ಕಾವೇರಿ ನದಿ ತಟದಲ್ಲಿ ಸಸಿ ನೆಡಲು ನೀಲನಕ್ಷೆ

By Kannadaprabha NewsFirst Published Sep 7, 2019, 8:22 AM IST
Highlights

ಮಂಡ್ಯ ಜಿಲ್ಲೆಯ ಕಾವೇರಿ ನದಿ ಸೇರಿ ಇತರ ಉಪನದಿಗಳ ತಟದಲ್ಲಿ ಗಿಡನೆಡುವ ಬಗ್ಗೆ ನೀಲನಕ್ಷೆ ತಯಾರಿಸಲು ಮಂಡ್ಯ ಜಿಲ್ಲಾಡಳಿತ ನಿರ್ಧರಿಸಿದೆ. ಕಾವೇರಿ ನದಿಯೂ ಸೇರಿದಂತೆ ಉಪನದಿಗಳ ತಟದಲ್ಲಿ ಹಾಗೂ ಕೋರಿಕೆ ಇರುವ ರೈತರ ಜಮೀನುಗಳಲ್ಲಿ ಸಸಿಗಳನ್ನು ನೆಟ್ಟು ಮರಗಳನ್ನು ಬೆಳೆಸಲು ಜಿಲ್ಲಾಡಳಿತ ನೀಲನಕ್ಷೆಯೊಂದನ್ನು ತಯಾರಿಸಲಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ತಿಳಿಸಿದ್ದಾರೆ.

ಮಂಡ್ಯ(ಸೆ.07): ಮಂಡ್ಯ ಜಿಲ್ಲೆಯ ಕಾವೇರಿ ನದಿಯೂ ಸೇರಿದಂತೆ ಉಪನದಿಗಳ ತಟದಲ್ಲಿ ಹಾಗೂ ಕೋರಿಕೆ ಇರುವ ರೈತರ ಜಮೀನುಗಳಲ್ಲಿ ಸಸಿಗಳನ್ನು ನೆಟ್ಟು ಮರಗಳನ್ನು ಬೆಳೆಸುವ ಅಭಿಯಾನಕ್ಕೆ ಜಿಲ್ಲಾಡಳಿತ ನೀಲನಕ್ಷೆಯೊಂದನ್ನು ತಯಾರಿಸಲಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ತಿಳಿಸಿದ್ದಾರೆ.

ಸದ್ಗುರು ಜಗ್ಗಿ ವಾಸುದೇವ್‌ ಅವರ ಕಾವೇರಿ ಕೂಗು ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದ ಜಿಲ್ಲಾಧಿಕಾರಿಗಳು, ಅರಣ್ಯವನ್ನು ರಕ್ಷಣೆ ಮಾಡಲೇಬೇಕು ಎಂಬ ಕೂಗಿಗೆ ನಮ್ಮ ಸ್ಪಂದನೆ ಸದಾ ಇರುತ್ತದೆ. ಜಿಲ್ಲಾಡಳಿತ ಈಗಾಗಲೇ ಈ ಸಂಬಂಧ ನೀಲನಕ್ಷೆಯನ್ನು ತಯಾರಿಸುತ್ತಿದೆ ಎಂದು ತಿಳಿಸಿದ್ದಾರೆ.
KRS ಒಳಹರಿವು ಹೆಚ್ಚಳ: ತ. ನಾಡಿಗೆ ಮತ್ತೆ 43 ಸಾವಿರ ಕ್ಯುಸೆಕ್ ನೀರು

ಉದ್ಯೋಗ ಖಾತ್ರಿ ಯೋಜನೆಯಡಿ ಗಿಡಗಳ ಜವಬ್ದಾರಿ ನೀಡುವುದು:

ಮಂಡ್ಯ ಜಿಲ್ಲೆಯಲ್ಲಿ ಕಾವೇರಿ, ಶಿಂಷಾ, ಲಕ್ಷ್ಮಣ ತೀರ್ಥ, ಪಶ್ಚಿಮವಾಹಿನಿ ಸೇರಿದಂತೆ ಎಲ್ಲಾ ನದಿಗಳ ಅಕ್ಕಪಕ್ಕದಲ್ಲಿ ಸಸಿಗಳನ್ನು ನೆಟ್ಟು ಮರ ಬೆಳೆಸುವ ಯೋಜನೆಗೆ ಕಾರ್ಯಕ್ರಮ ರೂಪಿಸಲಾಗಿದೆ. ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಮೂರು ವರ್ಷಗಳ ಕಾಲ ಆ ಸಸಿಗಳನ್ನು ಕಾಪಾಡಿ ಬೆಳೆಸುವ ಹೊಣೆಗಾರಿಕೆಯನ್ನು ನೀಡಲಾಗುವುದು. ನಿರ್ವಹಣೆಗಾಗಿ ಅಗತ್ಯ ವೆಚ್ಚ ಕೊಡಲಾಗುವುದು. ರೈತರು ತಮ್ಮ ಸ್ವಂತ ಜಮೀನಿನಲ್ಲಿ ಅರಣ್ಯ ಕೃಷಿ ಮಾಡಿದರೆ ಸರ್ಕಾರದ ಯೋಜನೆಯಲ್ಲಿರುವ ಸಬ್ಸಿಡಿ ಹಣವನ್ನು ನೀಡಲು ಕೃಷಿ ಮತ್ತು ತೋಟಗಾರಿಕೆ ಇಲಾಖೆ ಬದ್ಧವಾಗಿವೆ ಎಂದು ಹೇಳಿದರು.

ಡಿಕೆಶಿ ಬಂಧನ ವಿರೋಧಿಸಿ ಬೀದಿಗಳಿದ ಜೆಡಿಎಸ್..!

click me!