ಸೋಯಾಬೀನ್ ಉತ್ಪನ್ನ ಖರೀದಿ ಕೇಂದ್ರ ಪ್ರಾರಂಭ: ಜಿಲ್ಲಾಧಿಕಾರಿ ಘೋಷಣೆ

By Sathish Kumar KH  |  First Published Nov 16, 2022, 7:50 PM IST

ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ನ್ಯಾಯೋಚಿತ ಸರಾಸರಿ ಗುಣಮಟ್ಟ (ಎಫ್.ಎ.ಕ್ಯೂ) ಮಾನದಂಡದ ಸೋಯಾಬೀನ್ ಉತ್ಪನ್ನವನ್ನು ಪ್ರತಿ ಕ್ವಿಂಟಲ್‍ಗೆ 4,300 ರೂ.ನಂತೆ ಖರೀದಿಸಲು ಧಾರವಾಡ, ಉಪ್ಪಿನಬೇಟಗೇರಿ ಮತ್ತು ಕಲಘಟಗಿಯಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ತಿಳಿಸಿದ್ದಾರೆ.



ಧಾರವಾಡ (ನ.16):  2022-23ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ನ್ಯಾಯೋಚಿತ ಸರಾಸರಿ ಗುಣಮಟ್ಟ (ಎಫ್.ಎ.ಕ್ಯೂ) ಮಾನದಂಡದ ಸೋಯಾಬೀನ್ ಉತ್ಪನ್ನವನ್ನು ಪ್ರತಿ ಕ್ವಿಂಟಲ್‍ಗೆ 4,300 ರೂ.ನಂತೆ ಧಾರವಾಡ ಜಿಲ್ಲೆಯ ರೈತರಿಂದ ಮಾತ್ರ ಖರೀದಿಸಲು ಸರ್ಕಾರದಿಂದ ಧಾರವಾಡ ಉಪ್ಪಿನಬೇಟಗೇರಿ ಮತ್ತು ಕಲಘಟಗಿಯಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಜಿಲ್ಲಾ ಟಾಸ್ಕ್‍ಪೋರ್ಸ್ ಸಮಿತಿಯ ಅಧ್ಯಕ್ಷ ಹಾಗೂ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು ಎಫ್.ಎ.ಕ್ಯೂ (FAQ)ಗುಣಮಟ್ಟದ ಸೋಯಾಬೀನ್ ಉತ್ಪನ್ನವನ್ನು ಖರೀದಿಸಲು ರೈತರಿಂದ ಅವರ ಆಧಾರ ಗುರುತಿನ ಚೀಟಿ (Adhar card)ಯ ಮೂಲ ಪ್ರತಿ (ಪರಿಶೀಲಿಸಿದ ನಂತರ ಮರಳಿಸಲಾಗುವುದು) ಹಾಗೂ ನಕಲು ಪ್ರತಿ ಪಹಣಿ ಪತ್ರಿಕೆಯಲ್ಲಿರುವ ಹೆಸರಿನ ರೈತರ ಆಧಾರ ಸಂಖ್ಯೆ ಜೋಡನೆಗೊಂಡ ಬ್ಯಾಂಕ್ ಖಾತೆ ಪಾಸ್ ಪುಸ್ತಕದ ನಕಲುಪ್ರತಿ ಪಡೆಯಲಾಗುತ್ತದೆ. ಎಫ್.ಎ.ಕ್ಯೂ ಗುಣಮಟ್ಟದ ಸೋಯಾಬೀನ್ ಉತ್ಪನ್ನ ಹೊಂದಿದ ರೈತರ ನೋಂದಣಿಯನ್ನು (Farmer Registration) ಈ ಆದೇಶ ಹೊರಡಿಸಿದ 45 ದಿನಗಳ ವರೆಗೆ ಅಂದರೆ ಡಿ.23 ರವರೆಗೆ ಹಾಗೂ ಉತ್ಪನ್ನ ಖರೀದಿ ಅವಧಿಯನ್ನು 90 ದಿನಗಳ ವರೆಗೆ ಅಂದರೆ 2023 ರ ಫೆ.6ರವರೆಗೆ ನಿಗಧಿ ಪಡಿಸಲಾಗಿದೆ. ನೋಂದಣಿ ಕಾರ್ಯದ ಜೋತೆಗೆ ಖರೀದಿ (purchase) ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Tap to resize

Latest Videos

ಹೆಸರು ಖರೀದಿ ವಿಳಂಬ: ತಹಸೀಲ್ದಾರ್‌ ಕಚೇರಿಗೆ ರೈತರ ಮುತ್ತಿಗೆ

ಸೋಯಾಬೀನ್ ಖರೀದಿ ಕೇಂದ್ರಗಳನ್ನು ಧಾರವಾಡ ಎಪಿಎಂಸಿಯ (APMC) ಮುಖ್ಯ ಮಾರುಕಟ್ಟೆ ಪ್ರಾಂಗಣದ ಧಾರವಾಡ (Dharawad)ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘ (ಮೊ: 9916259625), ಉಪ್ಪಿನ ಬೇಟಗೇರಿಯ (Uppina Betageri) ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ (ಮೊ: 9620048221) ಮತ್ತು ಕಲಘಟಗಿ (Kalaghatagi)ಎಪಿಎಂಸಿಯ ಮುಖ್ಯ ಮಾರುಕಟ್ಟೆ ಪ್ರಾಂಗಣದ ಕಲಘಟಗಿ ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘ (ಮೊ: 7259216552) ಗಳಲ್ಲಿ ಆರಂಭಿಸಲಾಗಿದೆ. ಸರ್ಕಾರಿ ರಜೆ ದಿನಗಳನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ಖರೀದಿ ಕೇಂದ್ರಗಳಲ್ಲಿ ಎಫ್.ಎ.ಕ್ಯೂ ಗುಣಮಟ್ಟದ ಸೋಯಾಬೀನ್ ಉತ್ಪನ್ನ ಖರೀದಿಸಲಾಗುವುದು.

ಬಾಗಿಲು ಮುಚ್ಚಿದ ಹೆಸರು ಖರೀದಿ ಕೇಂದ್ರಗಳು!

ಯಾವುದೆ ಸಂದರ್ಭದಲ್ಲಿ ರೈತರು ಮಧ್ಯವರ್ತಿಗಳ ಮೊರೆ ಹೊಗಬಾರದು ರೈತರೆ ನೇರವಾಗಿ ಇದರ ಉಪಯೋಗ ಪಡೆದುಕೊಳ್ಳಬೇಕು. ಯಾವುದೇ ಸಮಸ್ಯೆಗಳಿದ್ದಲ್ಲಿ ಧಾರವಾಡ ಮತ್ತು ಕಲಘಟಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿಗಳನ್ನು, ಶಾಖಾ ವ್ಯವಸ್ಥಾಪಕರನ್ನು ಅಥವಾ ಕರ್ನಾಟಕ ರಾಜ್ಯ ಸಹಕಾರಿ ಮಾರಾಟ ಮಂಡಳದ ಹುಬ್ಬಳ್ಳಿ ಶಾಖೆ (0836-2374837)ಯನ್ನು ಸಂಪರ್ಕಿಸಬಹುದು. ಜಿಲ್ಲೆಯ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

click me!