ಬಿರುಗಾಳಿ ಸಹಿತ ಮಳೆಗೆ 40ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಅಪಾರ ಕೃಷಿ ಹಾನಿ

Kannadaprabha News   | Asianet News
Published : Apr 09, 2020, 01:44 PM IST
ಬಿರುಗಾಳಿ ಸಹಿತ ಮಳೆಗೆ 40ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಅಪಾರ ಕೃಷಿ ಹಾನಿ

ಸಾರಾಂಶ

ಹೊಸದುರ್ಗ ಜಿಲ್ಲೆಯ ಹಿರಿಯೂರು ಹಾಗೂ ಹೊಸದುರ್ಗ ತಾಲೂಕುಗಳಲ್ಲಿ ಮಂಗಳವಾರ ಸುರಿದ ಭಾರಿ ಮಳೆ, ಗಾಳಿಗೆ ಸುಮಾರು 40ಕ್ಕೂ ಹೆಚ್ಚು ಗ್ರಾಮಗಳಲ್ಲಿ ರೈತರ ಬಾಳೆ ತೋಟ ಹಾಗೂ ಜೋಳದ ಹೊಲಗಳು ನೆಲಕ್ಕಚ್ಚಿದ್ದು, ಅಪಾರ ಹಾನಿ ಸಂಭವಿಸಿದೆ.

ಚಿತ್ರದುರ್ಗ(ಏ.09): ಹೊಸದುರ್ಗ ಜಿಲ್ಲೆಯ ಹಿರಿಯೂರು ಹಾಗೂ ಹೊಸದುರ್ಗ ತಾಲೂಕುಗಳಲ್ಲಿ ಮಂಗಳವಾರ ಸುರಿದ ಭಾರಿ ಮಳೆ, ಗಾಳಿಗೆ ಸುಮಾರು 40ಕ್ಕೂ ಹೆಚ್ಚು ಗ್ರಾಮಗಳಲ್ಲಿ ರೈತರ ಬಾಳೆ ತೋಟ ಹಾಗೂ ಜೋಳದ ಹೊಲಗಳು ನೆಲಕ್ಕಚ್ಚಿದ್ದು, ಅಪಾರ ಹಾನಿ ಸಂಭವಿಸಿದೆ.

ಹಿರಿಯೂರಿನಲ್ಲಿ ಮಂಗಳವಾರ ಸಂಜೆ 6 ಗಂಟೆಯಿಂದ ಬುಧವಾರ ಮುಂಜಾನೆ 6 ಗಂಟೆಯವರೆಗೆ ಸುರಿದ ಮಳೆ ಮತ್ತು ಬೀಸಿದ ಗಾಳಿಯ ರಭಸಕ್ಕೆ ತಾಲೂಕಿನ ಉಡುವಳ್ಳಿ, ಹುಲಗಲಕುಂಟೆ, ಚಳಮೊಡು, ಇದ್ದಿಲನಾಗೇನಹಳ್ಳಿ, ರಂಗಾಪುರ, ತೊಬೇರಹಳ್ಳಿ, ಪರಮೇನಹಳ್ಳಿ, ಇಂಡಸ್‌ಕಟ್ಟೆ, ಗಾಂಧಿನಗರ, ಮೊದಲಾದ ಹಳ್ಳಿಗಳಲ್ಲಿ ಫಸಲಿಗೆ ಬಂದಿದ್ದ ಬೆಳೆಗಳು ನೆಲಕ್ಕಚ್ಚಿದ್ದು, ರೈತರ ಕೈಗೆ ಬಂದ ತುತ್ತು ಬಾಯಿಗೆ ಬಾರದಿರುವ ಪರಿಸ್ಥಿತಿ ಉದ್ಭವವಾಗಿದೆ.

ಕೊರೋನಾ ನಿರಾಶ್ರಿತರಿಗೆ ಊಟ, ವಾಸ್ತವ್ಯದ ಜಾಗ ಹೇಳುತ್ತೆ ಗೂಗಲ್!

ಇದ್ದಲನಾಗೇನಹಳ್ಳಿಯಲ್ಲಿ ಜಿಲ್ಲಾ ರೈತ ಸಂಘದ ಕಾರ್ಯಧ್ಯಕ್ಷ ಕೆ.ಸಿ.ಹೊರಕೇರಪ್ಪ ಅವರ ಬಾಳೆ ತೋಟ ಸಂಪೂರ್ಣ ನೆಲಸಮವಾಗಿದ್ದು, ಲಕ್ಷಾಂತರ ರು.ನಷ್ಟಸಂಭವಿಸಿದೆ. ಹುಲಗುಲಕೆಂಟೆ ಗ್ರಾಮದ ರೈತರಂಗಸ್ವಾಮಿ ಅವರ ಮೂರು ಎಕರೆ ಬಾಳೆ ಧರೆಗುಳಿದ ಪರಿಣಾಮ ಇಡೀ ಕುಟುಂಬ ಕಂಗಾಲಾಗಿದೆ. ಇದರ ಜತೆಗೆ 40ಕ್ಕೂ ಹೆಚ್ಚು ಹಳ್ಳಿಗಳಲ್ಲಿ ತೆಂಗು, ಅಡಕೆ ಮರಗಳು ಸಹ ಉರುಳಿಬಿದ್ದವೆ.

20 ಗುಡಿಸಲುಗಳಿಗೆ ಹಾನಿ:

ತಾಲೂಕಿನ ಚಳಮೊಡು ಗ್ರಾಮದ ನಜರ್‌ಕಾಲೋನಿಯ ಮುಸ್ಲಿಂ ಕುಟುಂಬದ ಗುಡಿಸಲುಗಳು ಮಂಗಳವಾರ ಬೀಸಿದ ಮಳೆ, ಗಾಳಿಗೆ ತರಗಲೆಯಂತೆ ಹಾರಿಹೋಗಿದ್ದು, ಕುಟುಂಬಗಳು ಅಕ್ಷರಶಃ ಬೀದಿಗೆ ಬಿದ್ದಿವೆ. ಈ ಹಿನ್ನೆಲೆಯಲ್ಲಿ ಕಲ್ಲುವಳ್ಳಿ ಭಾಗದ ಬಹುತೇಕ ಹಳ್ಳಿಗಳಲ್ಲಿ ರೈತರು ಅನುಭವಿಸಿರುವ ಬೆಳೆ ನಷ್ಟ, ಸಾರ್ವಜನಿಕರಿಗೆ ಆಗಿರುವ ತೊಂದರೆ ತುರ್ತು ಪರಿಹಾರ ಕಲ್ಪಿಸುವಂತೆ ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ, ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಕೆ.ಸಿ.ಹೊರಕೇರಪ್ಪ, ತಾಲೂಕು ಆಡಳಿತವನ್ನು ಆಗ್ರಹಿಸಿದ್ದಾರೆ. ತೋಟಗಾರಿಗೆ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ರೈತರಿಗೆ ಆಗಿರುವ ನಷ್ಟದ ವಿವರವನ್ನು ಸರ್ಕಾರಕ್ಕೆ ಸಲ್ಲಿಸಬೇಕೆಂದು ಒತ್ತಾಯಿಸಿದ್ದಾರೆ.

PREV
click me!

Recommended Stories

ಡೆವಿಲ್ ಬ್ಯಾನರ್‌ನಲ್ಲಿ 'ಡಾ.ಅಂಬೇಡ್ಕರ್ ತಲೆಮೇಲೆ ಕೊಲೆ ಆರೋಪಿ' ಕೂರಿಸಿದ ಅಂದಾಭಿಮಾನಿಗಳು!
ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಮೋದಿಯಿಂದ ಬದ್ಧತೆಯ ಕಾರ್ಯ: ಸಂಸದ ಬಿ.ವೈ.ರಾಘವೇಂದ್ರ