ವಿಜಯಪುರ: ಒಂದೇ ಹುದ್ದೆಗೆ ಇಬ್ಬರು ಉಪನಿರ್ದೇಶಕರ ನಡುವೆ ಜಟಾಪಟಿ..!

By Girish Goudar  |  First Published Feb 9, 2024, 11:00 PM IST

ವಿಜಯಪುರ ಜಿಲ್ಲಾ ಶಿಕ್ಷಣಾಧಿಕಾರಿ ಹುದ್ದೆಗೆ ಇಬ್ಬರು ಅಧಿಕಾರಿಗಳು ಗಲಾಟೆ ಮಾಡಿಕೊಂಡಿದ್ದಾರೆ. ನಗರದ ಡಿಡಿಪಿಐ ಕಚೇರಿಯಲ್ಲಿ ಒಂದೆ ಕುರ್ಚಿಗೆ ಇಬ್ಬರು ಉಪನಿರ್ದೇಶಕರ ನಡುವೆ ಕಾದಾಟ ನಡೆದಿದೆ. 


ಷಡಕ್ಷರಿ‌ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯಪುರ

ವಿಜಯಪುರ(ಫೆ.09):  ಒಂದೇ ಹುದ್ದೆಗೆ ಇಬ್ಬರು ಅಧಿಕಾರಿಗಳು ಕಿತ್ತಾಡುವ ಅದೇಷ್ಟೋ ಘಟನೆಗಳನ್ನ ನೀವು ನೋಡಿಯೇ ಇರ್ತಿರಿ. ಇಂಥದ್ದೆ ಘಟನೆ ಈಗ ಗುಮ್ಮಟನಗರಿ ವಿಜಯಪುರದಲ್ಲಿ ನಡೆದಿದೆ. ಉಪನಿರ್ದೇಶಕ ಹಂತದ ಇಬ್ಬರು ಅಧಿಕಾರಿಗಳು ಒಂದೇ ಹುದ್ದೆಗಾಗಿ ಜಟಾಪಟಿ ನಡೆಸಿದ್ದಾರೆ. ಜಿಲ್ಲಾ ಶಿಕ್ಷಣಾಧಿಕಾರಿ ಹುದ್ದೆಗೆ ಡಿಡಿಪಿಐ ಕಚೇರಿಯಲ್ಲಿ ಇಬ್ಬರು ಅಧಿಕಾರಿಗಳು ಕುರ್ಚಿ ಮಾಲೀಕ ನಾನು ಅಂತ ಗಲಾಟೆ ಮಾಡಿಕೊಂಡಿದ್ದಾರೆ. ಅಷ್ಟಕ್ಕೂ ಆಗಿದ್ದೇನು? ಇಲ್ಲಿದೆ ಪುಲ್ ಡಿಟೇಲ್ಸ್..!

Tap to resize

Latest Videos

ಒಂದೇ ಹುದ್ದೆಗೆ ಇಬ್ಬರು ಡಿಡಿಪಿಐಗಳ ನಡುವೆ ಕಿರಿಕ್..!

ಹೌದು, ವಿಜಯಪುರ ಜಿಲ್ಲಾ ಶಿಕ್ಷಣಾಧಿಕಾರಿ ಹುದ್ದೆಗೆ ಇಬ್ಬರು ಅಧಿಕಾರಿಗಳು ಗಲಾಟೆ ಮಾಡಿಕೊಂಡಿದ್ದಾರೆ. ನಗರದ ಡಿಡಿಪಿಐ ಕಚೇರಿಯಲ್ಲಿ ಒಂದೆ ಕುರ್ಚಿಗೆ ಇಬ್ಬರು ಉಪನಿರ್ದೇಶಕರ ನಡುವೆ ಕಾದಾಟ ನಡೆದಿದೆ. ಎನ್ ಹೆಚ್‌ ನಾಗೂರ್‌ ಹಾಗೂ ಉಮಾದೇವಿ ಸೊನ್ನದ್‌ ನಡುವೆ ಕುರ್ಚಿಗಾಗಿ ಕಿತ್ತಾಟ ನಡೆದಿದೆ. ಕಳೆದು ಒಂದು ವಾರದಿಂದ ಉಮಾದೇವಿ ಪ್ರಭಾರಿ ಡಿಡಿಪಿಐ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಈ ನಡುವೆ ಕಳೆದ 10 ದಿನಗಳ ಹಿಂದೆ ಗಂಭೀರ ಆರೋಪದ ಹಿನ್ನೆಲೆಯೊಂದರಲ್ಲಿ ಅಮಾನತ್ತಾಗಿದ್ದ ಎನ್ ಹೆಚ್ ನಾಗೂರ್ ಸಹ ತಡೆಯಾಜ್ಞೆ ಪಡೆದು ಹುದ್ದೆಯ ಅಧಿಕಾರಿವಹಿಸಿಕೊಳ್ಳಲು ಕಚೇರಿಗೆ ಬಂದಿದ್ದಾರೆ. ಈ ವೇಳೆ ಇಬ್ಬರು ಅಧಿಕಾರಿಗಳ ನಡುವೆ ಜಟಾಪಟಿ ನಡೆದಿದೆ. 

ಸಿಎಂ ಸಿದ್ದರಾಮಯ್ಯ ಬೇಷರತ್ ಕ್ಷಮೆ ಕೇಳಬೇಕು: ಯತ್ನಾಳ್

ಅಷ್ಟಕ್ಕೂ ಡಿಡಿಪಿಐ ಕುರ್ಚಿ ಗಲಾಟೆ ಸೃಷ್ಟಿಯಾಗಿದ್ದೇಕೆ?!

ಇತ್ತೀಚೆಗೆ ಎನ್ ಹೆಚ್ ನಾಗೂರ್ ವಿಜಯಪುರ ಜಿಲ್ಲಾ ಶಿಕ್ಷಣ ಇಲಾಖೆಗೆ ಉಪನಿರ್ದೇಶಕರಾಗಿ ನೇಮಕಗೊಂಡಿದ್ದರು. ಆದ್ರೆ ಹಣಕಾಸು ದುರುಪಯೋಗ ಆರೋಪದ‌ ಹಿನ್ನೆಲೆಯಲ್ಲಿ ಕಳೆದ ಜನೇವರಿ 30 ರಂದು ಅಮಾನತ್ತಾಗಿದ್ದರು‌. ಬಳಿಕ ನಾಗೂರ್ ಅಮಾನತ್ತಿನಿಂದ ಖಾಲಿಯಾಗಿದ್ದ ಡಿಡಿಪಿಐ ಹುದ್ದೆಗೆ ಕಳೆದ ಫೆಬ್ರವರಿ 2 ರಂದು ಉಮಾದೇವಿ ಸೊನ್ನದ ಎಂಬುವರನ್ನ ಪ್ರಭಾರಿಯಾಗಿ ಸಿಇಓ ನೇಮಕ ಮಾಡಿದ್ದರು‌. 

ಅಮಾನತ್ತಿನ ವಿರುದ್ಧ ತಡೆಯಾಜ್ಞೆ ಪಡೆದು ಕಚೇರಿಗೆ ಬಂದ ನಾಗೂರ..!

ಅತ್ತ ಉಮಾದೇವಿ ಸಿಇಓ ಆದೇಶದ ಮೇಲೆ ಡಿಡಿಪಿಐ ಹುದ್ದೆಯ ಪ್ರಭಾರವಹಿಸಿಕೊಂಡರೆ, ಇತ್ತ ಅಮಾನತ್ತಾಗಿದ್ದ ಡಿಡಿಪಿಐ ಎನ್ ಹೆಚ್ ನಾಗೂರ್ ಕರ್ನಾಟಕ ಆಡಳಿತ ನ್ಯಾಯ ಮಂಡಳಿ‌ ಮೊರೆ ಹೋಗಿದ್ದರು. ಇಂದು ನ್ಯಾಯ ಮಂಡಳಿಯಿಂದ ಅಮಾನತು ಆದೇಶಕ್ಕೆ ತಡೆಯಾಜ್ಞೆ ತಂದ ನಾಗೂರು ನೇರವಾಗಿ ಡಿಡಿಪಿಐ ಕಚೇರಿಗೆ ಬಂದಿದ್ದಾರೆ. ಆದ್ರೆ ಡಿಡಿಪಿಐ ಹುದ್ದೆಯ ಪ್ರಭಾರವಹಿಸಿದ್ದ ಉಮಾದೇವಿ ಕುರ್ಚಿ ಬಿಟ್ಟು ಕೊಡೊಕೆ ನಿರಾಕರಿಸಿದ್ದಾರೆ. ಇದು ಜಟಾಪಟಿಗೆ ಕಾರಣವಾಗಿದೆ. 

ಆಲಮಟ್ಟಿ-ಯಾದಗಿರಿ ರೈಲು ಮಾರ್ಗ ಶುರು ಯಾವಾಗ?

ಕಡತಗಳ ಮೇಲೆ ಸಹಿ ಮಾಡುವೆ ಎಂದ ಹಿಂದಿನ ಡಿಡಿಪಿಐ..!

ತಮ್ಮ ಅಮಾನತ್ತಿನ ವಿರುದ್ದ ಕರ್ನಾಟಕ ಆಡಳಿತ ನ್ಯಾಯ ಮಂಡಳಿಯಿಂದ ತಡೆಯಾಜ್ಞೆ ತಂದ ಎನ್ ಹೆಚ್ ನಾಗೂರು ಡಿಡಿಪಿಐ ಕಚೇರಿಗೆ ಬಂದು ಅಧಿಕಾರವಹಿಸುವಂತೆ ಕೇಳಿದ್ದಾರೆ‌. ಸಿಬ್ಬಂದಿಗಳು ತಂದ ಕಡತಗಳ ಮೇಲೆ ತಾವೇ ಸಹಿ ಮಾಡೋದಾಗಿ ಹಠ ಹಿಡಿದ್ದಾರೆ.‌ ಇದು ಗೊಂದಲಕ್ಕೆ ಕಾರಣವಾಗಿದೆ.

ಸಿಬ್ಬಂದಿಗಳಲ್ಲಿ ಗೊಂದಲ; ಡಿಸಿ ನಿರ್ದೇಶನಕ್ಕೆ ನಿರೀಕ್ಷೆ..!

ಇನ್ನೂ ಇಬ್ಬರು ಅಧಿಕಾರಿಗಳು ಕುರ್ಚಿಗಾಗಿ ಜಟಾಪಟಿಯಲ್ಲಿ ತೊಡಗಿದ್ದರೆ, ಇತ್ತ ಡಿಡಿಪಿಐ ಕಚೇರಿ ಸಿಬ್ಬಂದಿ ಗೊಂದಲಕ್ಕಿಡಾಗಿದ್ದಾರೆ. ಅತ್ತ ಸಿಇಓ ನಿರ್ದೇಶನದಂತೆ ಪ್ರಭಾರವಹಿಸಿದ ಉಮಾದೇವಿ ಮಾತು ಕೇಳಬೇಕೋ, ಅಥವಾ ಕೋರ್ಟ್ ಅಮಾನತು ವಿರುದ್ಧ ತಡೆಯಾಜ್ಞೆ ತಂದ ಎನ್ ಹೆಚ್ ನಾಗೂರ್ ಹೇಳಿದ್ದನ್ನ ಪಾಲಿಸಬೇಕಾ ಎನ್ನುವ ಗೊಂದಲ ಸಿಬ್ಬಂದಿಗಳಲ್ಲಿ ಸೃಷ್ಟಿಯಾಗಿದೆ. ಇತ್ತ ಈ ಗೊಂದಲವನ್ನ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರೆ ಬಗೆಹರಿಸಬೇಕು ಎನ್ತಿದ್ದಾರೆ‌‌. 

click me!