ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾರ್ಯ ಮೆಚ್ಚಿ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರ್ಪಡೆ

By Kannadaprabha News  |  First Published Jun 8, 2020, 7:45 AM IST

ಕೇಂದ್ರ ಮತ್ತು ರಾಜ್ಯದಲ್ಲಿನ ಬಿಜೆಪಿ ಸರ್ಕಾರದ ಸಾಧನೆಗಳು, ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಬಿಜೆಪಿ ಸೇರಿದ ಕಾಂಗ್ರೆಸ್‌ ಕಾರ್ಯಕರ್ತರು, ಹಲವು ಮುಖಂಡರು| ಬರುವ ದಿನಗಳಲ್ಲಿ ಕೊಪ್ಪಳ ತಾಲೂಕಿನಲ್ಲಿ ಪಕ್ಷವನ್ನು ಇನ್ನುಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವುದಾಗಿ ಹೇಳಿದ ಮುಖಂಡರು|


ಕೊಪ್ಪಳ(ಜೂ.08): ತಾಲೂಕಿನ ಗಬ್ಬೂರು ಗ್ರಾಮದ ಅನೇಕ ಕಾಂಗ್ರೆಸ್‌ ಕಾರ್ಯಕರ್ತರು, ಹಲವು ಮುಖಂಡರು, ಕಾಂಗ್ರೆಸ್‌ ತೊರೆದು ಭಾನುವಾರ ಸಂಸದ ಸಂಗಣ್ಣ ಕರಡಿ ಹಾಗೂ ಯುವ ಮುಖಂಡ ಅಮರೇಶ್‌ ಕರಡಿ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಗೊಂಡರು.

ಸಂಸದರ ನಿವಾಸಕ್ಕೆ ಆಗಮಿಸಿದ್ದ ಗ್ರಾಮದ ಮುಖಂಡರು, ಕೇಂದ್ರ ಮತ್ತು ರಾಜ್ಯದಲ್ಲಿನ ಬಿಜೆಪಿ ಸರ್ಕಾರದ ಸಾಧನೆಗಳು, ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಬಿಜೆಪಿ ಸೇರಿದರು. ಬರುವ ದಿನಗಳಲ್ಲಿ ತಾಲೂಕಿನಲ್ಲಿ ಪಕ್ಷವನ್ನು ಇನ್ನುಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವುದಾಗಿ ಇದೇ ವೇಳೆ ಮುಖಂಡರು ತಿಳಿಸಿದರು.

Tap to resize

Latest Videos

ಕೊಪ್ಪಳ: ಬೆಟಗೇರಿ ಏತನೀರಾವರಿ ಯೋಜನೆ ವಿವಾದ, ಉಸ್ತುವಾರಿ ಸಚಿವರ ಮಧ್ಯ ಪ್ರವೇಶ

ಈ ಸಂದರ್ಭದಲ್ಲಿ ಸಂಸದ ಸಂಗಣ್ಣ ಕರಡಿ, ಯುವ ಮುಖಂಡ ಅಮರೇಶ್‌ ಕರಡಿ, ಬಿಜೆಪಿ ಗ್ರಾಮೀಣ ಮಂಡಲದ ಅಧ್ಯಕ್ಷ ಪ್ರದೀಪ್‌ ಹಿಟ್ನಾಳ, ಗಬ್ಬೂರು ಗ್ರಾಮದ ಮುಖಂಡರಾದ ನಿಂಗಪ್ಪ ಭೀಮಪ್ಪ, ಗೋವಿಂದ ಗೌಡ, ಕರಿಯಪ್ಪ ಕಂಬಳಿ, ಪಂಪಣ್ಣ ಕೆ, ರಮೇಶ ದೊಡ್ಡಮನಿ, ಚಂದ್ರಕಾಂತ ನಾಯಕ, ಚಂದ್ರಸ್ವಾಮಿ, ಫಕೀರಸ್ವಾಮಿ, ನಾಗಬಸಯ್ಯ, ಬಸವರಾಜ್‌ ರೆಡ್ಡಿ, ಪಿ.ಬಿ. ಹಿರೇಮಠ, ರುದ್ರಪ್ಪ ಹಲಗೇರಿ ಸೇರಿದಂತೆ ಗ್ರಾಮದ ಮುಖಂಡರು, ಯುವಕರು ಉಪಸ್ಥಿತರಿದ್ದರು.
 

click me!