ದಾಂಡೇಲಿ: ಲಾರಿ- ಬೈಕ್‌ ನಡುವೆ ಡಿಕ್ಕಿ, ಇಬ್ಬರ ದುರ್ಮರಣ

Kannadaprabha News   | Asianet News
Published : Dec 18, 2020, 03:48 PM IST
ದಾಂಡೇಲಿ: ಲಾರಿ- ಬೈಕ್‌ ನಡುವೆ ಡಿಕ್ಕಿ, ಇಬ್ಬರ ದುರ್ಮರಣ

ಸಾರಾಂಶ

ಲಾರಿ-ಬೈಕ್‌ ಮಧ್ಯೆ ಅಪಘಾತ| ಉತ್ತರ ಕನ್ನಡ ಜಿಲ್ಲೆಯ ದಾಂಡೇ​ಲಿಯಲ್ಲಿ ನಡೆದ ದುರ್ಘಟನೆ| ಮೃತರು ವೆಸ್ಟ್‌ಕೋಸ್ಟ್‌ಪೇಪರ್‌ಮಿಲ್ಲಿನ ಕಾರ್ಮಿಕರು| ಘಟನೆ ಬಳಿಕ ಲಾರಿ ಚಾಲಕ ಪರಾರಿ| 

ದಾಂಡೇಲಿ(ಡಿ.18): ದಾಂಡೇ​ಲಿ​ಯಿಂದ ಬೆಳ​ಗಾವಿಗೆ ಹೋಗುವ ಮಾರ್ಗ​ದ ತಾವ​ರ​ಗಟ್ಟಿ ಬಳಿ ಲಾರಿ ಹಾಗೂ ಬೈಕ್‌ ನಡುವೆ ಡಿಕ್ಕಿ ಸಂಭವಿಸಿದ ಪರಿ​ಣಾಮ ಇಬ್ಬರು ಮೃತ​ಪಟ್ಟ ಘಟನೆ ಬುಧ​ವಾರ ನಡೆ​ದಿ​ದೆ.

ಮೃತ​ರನ್ನು ಬೆಳ​ಗಾವಿ ಜಿಲ್ಲೆಯ ಹುಕ್ಕೇರಿ ತಾಲೂ​ಕಿನ ಮಾಸ್ತಿ​ಹೊಳೆ ಗ್ರಾಮದ ನಿರ್ವ​ಹ​ಣೆಪ್ಪ ಶಿವಪ್ಪ ಕಮತಿ (26) ಹಿಂಬದಿ ಸವಾ​ರ ಚಂದ್ರ​ಶೇ​ಖರ ಶಿವ​ರು​ದ್ರಪ್ಪ ಕಮ​ತಿ (40) ಎಂದು ಗುರು​ತಿ​ಸ​ಲಾ​ಗಿ​ದೆ. 

ಬಿಜೆಪಿ ಸೇರ್ಪಡೆಯಾದ ಕಾಂಗ್ರೆಸ್‌ ಕಾರ್ಯಕರ್ತರು

ಮೃತರು ವೆಸ್ಟ್‌ ಕೋಸ್ಟ್‌ ಪೇಪರ್‌ಮಿಲ್ಲಿನ ಕಾರ್ಮಿ​ಕ​ರಾ​ಗಿ​ದ್ದ​ರು. ಲಾರಿ ಚಾಲಕ ಪರಾರಿಯಾಗಿದ್ದು, ದಾಂಡೇಲಿಯ ಪೊಲೀಸ್‌ಠಾಣೆಯ ಕ್ರೈಂ ವಿಭಾಗದ ಪಿಎಸ್‌ಐ ಸತ್ಯಪ್ಪ ಹುಕ್ಕೇರಿ ಪ್ರಕರಣ ದಾಖಲಿಸಿ ವಿಚಾರಣೆ ಮುಂದುವರೆಸಿದ್ದಾರೆ.
 

PREV
click me!

Recommended Stories

ಖಾಲಿ ಕೊಡ ಹಿಡಿದು ತಮಿಳುನಾಡಿಗೆ ಎಚ್ಚರಿಕೆ ಕೊಟ್ಟ ಕನ್ನಡಿಗರು..! ಯಾಕೆ?
ನಾಶದ ಅಂಚಿನಲ್ಲಿದ್ದ ಐತಿಹಾಸಿಕ ಕಲ್ಯಾಣಿಗೆ ಮರುಜೀವ: 300 ವರ್ಷಗಳ ಹಳೆಯ ಶಿವಲಿಂಗದಾಕಾರದ ಬಾವಿ ಕಂಡು ಬೆರಗಾದ ಜನ!