Hassan: ವೀಕೆಂಡ್‌ಗೆ ಹೊರಟಿದ್ದ ಸ್ನೇಹಿತರ ಕಾರು ಪಲ್ಟಿ, ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸಾವು!

By Santosh Naik  |  First Published Dec 7, 2024, 7:24 PM IST

ವೀಕೆಂಡ್‌ ಟ್ರಿಪ್‌ನಲ್ಲಿ ಮಂಗಳೂರಿಗೆ ತೆರಳುತ್ತಿದ್ದ ಐವರು ಇಂಜಿನಿಯರಿಂಗ್‌ ವಿದ್ಯಾರ್ಥಿಗಳ ಕಾರು ಹಾಸನದಲ್ಲಿ ಪಲ್ಟಿಯಾಗಿ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಮೂವರು ಗಾಯಗೊಂಡಿದ್ದು, ಒಬ್ಬಾತನ ಸ್ಥಿತಿ ಗಂಭೀರವಾಗಿದೆ.


ಹಾಸನ (ಡಿ.7): ವೀಕೆಂಡ್‌ ಟ್ರಿಪ್‌ಗಾಗಿ ಮಂಗಳೂರಿಗೆ ಹೊರಟಿದ್ದ ಐವರು ಸ್ನೇಹಿತರಿಗೆ ಟ್ರಿಪ್‌ ದಾರುಣವಾಗಿ ಪರಿಣಮಿಸಿದೆ. ಐವರು ಇಂಜಿನಿಯರಿಂಗ್‌ ವಿದ್ಯಾರ್ಥಿಗಳಿದ್ದ ಕಾರು ಪಲ್ಟಿಯಾಗಿ ಇಬ್ಬರು ಸ್ಥಳದಲ್ಲಿಯೇ ಸಾವು ಕಂಡಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ ಅನ್ನೋದು ಪ್ರಾಥಮಿಕವಾಗಿ ಗೊತ್ತಾಗಿದೆ. ಬದುಕುಳಿದ ಮೂವರ ಪೈಕಿ, ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದಾರೆ. ಇನ್ನೊಬ್ಬನ ಸ್ಥಿತಿ ಗಂಭೀರವಾಗಿದೆ.ಸ 19 ವರ್ಷದ ಸೂರಜ್‌ ಹಾಗೂ 18 ವರ್ಷದ ಅನೀಶ್‌ ಮೃತ ವಿದ್ಯಾರ್ಥಿಗಳು. ಹಾಸನದ ಚೆನ್ನರಾಯಪಟ್ಟಣದ ಗೌಡಗೆರೆ ಸಮೀಪ ಘಟನೆ ನಡೆದಿದೆ.

KA-17-Z-2236 ನಂಬರ್‌ನ ಇಕೋ‌ ಸ್ಪೋರ್ಟ್ ಕಾರಿನಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ಐವರು ವಿದ್ಯಾರ್ಥಿಗಳು ತೆರಳಿದ್ದರು. ಅತಿವೇಗದಲ್ಲಿದ್ದ ಕಾರು, ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಪಲ್ಟಿಯಾಗಿದೆ. 18 ವರ್ಷದ ಭುವನ್  ಎನ್ನುವವನ ಸ್ಥಿತಿ ಗಂಭೀರವಾಗಿದ್ದು, ಆತನನ್ನು ಬಿಜಿಎಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. 19 ವರ್ಷದ ವಿಶಾಲ್‌ ಹಾಗೂ 18 ವರ್ಷದ ಪೂರ್ಣಚಂದ್ರ ಸಣ್ಣಪುಟ್ಟ ಗಾಯದೊಂದಿಗೆ ಪಾರಾಗಿದ್ದಾರೆ.

ನೆರವಿಗೆ ಧಾವಿಸಿದ ಶಾಸಕ: ಘಟನೆ ನಡೆದ  ಸುದ್ದಿ ತಿಳಿಯುತ್ತಿದ್ದಂತೆ ಚನ್ನರಾಯಪಟ್ಟಣ ಕಡೆ ತೆರಳುತ್ತಿದ್ದ ಶಾಸಕ ಸಿ.ಎನ್.ಬಾಲಕೃಷ್ಣ ನೆರವಿಗೆ ಧಾವಿಸಿದ್ದಾರೆ. ಅಪಘಾತದ ಸುದ್ದಿ ತಿಳಿದು ಕಾರು ನಿಲ್ಲಿಸಿದ ಶಾಸಕ ತಮ್ಮ ಕಾರು ನಿಲ್ಲಿಸಿದ್ದಾರೆ. ಗಾಯಾಳುಗಳನ್ನು ಚನ್ನರಾಯಪಟ್ಟಣ ತಾಲ್ಲೂಕು ಆಸ್ಪತ್ರೆಗೆ ರವಾನಿಸಿ ಮಾನವೀಯತೆ‌ ಮೆರೆದಿದ್ದಾರೆ.

8 ಗಂಟೆ ಮೊಬೈಲ್‌ ಬಳಸದ ಕಾರಣಕ್ಕೆ 1 ಲಕ್ಷ ರೂಪಾಯಿ ಗೆದ್ದ ಮಹಿಳೆ!

Tap to resize

Latest Videos

ಇಬ್ಬರು ಗಾಯಾಳುಗಳಿಗೆ ಚನ್ನರಾಯಪಟ್ಟಣ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವೀಕೆಂಡ್ ಹಿನ್ನೆಲೆಯಲ್ಲಿ ಐವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಮಂಗಳೂರು ಕಡೆಗೆ ಪ್ರಯಾಣ ಮಾಡುತ್ತಿದ್ದರು. ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ  ಮಾಡಿದ್ದು, ಚನ್ನರಾಯಪಟ್ಟಣ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಎಲ್ಲಾ ವಿದ್ಯಾರ್ಥಿಗಳು ಬೆಂಗಳೂರು ಮೂಲದವರಾಗಿದ್ದು,  ಗಾಯಳುಗಳು ಜೊತೆಗೆ ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಲು ಶಾಸಕ ಸಿ.ಎನ್.ಬಾಲಕೃಷ್ಣ ಸಹಾಯ ಮಾಡಿದ್ದಾರೆ.

ಅಮ್ಯೂಸ್‌ಮೆಂಟ್ ಪಾರ್ಕ್‌ನ ಫನ್‌ ರೈಡ್‌ ವೇಳೆ ಮಗನ ಸಾವು, ಪೋಷಕರಿಗೆ ಸಿಕ್ತು 2624 ಕೋಟಿ ಪರಿಹಾರ!

click me!