ಒಂದೇ ಗ್ರಾಮದಲ್ಲಿ ಆಯ್ತು 11 ಬಾಲ್ಯವಿವಾಹ!

By Kannadaprabha NewsFirst Published Nov 21, 2020, 10:31 AM IST
Highlights

ಮಂಡ್ಯದ ಈ ಗ್ರಾಮದಲ್ಲಿ ಕೆಲವೇ ತಿಂಗಳಲ್ಲಿ ಒಟ್ಟು 11 ಬಾಲ್ಯ ವಿವಾಹ ಮಾಡಲಾಗಿದೆ.  ಅಧಿಕಾರಿಗಳ ಕಣ್ಣು ತಪ್ಪಿಸಿ ಬಾಲ್ಯ ವಿವಾಹಗಳು ನಡೆಯುತ್ತಿದೆ. 

ಮಂಡ್ಯ (ನ.21):   ನಿರಂತರ ಜಾಗೃತಿಯ ಹೊರತಾಗಿಯೂ ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳು ವಿವಾಹವಾಗುತ್ತಿರುವ ಘಟನೆಗಳು ಜಿಲ್ಲೆಯಲ್ಲಿ ಹೆಚ್ಚು ಹೆಚ್ಚು ನಡೆಯುತ್ತಿದ್ದು ತಾಲೂಕಿನ ಬೇಬಿ ಗ್ರಾಮ ಪಂಚಾಯಿತಿ ಒಂದರಲ್ಲೇ ಕಳೆದ 7 ತಿಂಗಳಲ್ಲಿ 11 ಬಾಲ್ಯ ವಿವಾಹ ಪ್ರಕರಣಗಳು ನಡೆದಿರುವ ಬಗ್ಗೆ ವರದಿಯಾಗಿದೆ. ಬಡವರೇ ಹೆಚ್ಚಾಗಿ ವಾಸಿಸುತ್ತಿರುವ ಈ ಪಂಚಾಯಿತಿ ವ್ಯಾಪ್ತಿಯಲ್ಲಿ 15 ರಿಂದ 16 ವರ್ಷ ವಯಸ್ಸಿನ ಹೆಣ್ಣು ಮಕ್ಕಳನ್ನು ಬಲವಂತವಾಗಿ ವಿವಾಹ ಬಂಧನಕ್ಕೆ ಒಳಪಡಿಸಲಾಗುತ್ತಿದೆ ಎಂದು ಹೇಳಲಾಗಿದೆ.

ಬಸರಾಳಿನಿಂದ ಕೊಪ್ಪ ಗ್ರಾಮಕ್ಕೆ ಹೋಗುವ ಮಾರ್ಗದ ಬಾಳೇನಹಳ್ಳಿಯ ಬಳಿ ನಿರ್ಜನ ಪ್ರದೇಶದಲ್ಲಿರುವ ಶ್ರೀ ಮಹದೇಶ್ವರ ದೇವಸ್ಥಾನದ ಬಳಿ ಯಾರಿಗೂ ತಿಳಿಯದಂತೆ ಬಾಲ್ಯ ವಿವಾಹಗಳು ನಡೆಯುತ್ತಿವೆ ಎಂದು ಮಕ್ಕಳ ಸಹಾಯವಾಣಿ ಅಧಿಕಾರಿಗಳು ತಿಳಿಸಿದ್ದಾರೆ. 

ರೌಡಿ ಪರೇಡ್‌: ಕುಖ್ಯಾತ ರೌಡಿಗೆ ಪಬ್ಲಿಕ್‌ನಲ್ಲೇ ಎಸ್ಪಿ ಕಪಾಳಮೋಕ್ಷ .

8 ಗ್ರಾಮಗಳನ್ನು ಒಳಗೊಂಡಿರುವ, 5000ಕ್ಕೂ ಹೆಚ್ಚು ಜನರಿರುವ ಬೇಬಿ ಗ್ರಾಮ ಪಂಚಾಯಿತಿಯಲ್ಲಿ ಏಪ್ರಿಲ್‌ ತಿಂಗಳಿನಿಂದ ನವೆಂಬರ್‌ವರೆಗೆ ಇಲ್ಲಿ 8 ಬಾಲ್ಯ ವಿವಾಹಗಳು ನಡೆದಿದ್ದರೆ, ವಿವಾಹ ನಿಶ್ಚಿತಾರ್ಥವಾಗಿದ್ದ 3 ಪ್ರಕರಣಗಳನ್ನು ತಡೆಹಿಡಿಯಲಾಗಿದೆ. ಈ ಪಂಚಾಯಿತಿ ವ್ಯಾಪ್ತಿಯಲ್ಲಿ ಅಪ್ರಾಪ್ತ ವಯಸ್ಸಿನಲ್ಲಿ ಮದುವೆಯಾಗಿ ಗಂಡನ ಮನೆ ಸೇರಿರುವ ಹೆಣ್ಣುಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎನ್ನಲಾಗಿದೆ.

click me!