈಜಾಡಲು ಹೊಂಡಕ್ಕೆ ಜಿಗಿದಿದ್ದಾರೆ. ಹೊಂಡದಲ್ಲಿದ್ದ ಕೆಸರಿನಲ್ಲಿ ಸಿಲುಕಿ ಹಾಕಿಕೊಂಡ ಇಬ್ಬರು ಅಲ್ಲಿಂದ ಹೊರ ಬರಲು ಪ್ರಯತ್ನಿಸಿದರೂ ಸಾಧ್ಯವಾಗದೆ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ವಿಷಯ ಗೊತ್ತಾಗುತ್ತಿದ್ದಂತೆಯೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಹೊಂಡದಲ್ಲಿ ಮೃತಪಟ್ಟಿರುವ ಬಾಲಕರ ಮೃತ ದೇಹಗಳನ್ನು ಹೊರಕ್ಕೆ ತೆಗೆದಿದ್ದಾರೆ. ಸ್ಥಳಕ್ಕೆ ಪಿಡಿ ಹಳ್ಳಿ ಠಾಣೆ ಪಿಎಸ್‌ಐ ನಾಗಭೂಷಣ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿ, ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈಜುಕೊಳದಲ್ಲಿ ಮೈಮರೆತು ರೊಮಾನ್ಸ್ ಮಾಡ್ತಿದ್ದ ಪ್ರೇಮಿಗಳು ಭೂಕಂಪದಿಂದ ಜಸ್ಟ್ ಎಸ್ಕೇಪ್! ವಿಡಿಯೋ ವೈರಲ್
ತವರಿಗೆ ಕರೆದು ಗಂಡನ ಮೇಲೆ ಹೆಂಡತಿಯ ತಮ್ಮನಿಂದಲೇ ಹಲ್ಲೆ
ಕಲಬುರಗಿ: ತವರಿನಲ್ಲಿದ್ದ ಹೆಂಡತಿಗೆ ತನ್ನ ಮನೆಗೆ ಕರೆದ ಗಂಡನ ಮೇಲೆ ಹೆಂಡತಿಯ ತಮ್ಮನಿಂದಲೇ ಮಾರಣಾಂತಿಕ ಹಲ್ಲೆ ಮಾಡಿದ ಪ್ರಕರಣದಲ್ಲಿ ತೀವ್ರ ಗಾಯಗೊಂಡು ಆಸ್ಪತ್ರೆ ಸೇರಿದ್ದ ಆನಂದ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಈ ಘಟನೆಯಲ್ಲಿ ಹಲ್ಲೆ ಮಾಡಿದ ಆರೋಪಿಗಳ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ. ಮಾವನಿಗೆ ಭಾಮೈದ (ಹೆಂಡತಿಯ ತಮ್ಮನಿಂದ) ಹಾಗೂ ಆತನ ಸ್ನೇಹಿತರಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಇಲ್ಲಿನ ಜಿಮ್ಸ್ ಟ್ರಾಮಾ ಕೇರ್ ಸೆಂಟರ್‌ನಲ್ಲಿ ಆನಂದನಿಗೆ ದಾಕಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಆತ ಕಳೆದ ರಾತ್ರಿಯೇ ಕೊನೆಯುಸಿರೆಳೆದಿದ್ದಾನೆ.
ಕಲಬುರಗಿ ನಗರದ ಗಾಜಿಪುರ ಬಡಾವಣೆಯಲ್ಲಿ ಮೊನ್ನೆ ರಾತ್ರಿ ನಡೆದಿದ್ದ ಚಾಕಿ ಇರಿತ ಹಾಗೂ ಮಾರಣಾಂತಿಕ ಹಲ್ಲೆಯಲ್ಲಿ ಆನಂದ ತನ್ನ ಬಭಾಮೈದನಿಂದಲೇ ಹಲ್ಲೆಗೊಳಗಾಗಿದ್ದ. ಕಳೆದ ಎರಡು ವರ್ಷದ ಹಿಂದೆ ಸ್ನೇಹಾ ಎನ್ನುವ ಹುಡುಗಿಯನ್ನು ಪ್ರೀತಿಸಿ ಮದುವೆಯಾಗಿದ್ದ ಆನಂದ್. ಮದುವೆಯಾದ ಬಳಿಕ ಆರಂಭದಲ್ಲಿ ಸಂಸಾರ ಚೆನ್ನಾಗಿತ್ತು. ನಂತರ ವರ್ಷ ತುಂಬುವುದರೊಳಗೇ ಪ್ರೀತಿಸಿ ಮದುವೆಯಾದ ಈ ಜೋಡಿಯ ದಾಂಪತ್ಯದಲ್ಲಿ ವಿರಸ ಕಂಡಿತ್ತು.
ಗಂಡ ಹೆಂಡತಿಯ ನಡುವೆ ಕಿರಿಕಿರಿ ಶುರುವಾದಾಗ ಪತ್ನಿ, ಮನೆ ಬಿಟ್ಟು ತವರಿಗೆ ಹೋಗಿದ್ದಳು. ತನ್ನ ಸಹೋದರನ ಮದುವೆ ನಿಗದಿಯಾಗಿದ್ದರಿಂದ ತವರಿ ನಲ್ಲಿದ್ದ ಹೆಂಡತಿ ಸ್ನೇಹಾಗೆ ತನ್ನ ಮನೆಗೆ ಕರೆತರಲು ಆನಂದ್ ಹೋಗಿದ್ದಾಗ ಹಲ್ಲೆ ಘಟನೆ ನಡೆದಿತ್ತು. ಕಲಬುರಗಿಯ ಬ್ರಹ್ಮಪೂರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಹಲ್ಲೆ ನಂತರ ತಲೆ ಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಬ್ರಹ್ಮಪೂರ ಪೊಲೀಸರು ಜಾಲ ಬೀಸಿದ್ದಾರೆ.