ಮಾಜಿ ಸಚಿವೆ ಉಮಾಶ್ರೀಗೆ ಸೇರಿದ ಕಾರು ಅಪಘಾತ: ಇಬ್ಬರ ದುರ್ಮರಣ

Kannadaprabha News   | Asianet News
Published : Nov 21, 2020, 10:44 AM IST
ಮಾಜಿ ಸಚಿವೆ ಉಮಾಶ್ರೀಗೆ ಸೇರಿದ ಕಾರು ಅಪಘಾತ: ಇಬ್ಬರ ದುರ್ಮರಣ

ಸಾರಾಂಶ

ಬಲೆನೋ ಮತ್ತು ಇನ್ನೋವಾ ನಡುವೆ ಮುಖಾಮುಖಿ ಡಿಕ್ಕಿ|ಹುಬ್ಬಳ್ಳಿ ತಾಲೂಕಿನ ಬಂಡಿವಾಡ ಬಳಿ ನಡೆದ ಘಟನೆ| ವಾಹನವೊಂದನ್ನು ಓವರ್‌ಟೇಕ್‌ ಮಾಡಲು ಹೋಗಿ ಎದುರಿನಿಂದ ಬರುತ್ತಿದ್ದ ಬಲೆನೋಕ್ಕೆ ಡಿಕ್ಕಿ ಹೊಡೆದ ಇನ್ನೋವಾ ಕಾರು| ಗಾಯಾಗಳುಗಳನ್ನ ಕಿಮ್ಸ್‌ ಆಸ್ಪತ್ರೆಗೆ ದಾಖಲು| 

ಹುಬ್ಬಳ್ಳಿ(ನ.21): ತಾಲೂಕಿನ ಬಂಡಿವಾಡ ಬಳಿ ಶುಕ್ರವಾರ ರಾತ್ರಿ ಬಲೆನೋ ಮತ್ತು ಇನ್ನೋವಾ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು ಹಲವರು ಗಾಯಗೊಂಡಿದ್ದಾರೆ.

ಇನ್ನೋವಾ ಕಾರು ಗದಗನಿಂದ ಹುಬ್ಬಳ್ಳಿಯತ್ತ ಬರುತ್ತಿದ್ದು, ಬಲೆನೋ ಹುಬ್ಬಳ್ಳಿಯಿಂದ ಬಳ್ಳಾರಿಗೆ ಹೊರಟಿತ್ತು ಎನ್ನಲಾಗಿದೆ. ಇನ್ನೋವಾ ಕಾರು ವಾಹನವೊಂದನ್ನು ಓವರ್‌ಟೇಕ್‌ ಮಾಡಲು ಹೋಗಿ ಎದುರಿನಿಂದ ಬರುತ್ತಿದ್ದ ಬಲೆನೋಕ್ಕೆ ಡಿಕ್ಕಿ ಹೊಡೆಯಿತು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. 

8 ತಿಂಗಳ ಬಳಿಕ ಚಿತ್ರಮಂದಿರ ಓಪನ್‌: ಟಾಕೀಸ್‌ ಸಿಬ್ಬಂದಿಗೆ ಸಿಹಿ ನೀಡಿ ಸ್ವಾಗತ..!

ಎರಡೂ ವಾಹನ ಸಂಪೂರ್ಣ ನುಜ್ಜುಗುಜ್ಜಾಗಿದೆ. ವಾಹನದಲ್ಲಿದ್ದ ನವಲಗುಂದ ಮೆಡಿಕಲ್‌ ಆಫೀಸರ್‌ ಸ್ಮೀತಾ ಕಟ್ಟಿ ಸ್ಥಿತಿ ಚಿಂತಾಜನಕವಾಗಿದೆ. ಮೃತಪಟ್ಟವರ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸ್‌ ಇನ್‌ಸ್ಪೆಕ್ಟರ್‌ ಸೇರಿದಂತೆ ಹಲವರು ಸ್ಥಳಕ್ಕೆ ದೌಡಾಯಿಸಿದ್ದು, ಗಾಯಾಳುಗಳನ್ನು ಕಿಮ್ಸ್‌ಗೆ ದಾಖಲಿಸಲಾಗಿದೆ. ಇನ್ನೋವಾ ಕಾರು ಮಾಜಿ ಸಚಿವೆ ಉಮಾಶ್ರೀ ಅವರಿಗೆ ಸೇರಿದ್ದು ಎಂದು ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ತಿಳಿಸಿದ್ದಾರೆ.
 

PREV
click me!

Recommended Stories

ಗೃಹ ಲಕ್ಷ್ಮೀ ಅಡಿ 1.24 ಕೋಟಿ ಸ್ತ್ರೀಯರಿಗೆ ₹1.54 ಕೋಟಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಂಗಳೂರು : ಹೊಸ ಮಾರ್ಗಗಳಿಗೆ ಬರಲಿವೆ ಚಾಲಕ ರಹಿತ ರೈಲು