ಉಡುಪಿ: ನಮಾಝ್ ಮಾಡುವಾಗ ವ್ಯಕ್ತಿಗೆ ತೀವ್ರ ಹೃದಯಾಘಾತ, ಕುಸಿದುಬಿದ್ದ ಸ್ಥಳದಲ್ಲೇ ಸಾವು

By Ravi Janekal  |  First Published Feb 9, 2024, 9:15 PM IST

ನಮಾಝ್ ಮಾಡುತ್ತಿದ್ದ ವೇಳೆ ಕುಸಿದುಬಿದ್ದು ವ್ಯಕ್ತಿಯೊಬ್ಬ ಮೃತಪ್ಟಟ ಘಟನೆ ಉಡುಪಿ ಸಿಟಿ ಬಸ್ ನಿಲ್ದಾಣ ಸಮೀಪದ ಅಂಜುಮಾನ್ ಮಸೀದಿಯಲ್ಲಿ ನಡೆದಿದೆ. ಮುಸ್ತಾಕ್(55) ಮೃತ ವ್ಯಕ್ತಿ. ದೊಡ್ಡಣಗುಡ್ಡೆಯ ಕರಂಬಳ್ಳಿ ನಿವಾಸಿಯಾಗಿದ್ದಾರೆ


ಉಡುಪಿ (ಫೆ.9): ನಮಾಝ್ ಮಾಡುತ್ತಿದ್ದ ವೇಳೆ ಕುಸಿದುಬಿದ್ದು ವ್ಯಕ್ತಿಯೊಬ್ಬ ಮೃತಪ್ಟಟ ಘಟನೆ ಉಡುಪಿ ಸಿಟಿ ಬಸ್ ನಿಲ್ದಾಣ ಸಮೀಪದ ಅಂಜುಮಾನ್ ಮಸೀದಿಯಲ್ಲಿ ನಡೆದಿದೆ.

ಮುಸ್ತಾಕ್(55) ಮೃತ ವ್ಯಕ್ತಿ. ಅವಿವಾಹಿತರಾಗಿರುವ ವ್ಯಕ್ತಿ ದೊಡ್ಡಣಗುಡ್ಡೆಯ ಕರಂಬಳ್ಳಿ ನಿವಾಸಿಯಾಗಿದ್ದಾರೆ. ಇಂದು ಶುಕ್ರವಾರದ ಜುಮ್ಮಾ ನಮಾಝ್‌ಗಾಗಿ ಮಧ್ಯಾಹ್ನದ ವೇಳೆ  ಮಸೀದಿಗೆ ಬಂದಿದ್ದ ಮುಸ್ತಾಕ್. ಖುತ್ಭಾ ಕೇಳಲು ಕುಳಿತಿದ್ದಾಗಲೇ ಎದೆ ನೋವು ಕಾಣಿಸಿಕೊಂಡು ತೀವ್ರ ಹೃದಯಾಘಾದಿಂದ ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವ್ಯಕ್ತಿ ನಮಾಝ್ ಮಾಡುವಾಗ ಹೃದಯಾಘಾತದ ದೃಶ್ಯ ಮಸೀದಿಯ ಸಿಸಿಟಿಯಲ್ಲಿ ದಾಖಲಾಗಿದೆ.. ಸದ್ಯ ದೊಡ್ಡಣಗುಡ್ಡೆ ಮಸೀದಿಯಲ್ಲಿ ದಫನ ಕ್ರಿಯೆಗೆ ಸಿದ್ಧತೆ ನಡೆಸಿದ ಕುಟುಂಬಸ್ಥರು.

Tap to resize

Latest Videos

ನವೀಕರಣದ ವೇಳೆ ಕುಸಿದ ಬಹುಮಹಡಿ ಕಟ್ಟಡ, 6 ಮಹಿಳಾ ಕಾರ್ಮಿಕರು ಸಾವು!

click me!