ಕೊರೋನಾ ವೈರಸ್ ಭೀತಿ| ಕಲಬುರಗಿಯತ್ತ ಮುಖ ಮಾಡದ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ| ಸಾಮಾಜಿಕ ಜಾಲತಾಣಗಳಲ್ಲಿ ಕಾರಜೋಳಗೆ ಭಾವಪೂರ್ಣ ಶ್ರದ್ಧಾಂಜಲಿ| ಕಾರಜೋಳ ಮೇಲೆ ಗರಂ ಆದ ಕಲಬುರಗಿ ಮಂದಿ|
ಕಲಬುರಗಿ(ಮಾ.19): ನಗರದಲ್ಲಿ ಕೊರೋನಾ ವೈರಸ್‌ನಿಂದ ವೃದ್ಧನೊಬ್ಬ ಮೃತಪಟ್ಟ ಬಳಿಕ ಜಿಲ್ಲೆಯ ಜನ ಆತಂಕದಲ್ಲೇ ಜೀವನ ಸಾಗಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಈ ವೇಳೆಯಲ್ಲಿ ಜಿಲ್ಲೆಯ ಜನತೆಗೆ ಧೈರ್ಯ ತುಂಬಿ ಆತ್ಮಸ್ಥೈರ್ಯ ಹೇಳಬೇಕಾದ ಜಿಲ್ಲಾ ಉಸ್ತುವಾರಿ ಗೋವಿಂದ ಕಾರಜೋಳ ಇತ್ತ ಕಡೆ ಬಂದಿಲ್ಲ ಎಂದು ಕಲಬುರಗಿ ಮಂದಿ ಆರೋಪಿಸಿದ್ದಾರೆ.
ಕೊರೋನಾ ಭೀತಿ: ಕಲಬುರಗಿ ಸಂಪರ್ಕಿಸುವ ಎಲ್ಲ ಖಾಸಗಿ ಬಸ್ ರದ್ದು..!
ಈವರೆಗೆ ಮಹಾಮಾರಿ ಕೊರೋನಾಗೆ ಕಲಬುರಗಿಯಲ್ಲಿ ಓರ್ವ ಸಾವನ್ನಪ್ಪಿದ್ದು, ಜೊತೆಗೆ ಮೃತಪಟ್ಟ ವೃದ್ಧನ ಮಗಳಿಗೂ ಕೂಡ ಸೋಂಕು ಇರುವುದು ದೃಢಪಟ್ಟಿದೆ. ಈ ಸಂದರ್ಭದಲ್ಲಿ ಜಿಲ್ಲೆಯಲ್ಲೇ ಮೊಕ್ಕಾಂ ಹೂಡಬೇಕಾದ ಉಸ್ತುವಾರಿ ಮಂತ್ರಿ ಗೋವಿಂದ ಕಾರಜೋಳ ಮಾತ್ರ ಇತ್ತ ಕಡೆ ಆಗಮಿಸಿಲ್ಲ.
ಹೀಗಾಗಿ ಇಲ್ಲಿನ ಜನ ಗೋವಿಂದ ಕಾರಜೋಳ ಮೇಲೆ ಗರಂ ಆಗಿದ್ದಾರೆ. ಈ ಸಂಬಂಧ ಕಲಬುರಗಿ ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಕಾರಜೋಳ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಎನ್ನುವ ಸಂದೇಶದ ಮೂಲಕ ಆಕ್ರೋಷ ವ್ಯಕ್ತಪಡಿಸಿದ್ದಾರೆ.
ಕೊರೋನಾ ಕಾಟ ಅಷ್ಟಿಷ್ಟಲ್ಲ: ಬರೀ ಕೆಮ್ಮಿದ್ದಕ್ಕೆ ಆ್ಯಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸಾಗಿಸಿದ ಜನ!
ಕಲಬುರಗಿ ಜಿಲ್ಲೆಯಲ್ಲಿ ಕೊರೋನಾ ಉಲ್ಬಣಗೊಂಡ್ರೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಜಿಲ್ಲೆಯತ್ತ ಸುಳಿದಿಲ್ಲ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರು ಆಕ್ರೋಷ ವ್ಯಕ್ತಪಡಿಸಿದ್ದಾರೆ.