ಬೆಳಗಾವಿ: ಬ್ರೇಕ್‌ ಫೇಲ್‌, ಬೈಕ್‌ಗೆ ಲಾರಿ ಡಿಕ್ಕಿ, ಇಬ್ಬರ ದುರ್ಮರಣ

Published : Nov 16, 2022, 08:01 PM IST
ಬೆಳಗಾವಿ: ಬ್ರೇಕ್‌ ಫೇಲ್‌, ಬೈಕ್‌ಗೆ ಲಾರಿ ಡಿಕ್ಕಿ, ಇಬ್ಬರ ದುರ್ಮರಣ

ಸಾರಾಂಶ

ಬೆಳಗಾವಿ ಜಿಲ್ಲೆಯ ಖಾನಾಪೂರ ಪಟ್ಟಣದ ಹೊರವಲಯದಲ್ಲಿರುವ ರುಮೇವಾಡಿ ನಾಕಾ ಸಮೀಪ ನಡೆದ ಘಟನೆ 

ಖಾನಾಪುರ(ನ.16): ಬ್ರೇಕ್‌ ಫೇಲ್‌ ಆಗಿ ಚಾಲಕನ ನಿಯಂತ್ರಣ ಕಡೆದುಕೊಂಡ ಲಾರಿಯೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಇಬ್ಬರು ಮೃತಪಟ್ಟು, ಓರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಂಗಳವಾರ ಖಾನಾಪೂರ ಪಟ್ಟಣದ ಹೊರವಲಯದಲ್ಲಿರುವ ರುಮೇವಾಡಿ ನಾಕಾ ಸಮೀಪ ನಡೆದಿದೆ.

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಹಿಡಲಗಿ ಗ್ರಾಮದ ಪ್ರದೀಪ ಕೋಲಕಾರ (27) ಮತ್ತು ಬೆಳಗಾವಿ ನಗರದ ಮಜಗಾಂವ ನಿವಾಸಿ ಐಶ್ವರ್ಯ ಗುರಣ್ಣವರ (20) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪಾರಿಶ್ವಾಡ ಗ್ರಾಮದ ಸಂತೋಷ ಪಾಟೀಲ ಎಂಬುವರು ಗಾಯಗೊಂಡಿದ್ದಾರೆ. ಮೃತರ ಪೈಕಿ ಪ್ರದೀಪ, ಐಶ್ವರ್ಯ ಹಾಗೂ ಸಂತೋಷ ದ್ವಿಚಕ್ರ ವಾಹನದ ಮೂಲಕ ನಂದಗಡದಿಂದ ಖಾನಾಪುರಕ್ಕೆ ಬರುತ್ತಿದ್ದ ವೇಳೆ ಲಾರಿ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಇವರೆಲ್ಲರೂ ಒಂದೇ ಕುಟುಂಬದ ಸದಸ್ಯರು ಎನ್ನಲಾಗುತ್ತಿದೆ.

Bengaluru: ಸಿಲಿಕಾನ್‌ ಸಿಟಿಯಲ್ಲಿ ಗುಂಡಿ ಬಿದ್ದ ರಸ್ತೆಗೆ ಮತ್ತೊಂದು ಬಲಿ

ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ದ್ವಿಚಕ್ರ ವಾಹನ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಅವಘಡದಲ್ಲಿ ನೆಲಕ್ಕೆ ಅಪ್ಪಳಿಸಿ ಇಬ್ಬರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಓರ್ವನನ್ನು ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಅಪಘಾತಕ್ಕೆ ಕಾರಣವಾಗಿರುವ ಚಾಲಕ ಟಿಪ್ಪರ್‌ ಅನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಸ್ಥಳಕ್ಕೆ ಖಾನಾಪುರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
 

PREV
Read more Articles on
click me!

Recommended Stories

ಕೆನರಾ ಬ್ಯಾಂಕ್ ಗ್ರಾಹಕರಿಗೆ ₹3 ಕೋಟಿ ಪಂಗನಾಮ; ಗ್ರಾಹಕರ ಹೆಸರಲ್ಲಿ ಸಾಲ ಪಡೆದು ಮ್ಯಾನೇಜರ್ ಎಸ್ಕೇಪ್!
Bengaluru: ಹೊಸ ವರ್ಷದ ಪಾರ್ಟಿಗೆ KORA ಕಡೆ ಹೋಗೋ ಪ್ಲ್ಯಾನ್‌ ಇದ್ಯಾ, ಸಂಚಾರ ಬದಲಾವಣೆ ನೋಡಿಕೊಳ್ಳಿ..