ತುರುವೇಕೆರೆ: 229 ಮತಗಟ್ಟೆಗಳಲ್ಲೂ ಕಟ್ಟೆಚ್ಚರ

By Kannadaprabha News  |  First Published Mar 31, 2023, 5:14 AM IST

  ತುರುವೇಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 229 ಮತಗಟ್ಟೆಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಎಂ.ಎನ್‌.ಮಂಜುನಾಥ್‌ ತಿಳಿಸಿದ್ದಾರೆ.


 ತುರುವೇಕೆರೆ :  ತುರುವೇಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 229 ಮತಗಟ್ಟೆಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಎಂ.ಎನ್‌.ಮಂಜುನಾಥ್‌ ತಿಳಿಸಿದ್ದಾರೆ.

ಪತ್ರಕರ್ತರೊಂದಿಗೆ ಮಾತನಾಡಿದ ಅವರು, ತುರುವೇಕೆರೆ ತಾಲೂಕು ಮತ್ತು ಗುಬ್ಬಿ ವಿಧಾನಸಭಾ ಕ್ಷೇತ್ರದ ಸಿಎಸ್‌ಪುರ ಹೋಬಳಿ ಸೇರಿ ಒಟ್ಟು 1,79,958 ಮತದಾರರು ಇದ್ದಾರೆ. ಇವರಲ್ಲಿ ಪುರುಷ ಮತದಾರ ರು 89769 ಮಂದಿ, ಮಹಿಳಾ ಮತದಾರರು 90185 ಮತದಾರರು, 4 ತೃತೀಯ ಲಿಂಗಿಗಳು ಇದ್ದಾರೆಂದು ತಿಳಿಸಿದರು.

Tap to resize

Latest Videos

ಚೆಕ್‌ ಪೋಸ್ಟ್‌-ತುರುವೇಕೆರೆ ತಾಲೂಕಿನ ಮೂರು ಕಡೆ ಚೆಕ್‌ಪೋಸ್ಟ್‌ಗಳನ್ನು ಹಾಕಲಾಗಿದೆ. ಬಾಣಸಂದ್ರ, ಟಿ.ಬಿ.ಕ್ರಾಸ್‌ ಮತ್ತು ಭೀಮನಬಾರೆಯಲ್ಲಿ ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುವ ತಂಡವನ್ನು ನೇಮಿಸಲಾಗಿದೆ.

ಮತದಾನ ಪ್ರಕ್ರಿಯೆ ಪ್ರಾಮಾಣಿಕವಾಗಿ ನಡೆಯುವ ಸಲುವಾಗಿ ಆಡಳಿತವನ್ನು ಸಂಪೂರ್ಣವಾಗಿ ಸಜ್ಜುಗೊಳಿಸಲಾಗಿದೆ. ವಿಕಲ ಚೇತನರು ಮತ್ತು ವೃದ್ದರಿಗಾಗಿ ಮತದಾನವನ್ನು ಅವರ ಮನೆಗಳಲ್ಲೇ ಮಾಡುವ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಎಂ.ಎನ್‌.ಮಂಜುನಾಥ್‌ ಹೇಳಿದರು.

ಮತದಾನಕ್ಕೆ ಅನುಕೂಲವಾಗುವಂತೆ ಎಲ್ಲಾ ಮತಗಟ್ಟೆಗಳಲ್ಲಿ ವಿಕಲಚೇತನರಿಗೆ ಅನು ಕೂಲವಾಗಲು ವಾಹನಗಳ ವ್ಯವಸ್ಥೆ, ಶೌಚಾಲಯ, ನೆರಳು, ನೀರು ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗುವುದು ಎಂದರಲ್ಲದೆ, ಚುನಾವಣಾ ನೀತಿ ಸಂಹಿತೆಯ ಸೂಚನೆಯ ಮೇರೆಗೆ ಯಾವುದೇ ರಾಜಕೀಯ ಪಕ್ಷದವರು ಇತರೆ ಪಕ್ಷದವರನ್ನು ವೈಯಕ್ತಿಕವಾಗಿ ಟೀಕಿಸುವಂತಿಲ್ಲ. ಧರ್ಮ ಕುರಿತು ಭಾಷಣ ಮಾಡುವಂತಿಲ್ಲ. ಕೋಮು ಭಾವನೆ ಕೆರಳಿಸುವಂತಿಲ್ಲ. ಅಲ್ಲದೇ ಚುನಾವಣಾ ನೀತಿಯನ್ನು ಯಾರಾದರೂ ಉಲ್ಲಂಘನೆ ಮಾಡಿದಲ್ಲಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮಂಜುನಾಥ್‌ ಎಚ್ಚರಿಸಿದರು.

ಚುನಾವಣಾ ನೀತಿ ಸಂಹಿತೆಯನ್ನು ಯಾರಾದರೂ ಉಲ್ಲಂಘನೆ ಮಾಡಿದಲ್ಲಿ ಸಾರ್ವಜನಿಕರು 08139-287325ಗೆ ಕರೆ ಮಾಡಿ ಮಾಹಿತಿ ನೀಡಬಹದಾಗಿದೆ. ಎಲ್ಲರೂ ಚುನಾವಣಾ ನೀತಿ ಸಂಹಿತೆಯನ್ನು ಕಟ್ಟು ನಿಟ್ಟಾಗಿ ಪಾಲಿಸುವ ಮೂಲಕ ಚುನಾವಣೆಯನ್ನು ಯಶಸ್ವಿಗೊಳಿಸಬೇಕೆಂದೂ ಸಹ ಚುನಾವಣಾಧಿಕಾರಿ ಎಂ.ಎನ್‌.ಮಂಜುನಾಥ್‌ ಮತದಾರರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಈ ಸಂಧರ್ಭದಲ್ಲಿ ಸಹಾಯಕ ಚುನಾವಣಾಧಿಕಾರಿಗಳಾದ ತಹಸೀಲ್ದಾರ್‌ ವೈ.ಎಂ.ರೇಣುಕುಮಾರ್‌ ಉಪಸ್ಥಿತರಿದ್ದರು.

ಪ್ರತಿಮೆಗಳಿಗೆ ಮುಸುಕು: ರಕ್ಷಣೆ

ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿರುವ ಹಿನ್ನೆಲೆಯಲ್ಲಿ ತುರುವೇಕೆರೆ ವಿಧಾನಸಭಾ ಕ್ಷೇತ್ರದಾದ್ಯಂತ ರಾಜಕೀಯ ನಾಯಕರು ಭಾವಚಿತ್ರಗಳನ್ನು ತೆರವು ಮಾಡಲಾಗಿದೆ. ಹಲವಾರು ಶಂಕುಸ್ಥಾಪನೆ ಮತ್ತು ಉದ್ಘಾಟನೆಗೆ ಸಂಬಂಧಿಸಿದ ಶಿಲಾನ್ಯಾಸ ಫಲಕಗಳನ್ನು ಮುಚ್ಚಲಾಗಿದೆ. ತಾಲೂಕು ಕಛೇರಿಯ ಮುಂಭಾಗದಲ್ಲಿದ್ದ ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡರ ಪುತ್ಥಳಿಗೆ ಮುಸುಕು ಹಾಕಲಾಗಿದೆ. ಎಲ್ಲಾ ಗ್ರಾಮ ಪಂಚಾಯಿತಿಯಲ್ಲಿ ಯಾವುದೇ ರಾಜಕೀಯ ನಾಯಕರ ಭಾವಚಿತ್ರಗಳು ಇಲ್ಲದಂತೆ ತೆರವು ಮಾಡಲಾಗಿದೆ.

click me!