ಪರೇಶ್ ಮೇಸ್ತಾ ಪ್ರಕರಣಕ್ಕೆ "ಬಿ" ರಿಪೋರ್ಟ್ ಹಿನ್ನೆಲೆ, ಬಿಜೆಪಿ ವಿರುದ್ಧ ಫೀಲ್ಡಿಗಿಳಿದ ಕಾಂಗ್ರೆಸ್ ಮುಖಂಡರು

By Gowthami KFirst Published Oct 7, 2022, 4:46 PM IST
Highlights

ಪರೇಶ್ ಮೇಸ್ತಾ ಸಾವಿನ ಪ್ರಕರಣ ಸಂಬಂಧಿಸಿ ಸಿಬಿಐ "ಬಿ" ರಿಪೋರ್ಟ್ ಸಲ್ಲಿಸಿರುವ ಹಿನ್ನೆಲೆ ಉತ್ತರಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಕಾಂಗ್ರೆಸ್ ಮುಖಂಡರು ಜನಜಾಗೃತಿ ಪ್ರತಿಭಟನೆ ಹಾಗೂ ಸಭೆ ನಡೆಸುವ ಮೂಲಕ ಬಿಜೆಪಿ ಸರಕಾರ ಹಾಗೂ ಮುಖಂಡರ ವಿರುದ್ಧ ಹರಿಹಾಯ್ದಿದ್ದಾರೆ.

ಉತ್ತರಕನ್ನಡ (ಅ.7): ಪರೇಶ್ ಮೇಸ್ತಾ ಸಾವಿನ ಪ್ರಕರಣ ಸಂಬಂಧಿಸಿ ಸಿಬಿಐ "ಬಿ" ರಿಪೋರ್ಟ್ ಸಲ್ಲಿಸಿರುವ ಹಿನ್ನೆಲೆ ಉತ್ತರಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಕಾಂಗ್ರೆಸ್ ಮುಖಂಡರು ಜನಜಾಗೃತಿ ಪ್ರತಿಭಟನೆ ಹಾಗೂ ಸಭೆ ನಡೆಸುವ ಮೂಲಕ ಬಿಜೆಪಿ ಸರಕಾರ ಹಾಗೂ ಮುಖಂಡರ ವಿರುದ್ಧ ಹರಿಹಾಯ್ದಿದ್ದಾರೆ. ಹೊನ್ನಾವರದ ಸರ್ಕಲ್‌ನಿಂದ ತಾಲೂಕು ಆಡಳಿತದ ಸೌಧದವರೆಗೆ ಮೆರವಣಿಗೆ ನಡೆಸಿ, ಆಡಳಿತ ಸೌಧದ ಮುಂದೆಯೇ ಪ್ರತಿಭಟನೆ ನಡೆಸಿದರು. ಈ ವೇಳೆ ಮಾಜಿ ಶಾಸಕರಾದ ಶಾರದಾ ಶೆಟ್ಟಿ, ಮಾಂಕಾಳು ವೈದ್ಯ, ಸತೀಶ್ ಸೈಲ್, ಕಾಂಗ್ರೆಸ್ ಮುಖಂಡರಾದ ಐವನ್ ಡಿಸೋಜಾ, ಭೀಮಣ್ಣ ನಾಯ್ಕ್, ಮಂಜುನಾಥ್ ನಾಯ್ಕ್, ಜಗದೀಪ್ ತೆಂಗೇರಿ ಪ್ರತಿಭಟನೆಯಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಲ್ಲದೇ, ಬಿಜೆಪಿ ನಾಯಕರು ರಾಜೀನಾಮೆ ನೀಡುವಂತೆ ಒತ್ತಾಯಿಸಿದ್ದಾರೆ. ಬಿಜೆಪಿಯವರು ಹೆಣದ ಮೇಲೆ ರಾಜಕೀಯ ಮಾಡಿದ್ದಾರೆ. ಅಧಿಕಾರ ಪಡೆಯಲು ಬಿಜೆಪಿಯವರು ಪರೇಶ್ ಮೇಸ್ತಾನ ಸಾವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ತಾವು ಹೇಳಿದಂತೆ ಕೇಳುವ ಅಧಿಕಾರಿಗಳನ್ನು ಮಾತ್ರ ಬಿಜೆಪಿಯವರು ಜತೆಯಲ್ಲಿ ಇರಿಸಿಕೊಳ್ಳುತ್ತಾರೆ. ಸಿದ್ಧರಾಮಯ್ಯ ಸರಕಾರದಲ್ಲಿ ಪ್ರಕರಣ‌ ಸಿಒಡಿ ನೀಡಲು ನಿರ್ಧರಿಸಲಾಗಿತ್ತು. ಆದರೆ, ಬಿಜೆಪಿಯವರು ವಿರೋಧ ವ್ಯಕ್ತಪಡಿಸಿದ್ದರಿಂದ ಕೊನೆಗೆ ಸಿಬಿಐಗೆ ಒಪ್ಪಿಸಲಾಗಿತ್ತು. 

ಇದೀಗ ಸಿಬಿಯ ನೀಡಿದ ವರದಿ ಬಿಜೆಪಿಯವರ ಬಣ್ಣ ಬಯಲು ಮಾಡಿದೆ. ಪ್ರಸ್ತುತ, ಬಿಜೆಪಿಯ ಯಾವುದೇ ಮುಖಂಡರು ತುಟಿ ಬಿಚ್ಚುತ್ತಿಲ್ಲ. ಮಾನ ಮರ್ಯಾದೆಯಿದ್ದರೆ ಬಿಜೆಪಿಯವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ತೆರಳಲಿ. ಮುಂದಿನ ದಿನಗಳಲ್ಲಿ ಬಿಜೆಪಿಯವರು ನಡೆಸಿದ ಅನ್ಯಾಯಗಳ ವಿರುದ್ಧ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸಲಾಗುವುದು ಎಂದು ಸರಕಾರ ಹಾಗೂ ಬಿಜೆಪಿ ಮುಖಂಡರ ವಿರುದ್ಧ ಕಾಂಗ್ರೆಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆ ಬಳಿಕ ಹೊನ್ನಾವರ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದ ಕಾಂಗ್ರೆಸಿಗರು ಬಿಜೆಪಿ ಮುಖಂಡರ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ.

ಪರೇಶ್‌ ಮೇಸ್ತಾ ಸಾವು ಕೇಸ್‌: ಸಾವಿನ ಮನೆಯಲ್ಲಿ ಬಿಜೆಪಿ ರಾಜಕೀಯ ಆರೋಪ
ಮಂಗಳೂರು: ಪರೇಶ್‌ ಮೇಸ್ತಾ ಸಾವು ಪ್ರಕರಣದಲ್ಲಿ ಸಿಬಿಐ ತನಿಖೆ ಬಳಿಕ ಕೋರ್ಚ್‌ಗೆ ‘ಬಿ’ ವರದಿ ಸಲ್ಲಿಸಿದೆ. ಇದು ಸಾವಿನ ಮನೆಯಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದು ವಿಪಕ್ಷ ಉಪ ನಾಯಕ ಯು.ಟಿ.ಖಾದರ್‌ ವ್ಯಂಗ್ಯವಾಡಿದ್ದಾರೆ.

ಮಂಗಳೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಡ ಕುಟುಂಬದ ಮನೆಯ ಸಂಕಷ್ಟವನ್ನು ಬೀದಿಗೆ ತಂದು ರಾಜಕೀಯ ಮಾಡುವುದು ಬಿಜೆಪಿ ಚಿಂತನೆಯಾಗಿದೆ. ಈ ಬಗ್ಗೆ ಭಾರಿ ಮಾತನಾಡುತ್ತಿದ್ದ ಸಂಸದ ಅನಂತ ಕುಮಾರ್‌ ಹೆಗಡೆ ಈಗ ಎಲ್ಲಿಗೆ ಹೋಗಿದ್ದಾರೆ? ಸಾವನ್ನು ರಾಜಕೀಯವಾಗಿ ಬಳಸುವುದು ಬಿಜೆಪಿಯ ಚುನಾವಣಾ ತಂತ್ರವಾಗಿದೆ. ಪರೇಶ್‌ ಮೇಸ್ತಾ ಪ್ರಕರಣವನ್ನು ಸಿಬಿಐಗೆ ವಹಿಸಿದ್ದು ಕಾಂಗ್ರೆಸ್‌ ಸರ್ಕಾರ. ಆಗ ಬಿಜೆಪಿ ಮುಖಂಡರು ಇಲ್ಲ ಸಲ್ಲದ ಅರೋಪ ಮಾಡಿದ್ದರು ಎಂದರು.

ಯಾವುದೇ ಆರ್ಥಿಕ ಸಹಕಾರ ಸಿಕ್ಕಿಲ್ಲ, ಪ್ರಚಾರಕ್ಕಷ್ಟೇ ಬಳಸಿದ್ದಾರೆ: ಪರೇಶ್‌ ಮೇಸ್ತಾ ತಂದೆ ಅಸಮಾಧಾನ

ಇಲ್ಲ ಸಲ್ಲದ ಆರೋಪ, ಹೇಳಿಕೆ ನೀಡಿ ಅಧಿಕಾರಕ್ಕೆ ಬಂದ ಬಳಿಕ ಪರೇಶ್‌ ಮೇಸ್ತಾ ಅವರ ಬಡ ಕುಟುಂಬವನ್ನು ಬಿಜೆಪಿ ನಾಯರು ಮರೆತರು ಎಂದು ಖಾದರ್‌ ಕುಟುಕಿದ್ದಾರೆ.

ಪರೇಶ್‌ ಮೇಸ್ತಾ ಸಾವು ಕೇಸ್‌: ಸಾವಿನ ಮನೆಯಲ್ಲಿ ಬಿಜೆಪಿ ರಾಜಕೀಯ, ಖಾದರ್‌

ಇನ್ನು ಐದಾರು ತಿಂಗಳಲ್ಲಿ ಅಸೆಂಬ್ಲಿ ಚುನಾವಣೆ ಬರಲಿದೆ. ಈ ರೀತಿಯ ಸಾವಿನ ರಾಜಕೀಯ ನಡೆಸುವ ಪ್ರಯತ್ನ ಬಿಜೆಪಿಗರಿಂದ ನಡೆಯುತ್ತಿದೆ. ಜನರು ಬಿಜೆಪಿ ನಾಯಕರ ಬಗ್ಗೆ ಗಂಭೀರವಾಗಿ ಯೋಚಿಸಬೇಕಾಗಿದೆ. ಚುನಾವಣೆ ಸಂದರ್ಭದಲ್ಲಿ ಜನರು ಜಾಗೃತರಾಗಬೇಕಾಗಿದೆ ಎಂದು ಯು.ಟಿ.ಖಾದರ್‌ ಹೇಳಿದರು.

click me!