ಶಿವಮೊಗ್ಗ: ಎರಡು ದಿನ SBI ಸಾಲಮೇಳ

By Kannadaprabha News  |  First Published Sep 7, 2019, 8:57 AM IST

SBI ವತಿಯಿಂದ ಶಿವಮೊಗ್ಗದಲ್ಲಿ ಎರಡು ದಿನಗಳ ಸಾಲಮೇಳ ನಡೆಯಲಿದೆ. ಈ ಸಾಲ ಮೇಳದಲ್ಲಿ ಹಲವಾರು ರಿಯಾಯಿತಿ ಕೊಡುಗೆಗಳನ್ನು ಬ್ಯಾಂಕ್‌ ಪ್ರಕಟಿಸಿದೆ. ಗೃಹ ಸಾಲಕ್ಕೆ ಸಂಸ್ಕರಣಾ ಶುಲ್ಕದಲ್ಲಿ ಶೇ. 50 ರಷ್ಟು ರಿಯಾಯಿತಿ ಸೇರಿ ಹಲವು ಸೌಲಭ್ಯ ಗ್ರಾಹಕರಿಗೆ ಲಭ್ಯವಾಗಲಿದೆ.


ಶಿವಮೊಗ್ಗ(ಸೆ.07): ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ವತಿಯಿಂದ ಸೆ. 7ರ ಶನಿವಾರದಿಂದ ಎರಡು ದಿನಗಳ ಕಾಲ ನಗರದ ಬಿ. ಎಚ್‌. ರಸ್ತೆ ಶಾಖೆಯಲ್ಲಿ ಗೃಹಸಾಲ ಮತ್ತು ವಾಹನ ಸಾಲಮೇಳ ಆಯೋಜಿಸಲಾಗಿದೆ.

ಸೆ. 7ರಂದು ಬೆಳಗ್ಗೆ 9.30 ಗಂಟೆಗೆ ಎಸ್‌ಬಿಐ ಡಿಜಿಎಂ ಇಂದ್ರಾನಿಲ್‌ ಬಾಂಜಾ ಸಾಲ ಮೇಳಕ್ಕೆ ಚಾಲನೆ ನೀಡಲಿದ್ದಾರೆ. ಬ್ಯಾಂಕ್‌ನ ವಿಭಾಗಿಯ ಪ್ರಬಂಧಕ ಟಿ. ರಾಮರಾವ್‌, ಶಾಖಾ ಪ್ರಬಂಧಕರಾದ ಸುಂದರೇಶ್‌, ಆರ್‌ಎಸಿಪಿಸಿ ಸಹಾಯಕ ಮಹಾಪ್ರಬಂಧಕ ಸುನಿಲ್‌ ಪರಂಜಾಪೆ ಭಾಗಿಯಾಗಲಿದ್ದಾರೆ. ಈ ಸಾಲ ಮೇಳದಲ್ಲಿ ಹಲವಾರು ರಿಯಾಯಿತಿ ಕೊಡುಗೆಗಳನ್ನು ಬ್ಯಾಂಕ್‌ ಪ್ರಕಟಿಸಿದೆ.

Tap to resize

Latest Videos

ಶಿವಮೊಗ್ಗ: ಆರ್ಥಿಕ ಹಿಂಜರಿತಕ್ಕೆ ಗಾರ್ಮೆಂಟ್‌ ಉದ್ಯಮ ಕಂಪನ

ಸೌಲಭ್ಯಗಳು:

ಗೃಹ ಸಾಲಕ್ಕೆ ಸಂಸ್ಕರಣಾ ಶುಲ್ಕದಲ್ಲಿ ಶೇ. 50 ರಷ್ಟುರಿಯಾಯಿತಿ, ಕಾರಿನ ಸಾಲಕ್ಕೆ ಶೂನ್ಯ ಸಂಸ್ಕರಣಾ ಶುಲ್ಕ, ಕಡಿಮೆ ಬಡ್ಡಿದರ, ತ್ವರಿತ ಅನುಮೋದನೆ ಮತ್ತು ಪೂರ್ವಪಾವತಿಗೆ ಯಾವುದೇ ದಂಡವಿರುವುದಿಲ್ಲ ಎಂದು ಬ್ಯಾಂಕಿನ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಕೂಡ ಈ ಸಾಲ ಮೇಳವನ್ನು ಆಯೋಜಿಸಲಾಗಿದ್ದು, ಈ ಸಾಲ ಮೇಳದ ಸೌಲಭ್ಯವನ್ನು ಎಲ್ಲ ಗ್ರಾಹಕರು ಪಡೆದುಕೊಳ್ಳಬೇಕು ಎಂದು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ವಿಭಾಗಿಯ ಪ್ರಬಂಧಕ ಟಿ. ರಾಮರಾವ್‌ ತಿಳಿಸಿದ್ದಾರೆ.

ಶಿವಮೊಗ್ಗ: ಎಣ್ಣೆ ಪಾರ್ಟಿ ಹಿನ್ನೆಲೆ ಗಾಂಧಿ ಪಾರ್ಕ್‌ನಲ್ಲಿ ತಪಾಸಣೆ

click me!