Haveri Road Accident: ಸೇತುವೆ ಮೇಲಿಂದ ಬಿದ್ದ VRL ಬಸ್‌: ಇಬ್ಬರ ಸಾವು

By Suvarna News  |  First Published Feb 12, 2022, 9:35 AM IST

*  ಹಾವೇರಿ ತಾಲೂಕಿನ ದೇವಗಿರಿ ಗ್ರಾಮದ ಬಳಿ ನಡೆದ ಅಪಘಾತ
*  ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಘಟನೆ
*  ಗಾಯಾಳುಗಳಿಗೆ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ


ಹಾವೇರಿ(ಫೆ.12):  ರಾಜ್ಯದಲ್ಲಿ(Karnataka) ನಡೆದ ಎರಡು ಪ್ರತ್ಯೇಕ ಅಪಘಾತದಲ್ಲಿ ಒಟ್ಟು ಆರು ಮಂದಿ ಸಾವನ್ನಪ್ಪಿ, 17 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. ವಿಆರ್‌ಎಲ್‌ ಬಸ್‌ವೊಂದು(VRL Bus) ಬ್ರಿಡ್ಜ್ ಮೇಲಿಂದ ಸರ್ವೀಸ್ ರಸ್ತೆಗೆ ಪಲ್ಟಿಯಾದ ಪರಿಣಾಮ ಬಸ್ ಚಾಲಕ ಸೇರಿ ಇಬ್ಬರು ಮೃತಪಟ್ಟು, ಹದಿನೈದು ಜನರಿಗೆ ಗಾಯಗಳಾದ ಘಟನೆ ಹಾವೇರಿ ತಾಲೂಕಿನ ದೇವಗಿರಿ ಗ್ರಾಮದ ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು(ಶನಿವಾರ) ನಡೆದಿದೆ. 

ವಿಆರ್‌ಎಲ್‌ ಸ್ಲೀಪರ್ ಕೋಚ್‌ ಬಸ್‌ ಬೆಂಗಳೂರಿನಿಂದ(Bengaluru) ಬೆಳಗಾವಿ(Belagavi) ಜಿಲ್ಲೆಯ ಗೋಕಾಕ್‌(Gokak) ನಗರಕ್ಕೆ ಹೊರಟಿತ್ತು ಎಂದು ತಿಳಿದು ಬಂದಿದೆ.  ಗಾಯಾಳುಗಳನ್ನ ಹಾವೇರಿ ನಗರದ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. 

Latest Videos

undefined

Parking Accident ಬ್ರೇಕ್ ಬದಲು ಆ್ಯಕ್ಸಲರೇಟರ್, ಯುವತಿ ಅಚಾತುರ್ಯಕ್ಕೆ 2ನೇ ಮಹಡಿಯಿಂದ ಕೆಳಕ್ಕೆ ಬಿತ್ತು ಕಾರು!

ಬ್ರಿಡ್ಜ್ ಮೇಲಿಂದ ಸರ್ವೀಸ್ ರಸ್ತೆ ಮೇಲೆ ಬಿದ್ದ ಬಸ್‌ನ್ನು ಕ್ರೇನ್‌ ಸಹಾಯದಿಂದ ಅಗ್ನಿಶಾಮಕ ದಳ ಹಾಗೂ ಪೊಲೀಸ್ ಸಿಬ್ಬಂದಿ‌ ಬಸ್ ಮೇಲೆತ್ತಿದ್ದಾರೆ. ಘಟನಾ ಸ್ಥಳಕ್ಕೆ ಡಿವೈಎಸ್ಪಿ ಶಂಕರ ಮಾರಿಹಾಳ, ಸಿಪಿಐ ನಾಗಮ್ಮ ಭೇಟಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಹಾವೇರಿ ಗ್ರಾಮೀಣ ಪೊಲೀಸ್(Police) ಠಾಣೆ ಪ್ರಕರಣ ದಾಖಲಾಗಿದೆ. 

ಅಪ​ಘಾತ: ಮೂವರ ಸಾವು

ಹೊಸಪೇಟೆ(Hosapete): ಮರಿಯಮ್ಮನಹಳ್ಳಿ ಪಟ್ಟಣದ ಸಮೀಪದ ಹಾರುವನಹಳ್ಳಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ನಡೆದ ಕಾರು ಅಪಘಾತದಲ್ಲಿ(Accident) ಮೂವರು ಸ್ಥಳದಲ್ಲೇ ಶುಕ್ರವಾರ ಮೃತಪಟ್ಟಿದ್ದಾರೆ.
ರಾಜಸ್ಥಾನ ಮೂಲದ ಕುಟುಂಬದ ಸದಸ್ಯರು ಕೇರಳದಲ್ಲಿ ದುಡಿಯಲು ಹೋಗಿದ್ದರು, ಕೇರಳದಿಂದ ಕೋಲ್ಕತ್ತಾಗೆ ತೆರಳುತ್ತಿದ್ದರು. ಕಾರಿನ ತಾಂತ್ರಿಕ ದೋಷದಿಂದ ಕಾರು ಪಲ್ಟಿಯಾಗಿದೆ. ಕಾರಿನಲ್ಲಿದ್ದ ಏಳು ಜನರಲ್ಲಿ ದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ಅಜಮಲ್‌ (35), ಸಲ್ಮಾ (30) ಮತ್ತು ರಹೀಜ್‌ (30) ಎಂದು ಗುರು​ತಿ​ಸ​ಲಾ​ಗಿದೆ. 

ಇಬ್ಬರು ಗಾಯಗೊಂಡಿದ್ದು, ಗಾಯಾಳುಗಳನ್ನು ಹೊಸಪೇಟೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಹಗರಿಬೊ​ಮ್ಮ​ನಹಳ್ಳಿ ಸಿಪಿಐ, ಮರಿಯಮ್ಮನಹಳ್ಳಿ ಪಟ್ಟಣದ ಪಿಎಸ್‌ಐ ಭೇಟಿ ನೀಡಿ ಪರಿಶೀಲಿಸಿದರು. ಮರಿಯಮ್ಮನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತಕ್ಕೆ ಅಪರಿಚಿತ ವ್ಯಕ್ತಿ ಬಲಿ

ರಾಣಿಬೆನ್ನೂರು: ವಾಹನ ಡಿಕ್ಕಿ ಹೊಡೆದ ಪರಿಣಾಮ ಅಪರಿಚಿತ ಪಾದಚಾರಿಯೊಬ್ಬ ಸ್ಥಳದಲ್ಲಿಯೇ ಮೃತ​ಪಟ್ಟಘಟನೆ ತಾಲೂಕಿನ ಕಮದೋಡ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಸಂಭವಿಸಿದ ಘಟನೆ ಫೆ.10 ರಂದು ನಡೆದಿತ್ತು. 

Road Accident: ವೇಗವಾಗಿ ಬಂದ ನೀರಿನ ಟ್ಯಾಂಕರ್‌ ಬೈಕಿಗೆ ಡಿಕ್ಕಿಯಾಗಿ ಮಾಜಿ ಪತ್ರಕರ್ತ ಸಾವು

ನಗರದಿಂದ ಹರಿಹರದ ಕಡೆ ಹೋಗುತ್ತಿದ್ದ ವಾಹನವೊಂದು ಪಾದ​ಚಾ​ರಿಗೆ ಡಿಕ್ಕಿ ಹೊಡೆ​ದಿದೆ. ಮೃತನು ಸುಮಾರು 35-40 ವರ್ಷದವರಾಗಿದ್ದು, ಗೋಧಿಗೆಂಪು ಮೈಬಣ್ಣ, ಕೋಲು ಮುಖ, ಡೊಣ್ಣ ಮೂಗು, ಕಪ್ಪು ಬಣ್ಣದ ಕಡ್ಡಿ ಮೀಸೆ, ತಲೆಯಲ್ಲಿ ಕಪ್ಪು ಕೂದಲು ಹೊಂದಿದ್ದಾರೆ. ಹಣೆಯ ಎರಡು ಬದಿ ಬೊಕ್ಕ ತಲೆ ಇದೆ. ಮೈ ಮೇಲೆ ತಿಳಿ ಹಸಿರು, ಬಿಳಿ ಬಣ್ಣ ಮಿಶ್ರಿತ ಚೌಕಳಿಯ ತುಂಬು ತೋಳಿನ ಶರ್ಟ್‌, ಬಿಳಿ ಬಣ್ಣದ ಬನಿಯನ್‌, ಕಂದು​ಬ​ಣ್ಣದ ಪ್ಯಾಂಟ್‌ ಧರಿಸಿದ್ದಾರೆ. ಎಡಗೈ ಮೊಣಕ್ಕೆ ಹತ್ತಿರ ಕೆಳಭಾಗದಲ್ಲಿ ಹಚ್ಚೆ ಕಲೆ ಇದೆ. ಈ ವ್ಯಕ್ತಿಯ ವಾರಸುದಾರರು ಯಾರದಾದರೂ ಇದ್ದಲ್ಲಿ ಹಲಗೇರಿ ಪೊಲೀಸ್‌ ಠಾಣೆ (08373-252333) ಸಂಪರ್ಕಿಸಬಹುದು. ಈ ಕುರಿತು ಹಲಗೇರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 

ಲಾರಿಗಳ ಮಧ್ಯೆ ಡಿಕ್ಕಿ: ಚಾಲಕ ಸಾವು

ಹುಬ್ಬಳ್ಳಿ: ನಗರದ ಹೊರವಲಯದ ಕುಂದಗೋಳ ಕ್ರಾಸ್‌ ಸಮೀಪದ ರಿಂಗ್‌ ರೋಡ್‌ನಲ್ಲಿ ಗದಗ ಮಾರ್ಗದಿಂದ ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ರಸ್ತೆಗೆ ಸಾಗುತ್ತಿದ್ದಾಗ ಒಂದು ಲಾರಿ ಇನ್ನೊಂದು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಲಾರಿ ಚಾಲಕ ಮೃತಪಟ್ಟ ಘಟನೆ ಫೆ.9 ರಂದು ನಡಿದಿದೆ. 

ಆಂಧ್ರದ ನುಥಲಾಪಡು ಗ್ರಾಮದ ಶೈಕ್‌ ಜಾನ್‌ ಸಾಹೇಬ(50) ಮೃತ ದುರ್ದೈವಿ. ಡಿಕ್ಕಿ ಹೊಡೆದ ರಭಸಕ್ಕೆ ಸೀಟಿನಲ್ಲಿ ಚಾಲಕನು ಮೃತಪಟ್ಟಿದ್ದಾರೆ. ಹೆದ್ದಾರಿಯಲ್ಲಿ ಬುಧವಾರ ಬೆಳಗಿನ ಜಾವ ಸಾಕಷ್ಟುಮಂಜು ಆವರಿಸಿದ್ದರಿಂದ ಸರಿಯಾಗಿ ರಸ್ತೆ ಕಾಣದೆ ಈ ಅಪಘಾತ ನಡೆದಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 
 

click me!