ಪತ್ನಿಯೇ ಪ್ರಿಯಕರ ಜೊತೆ ಸೇರಿ ಪತಿಯನ್ನ ಕೊಂದ ಪ್ರಕರಣ: ಆರೋಪಿಗಳ ಬಂಧನ

Kannadaprabha News   | Asianet News
Published : Apr 09, 2020, 02:02 PM IST
ಪತ್ನಿಯೇ ಪ್ರಿಯಕರ ಜೊತೆ ಸೇರಿ ಪತಿಯನ್ನ ಕೊಂದ ಪ್ರಕರಣ: ಆರೋಪಿಗಳ ಬಂಧನ

ಸಾರಾಂಶ

ಅನೈತಿಕ ಸಂಬಂಧ: ಕೊಲೆ ಆರೋಪಿಗಳ ಬಂಧನ| ದೂರು ನೀಡಿದ ಮೇರೆಗೆ ತನಿಖೆ ಕೈಗೊಂಡ ಪೊಲೀಸರು| ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಮಾಣಿಕವಾಡಿ ಗ್ರಾಮದಲ್ಲಿ ನಡೆದ ಘಟನೆ|

ಗೋಕಾಕ(ಏ.09): ಅನೈತಿಕ ಸಂಬಂಧ ಹಿನ್ನೆಲೆ ಪತ್ನಿಯೇ ಪ್ರಿಯಕರ ಜೊತೆ ಸೇರಿ ಪತಿಯನ್ನ ದಾರುಣವಾಗಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಗೋಕಾಕ ಪೊಲೀಸರು ಯಶಸ್ವಿಯಾಗಿದ್ದಾರೆ.

ಕೊಲೆಯಾದ ಅಪ್ಪಣ್ಣ ಸಂಭಾಜಿ ಸನದಿ ಅವರ ಪತ್ನಿ ಯಲ್ಲವ್ವ ಸನದಿ (31) ಹಾಗೂ ತಾಲೂಕಿನ ಮೆಳವಂಕಿ ಗ್ರಾಮದ ಆಕೆಯ ಪ್ರಿಯಕರ ವಿರೂಪಾಕ್ಷಿ ಚಂದ್ರಯ್ಯ ಮಠಪತಿ ಬಂಧಿತರು. ಅಪ್ಪಣ್ಣನ ಪತ್ನಿ ಮಾಣಿಕವಾಡಿ ಗ್ರಾಮದ ಯಲ್ಲವ್ವ ಅಪ್ಪಣ್ಣ ಸನದಿ (31) ಹಾಗೂ ತಾಲೂಕಿನ ಮೆಳವಂಕಿ ಗ್ರಾಮದ ಆಕೆಯ ಪ್ರಿಯಕರ ವಿರೂಪಾಕ್ಷಿ ಚಂದ್ರಯ್ಯ ಮಠಪತಿ ಇವರಿಬ್ಬರು ಕಳೆದ ಕೆಲವು ವರ್ಷಗಳಿಂದ ಅನೈತಿಕ ಸಂಬಂಧ ಹೊಂದಿದ್ದು, ಯಲ್ಲವ್ವ ಹಾಗೂ ವಿರೂಪಾಕ್ಷ ಇಬ್ಬರೂ ನಗರದ ಖಾಸಗಿ ಕಂಪನಿಯ ಶೋರೂಂನಲ್ಲಿ ಕಾರ್ಯನಿರ್ವಹಿಸತ್ತಿದ್ದರು. 

ಉತ್ತರ ಕನ್ನಡ: ಅಕ್ಕನ ಮಗಳನ್ನೇ ಕೊಂದ ತಂಗಿ

ಯಲ್ಲವ್ವ ಹಾಗೂ ವಿರೂಪಾಕ್ಷ ನಡುವಿನ ಅನೈತಿಕ ಸಂಬಂಧ ಪತಿ ಅಪ್ಪಣ್ಣನಿಗೆ ತಿಳಿದು ಪತ್ನಿ ಯಲ್ಲವ್ವನ ಮೇಲೆ ಹೊಡಿಬಡಿ ಮಾಡುತ್ತಿದ್ದನ್ನು ಮನಗಂಡ ಯಲ್ಲವ್ವ ಹಾಗೂ ವಿರೂಪಾಕ್ಷಿ ಅಪ್ಪಣ್ಣನನ್ನು ಕೊಲೈಗೈಯ್ಯಲು ತೀರ್ಮಾನಿಸಿ, ಮಾ.24ರಂದು ತಾಲೂಕಿನ ಬಿಲಕುಂದಿ ಗ್ರಾಮದ ದುಂಡಪ್ಪ ಸಿದ್ದಪ್ಪ ಕಪರಟ್ಟಿಅವರ ಹೊಲಕ್ಕೆ ಅಪ್ಪಣ್ಣನ್ನು ಕರೆದೊಯ್ದು ವಿರೂಪಾಕ್ಷಿ ಹಾಗೂ ಯಲ್ಲವ್ವ ಅಪ್ಪಣ್ಣನ ಮರ್ಮಾಂಗಕ್ಕೆ ಒದ್ದು, ಕತ್ತು ಹಿಸುಕಿ ಕೊಲೆಗೈದು. ಕೊಲೆಯ ಸಾಕ್ಷಿ ನಾಶಪಡಿಸಿ, ಪ್ರಕರಣ ದಾರಿತಪ್ಪಿಸಲು ಬಿಲಕುಂದಿ ಗ್ರಾಮದಿಂದ ಮೋಟಾರು ಸೈಕಲ್‌ ಮೇಲೆ ತೆಗೆದುಕೊಂಡು ನಗರದ ಸಮೀಪದ ಶೆಟ್ಟೆವನ ತೋಟದ ಬಳಿ ಘಟಪ್ರಭಾ ನದಿಯಲ್ಲಿ ಮೃತ ಅಪ್ಪಣ್ಣನ ಬಟ್ಟೆಬಿಚ್ಚಿ ಎಸೆದಿದ್ದರು. ಅಲ್ಲದೇ ಇದೇ ಸಮಯದಲ್ಲಿ ಅಪ್ಪಣ್ಣನ ಸ್ನೇಹಿತ ರವಿ ಎಂಬಾತನನ್ನು ಹಣಕ್ಕಾಗಿ ಕರೆತಂದಿದ್ದು, ಈ ಕೊಲೆಯ ಬಗ್ಗೆ ಎಲ್ಲಾದರೂ ಬಾಯ್ಬಿಟ್ಟಲ್ಲಿ ನಿನ್ನನ್ನು ಸಹ ಕೊಲೆ ಮಾಡುವುದಾಗಿ ರವಿಗೆ ಬೇದರಿಕೆಯೊಡ್ಡಿದ್ದಾರೆ ಎನ್ನಲಾಗಿದೆ.

ವರ​ದ​ಕ್ಷಿ​ಣೆ​ಗಾಗಿ ಮಹಿಳೆ ಕತ್ತು ಹಿಸುಕಿ ನೇಣು ಬಿಗಿದು ಕೊಲೆಗೈದ ಪಾಪಿಗಳು!

ಮಾ.24ರಂದು ರಾತ್ರಿಯೇ ಯಲ್ಲವ್ವ ನಗರ ಠಾಣೆಯಲ್ಲಿ ಅಪ್ಪಣ್ಣ ಕಾಣೆಯಾಗಿರುವುದಾಗಿ ದೂರು ನೀಡಿದ್ದಳು, ನಂತರ 26ರಂದು ಘಟಪ್ರಭಾ ನದಿಯಲ್ಲಿ ಮೃತ ಅಪ್ಪಣ್ಣನ ಶವ ನೀರಿನಲ್ಲಿ ತೇಲುತ್ತಿರುವುದನ್ನು ಗಮಿನಸಿದ ಪೊಲೀಸರು ಶವ ಹೊರಕ್ಕೆ ತೆಗೆದಿದ್ದಾರೆ. ನಂತರ ತನಿಖೆ ನಡೆಸಿದ್ದ ಪೊಲೀಸರಿಗೆ ಯಲ್ಲವ್ವ ಹಾಗೂ ವಿರೂಪಾಕ್ಷ ನಡುವಿನ ಅನೈತಿಕ ಸಂಬಂಧದ ಹಿನ್ನೆಲೆ ಅಪ್ಪಣ್ಣನ ಕೊಲೆ ಮಾಡಿರುವುದಾಗಿ ಕೊಲೆಗೀಡಾದ ಅಪ್ಪಣ್ಣನ ಸ್ನೇಹಿತ, ಖಂಡ್ರಟ್ಟಿ ಗ್ರಾಮದ ರವಿ ಬಡಿಗವಾಡ ದೂರು ನೀಡಿದ ಹಿನ್ನೆಲೆ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
 

PREV
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!