Asianet Suvarna News Asianet Suvarna News

ಸಿಎಂ ಸಿದ್ದರಾಮಯ್ಯ ಬೇಷರತ್ ಕ್ಷಮೆ ಕೇಳಬೇಕು: ಯತ್ನಾಳ್

ಬಾಯ್ತಪ್ಪಿನಿಂದ, ಕಣ್ಣಪ್ಪಿನಿಂದ, ಆ ಗಳಿಗೆಯಲ್ಲಿ ಹೀಗಾಯಿತು. ನಾನು ಹಳ್ಳಿಯವ ಹಾಗೆ ಮಾತನಾಡಿದೆ ಎಂದು ಸಬೂಬು ಹೇಳಿ ಮುಚ್ಚಿ ಹಾಕುವ ಪ್ರಯತ್ನ ಮುಖ್ಯ ಮಂತ್ರಿಗಳು ಮಾಡಬಾರದು. ಈ ಕೂಡಲೇ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಏಕವಚನದಲ್ಲಿ ಮಾತನಾಡಿದ್ದಕ್ಕೆ ಸನ್ಮಾನ್ಯ ಮುಖ್ಯ ಮಂತ್ರಿಗಳು ಬೇಷರತ್ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್ 

CM Siddaramaiah should apologize Unconditionally says BJP MLA Basanagouda Patil Yatnal grg
Author
First Published Feb 9, 2024, 9:15 PM IST

ವಿಜಯಪುರ(ಫೆ.09): ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಏಕವಚನದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದಾರೆ. ಮುಖ್ಯಮಂತ್ರಿಗಳು ಬೇಷರತ್ ಕ್ಷಮೆ ಕೇಳಬೇಕು ಎಂದು ಎಕ್ಸ್ ಖಾತೆಯಲ್ಲಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್ ಟ್ವಿಟ್ ಮಾಡಿ ಆಗ್ರಹಿಸಿದ್ದಾರೆ. 

ಬಾಯ್ತಪ್ಪಿನಿಂದ, ಕಣ್ಣಪ್ಪಿನಿಂದ, ಆ ಗಳಿಗೆಯಲ್ಲಿ ಹೀಗಾಯಿತು. ನಾನು ಹಳ್ಳಿಯವ ಹಾಗೆ ಮಾತನಾಡಿದೆ ಎಂದು ಸಬೂಬು ಹೇಳಿ ಮುಚ್ಚಿ ಹಾಕುವ ಪ್ರಯತ್ನ ಮುಖ್ಯ ಮಂತ್ರಿಗಳು ಮಾಡಬಾರದು. 

ಬಿಜೆಪಿಗೆ 400+ ಸ್ಥಾನ ಬರುತ್ತೆಂಬ ಸತ್ಯ ಖರ್ಗೆ ಬಾಯಲ್ಲಿ ಬಂದಿದೆ: ವಿಜಯೇಂದ್ರ

ಈ ಕೂಡಲೇ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಏಕವಚನದಲ್ಲಿ ಮಾತನಾಡಿದ್ದಕ್ಕೆ ಸನ್ಮಾನ್ಯ ಮುಖ್ಯ ಮಂತ್ರಿಗಳು ಬೇಷರತ್ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ. 

Follow Us:
Download App:
  • android
  • ios