ರಾಮನಗರದ ರಾಮದೇವರ ಬೆಟ್ಟ ರಾಮಮಂದಿರ ನಿರ್ಮಾಣಕ್ಕೆ ರಾಜ್ಯ ಸರ್ಕಾರ 40 ಲಕ್ಷ ರೂ. ಅನುದಾನ ನೀಡಿದೆ. ಈ ಬಾರಿ ಶ್ರೀರಾಮ ನವಮಿಯನ್ನು ಅದ್ಧೂರಿಯಾಗಿ ಆಚರಿಸಲಾಯಿತು.
ವರದಿ- ಜಗದೀಶ್ ಏಷ್ಯಾನೆಟ್ ಸುವರ್ಣನ್ಯೂಸ್
ರಾಮನಗರ (ಮಾ.30): ರಾಮನಗರದ ರಾಮದೇವರ ಬೆಟ್ಟ. ಶ್ರೀರಾಮ ನೆಲಸಿದ್ದ ಕ್ಷೇತ್ರ. ಇತ್ತೀಚಿಗೆ ಸಾಕಷ್ಟು ಸದ್ದು ಮಾಡಿದ್ದ ಸ್ಥಳ. ಇದೇ ಸ್ಥಳದಲ್ಲಿ ರಾಮಮಂದಿರ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಬಜೆಟ್ ನಲ್ಲಿ ಘೋಷಣೆ ಸಹಾ ಮಾಡಿತ್ತು. ಈಗಾಗಲೇ ಬ್ಲೂ ಪ್ರಿಂಟ್ ಸಹಾ ರೆಡಿಯಾಗಿದೆ. ಇಂತಹ ರಾಮದೇವರ ಬೆಟ್ಟದಲ್ಲಿ ಇವತ್ತು ಅದ್ದೂರಿಯಾಗಿ ರಾಮನವಮಿಯನ್ನ ಆಚರಿಸಲಾಯಿತು.
ಹಚ್ಚಹಸಿರಿನಿಂದ ಕಂಗಳಿಸುತ್ತಿರೋ ಬೆಟ್ಟಗುಡ್ಡಗಳು. ಬೆಟ್ಟಗಳ ಮಧ್ಯೆ ನೆಲೆಸಿರೋ ಪಟ್ಟಾಭಿರಾಮನ ದೇವಸ್ಥಾನ. ವಿವಿಧ ಹೂವುಗಳಿಂದ ಆಲಂಕಾರಗೊಂಡಿರೋ ಪಟ್ಟಾಭಿರಾಮ. ಶ್ರೀರಾಮನಿಗೆ ಭಕ್ತ ಭಾವದಿಂದ ನಮಿಸುತ್ತಿರೋ ಭಕ್ತರು. ಅಂದಹಾಗೆ ಇಂತಹ ದೃಶ್ಯಕಂಡು ಬಂದಿದ್ದು, ರಾಮನಗರದ ರಾಮದೇವರಬೆಟ್ಟದಲ್ಲಿ. ಹೌದು ಇಂದು ನಾಡಿನೆಲ್ಲೆಡೆ ಶ್ರೀರಾಮನವಮಿ ಸಂಭ್ರಮ ಮನೆ ಮಾಡಿದೆ. ಅದೇ ರೀತಿ ರಾಮನಗರದ ರಾಮದೇವರಬೆಟ್ಟದಲ್ಲೂ ಸಹಾ ಶ್ರೀರಾಮನವವಿ ಸಂಭ್ರಮ ಮನೆ ಮಾಡಿತ್ತು.
ಬೇಲೂರು ಚನ್ನಕೇಶವ ರಥದ ಮುಂದೆ ಕುರಾನ್ ಪಠಣ ಮಾಡಬೇಕೆಂದು ಹೇಳಿಲ್ಲ!: ಕೈಪಿಡಿಯ ಮಾಹಿತಿ ಹೀಗಿದೆ.!
ಪಟ್ಟಾಭಿರಾಮನಿಗೆ ವಿಶೇಷ ಅಲಂಕಾರ: ರಾಮನವಮಿ ಅಂಗವಾಗಿ ರಾಮದೇವರಬೆಟ್ಟದ ಮೇಲಿರೋ ಪಟ್ಟಾಭಿರಾಮನಿಗೆ ವಿವಿಧ ಹೂವುಗಳಿಂದ ಸಿಂಗಾರ ಮಾಡಿ, ಬೆಳಗ್ಗೆಯಿಂದಲೇ ವಿಶೇಷವಾದ ಪೂಜೆ ಪುನಸ್ಕಾರಗಳು ನಡೆದವು. ಇನ್ನು ಬೇರೆ ಬೇರೆ ಊರುಗಳಿಂದ ಭಕ್ತರು ಬಂದು ಶ್ರೀರಾಮನ ದರ್ಶನ ಪಡೆದು. ರಾಮನವಮಿ ಹಿನ್ನೆಲೆಯಲ್ಲಿ ವಿಶೇಷವಾದ ಪ್ರಸಾದ ವಿತರಣೆ ಮಾಡಲಾಯಿತು. ಹೋಳಿಗೆ, ಪಾಯಿಸ, ಮಜ್ಜಿಗೆ, ಪಾನಕ, ಪಲ್ಯವನ್ನ, ಅನ್ನ, ಸಾಂಬಾರ್ ನೀಡಲಾಯಿತು.
ರಾಮಮಂದಿನ ನಿರ್ಮಾಣಕ್ಕೆ 40 ಲಕ್ಷ ರೂ. ಅನುದಾನ:
ಅಂದಹಾಗೆ ಇತ್ತೀಚಿಗೆ ರಾಮನಗರದ ರಾಮದೇವರ ಬೆಟ್ಟ ಸಾಕಷ್ಟು ಹೆಸರು ಮಾಡಿತ್ತು. ವಿಶೇಷವಾದ ರಣಹದ್ದುಗಳು ವಾಸಸ್ಥಳ. ಬೆಂಗಳೂರಿಗರ ಸುಂದರ ತಾಣ, ಭಕ್ತರ ಪಾಲಿನ ಪುಣ್ಯ ಕ್ಷೇತ್ರ ರಾಮನಗರದ ರಾಮದೇವರ ಬೆಟ್ಟದಲ್ಲಿ ಶ್ರೀರಾಮಮಂದಿರ ನಿರ್ಮಾಣಕ್ಕೆ ಮಾಡಲು ಬಿಜೆಪಿ ಸರ್ಕಾರ ಘೋಷಣೆ ಮಾಡಿತ್ತು. ಸ್ವತಃ ಸಿಎಂ ಬಸವರಾಜು ಬೊಮ್ಮಾಯಿ ಬಜೆಟ್ ನಲ್ಲೂ ಸಹಾ ಘೋಷಣೆ ಮಾಡಿದ್ರು. ಈಗಾಗಲೇ 40 ಲಕ್ಷ ಅನುದಾನ ಸಹಾ ಬಿಡುಗಡೆಯಾಗಿದ್ದು, ಜೊತೆಗೆ ಬ್ಲೂ ಪ್ರಿಂಟ್ ಸಹಾ ರೆಡಿಯಾಗಿದೆ.
ಮಂದಿನ ನಿರ್ಮಾಣದ ಬೆನ್ನಲ್ಲೇ ಅದ್ಧೂರಿ ಕಾರ್ಯಕ್ರಮ: ದಕ್ಷಿಣದ ಆಯೋಧ್ಯಯನ್ನ ರಾಮದೇವರಬೆಟ್ಟದಲ್ಲಿ ನಿರ್ಮಾಣ ಸಹಾ ಮಾಡಲಾಗುವುದು ಎಂದು ಘೋಷಣೆ ಮಾಡಿದ್ರು. ಹೀಗಾಗಿ ಈ ಬಾರಿ ರಾಮದೇವರ ಬೆಟ್ಟದಲ್ಲಿ ರಾಮನವಮಿ ವಿಶೇಷವಾಗಿತ್ತು. ಇನ್ನು ಭಕ್ತರು ಸಹಾ ಅದಷ್ಟು ಬೇಗ ಆಯೋಧ್ಯ ಮಾದರಿಯಲ್ಲಿ ರಾಮಮಂದಿರ ನಿರ್ಮಾಣ ಆಗಲಿ ಎಂದು ಒತ್ತಾಯಿ ಮಾಡಿದ್ದಾರೆ. ಒಟ್ಟಾರೆ ರಾಮನಗರದ ರಾಮದವರ ಬೆಟ್ಟದಲ್ಲಿ ರಾಮನವಮಿ ಸಂಭ್ರಮ ಮನೆ ಮಾಡಿತ್ತು. ಭಕ್ತರು ದೇವರ ದರ್ಶನ ಪಡೆದು ಪುನೀತರಾದರು.
Ayodhya Ram Mandir: ವಿವಾದದಿಂದ ನಿರ್ಮಾಣದವರೆಗೆ- ನೀವು ತಿಳಿಯಬೇಕಾದ್ದು..
ರಾಜ್ಯಾದ್ಯಂತ ವಿಜೃಂಭಣೆಯ ರಾಮನವಮಿ: ಇನ್ನು ರಾಜ್ಯಾದ್ಯಂತ ಭರ್ಜರಿ ವಿಜೃಂಭಣೆಯಿಂದ ಇಂದು ಶ್ರೀರಾಮನವಮಿ ಆಚರಣೆ ಮಾಡಲಾಯಿತು. ಶ್ರೀರಾಮ ದೇವಾಲಯಗಳಲ್ಲಿ ವಿಶೇಷ ಪೂಜೆ, ಪುನಸ್ಕಾರ ನೆರವೇರಿಸಲಾಯಿತು. ಜೊತೆಗೆ, ಆಂಜನೇಯನ ದೇವಾಲಯಗಲ್ಲಿಯೂ ಶ್ರೀರಾಮ ನವಮಿಯನ್ನು ಅದ್ಧೂರಿಯಾಗಿ ಆಚರಣೆ ಮಾಡಿರುವುದು ಕಂಡುಬಂದಿತು. ಇನ್ನು ದೇವಸ್ಥಾನಗಳ ಬಳಿ ಎಲ್ಲರಿಗೂ ಮಜ್ಜಿಗೆ, ಪಾನಕ ವಿತರಣೆ ಮಾಡುವುದು ಸಾಮಾನ್ಯವಾಗಿ ಕಂಡುಬಂದಿತು. ಇನ್ನು ದೇವಾಲಯಗಳಿಗೆ ಝಗಮಗಿಸುವಂತೆ ಲೈಟಿಂಗ್ಸ್ ಅಳವಡಿಕೆ, ಧ್ವನಿವರ್ಧಕದಲ್ಲಿ ಭಕ್ತಿಗೀತೆಗಳನ್ನು ಹಾಕಲಾಗಿತ್ತು.