ವಿಜಯಪುರ: ಮತ್ತೆ ಬಬಲಾದಿ ಮುತ್ಯಾನ ಸ್ಫೋಟಕ ಭವಿಷ್ಯ, ರಾಜ್ಯ ರಾಜಕಾರಣದಲ್ಲಿ ತಿರುವು..!

By Girish Goudar  |  First Published Feb 22, 2023, 11:30 PM IST

ಹೊರಬಿತ್ತು ಬೆಂಕಿ ಬಬಲಾದಿಯ ಕೆಂಡದುಂಡೆಯಂತ ಭವಿಷ್ಯ, ಚುನಾವಣೆ ಹೊಸ್ತಿಲಲ್ಲಿ ರಾಜ್ಯ ರಾಜಕಾರಣದಲ್ಲಿ ಯಾರೂ ಊಹಿಸದ ತಿರುವು, ಮತ್ತೆ ಭೂಪ್ರಳಯ, ಜಲಪ್ರಳಯಗಳ ಎಚ್ಚರಿಕೆ‌ ನೀಡಿದ ಬೆಂಕಿ ಮಠ. 


ಷಡಕ್ಷರಿ‌ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್‌

ವಿಜಯಪುರ(ಫೆ.22): ರಾಜ್ಯದ ಕೆಲ ಧಾರ್ಮಿಕ ಕ್ಷೇತ್ರಗಳು, ಮಠಗಳಲ್ಲಿ‌ ನುಡಿಯಲಾಗುವ ಭವಿಷ್ಯಗಳಿಗೆ ಎಲ್ಲಿಲ್ಲದ ಮಾನ್ಯತೆ ಇದೆ. ಅದೇಷ್ಟೋ ಭಕ್ತರು ಇಲ್ಲಿ ನುಡಿಯುವ ಕಾರ್ಣಿಕಗಳನ್ನ ಕೇಳಲೆಂದೆ ತುದಿಗಾಲ ಮೇಲೆ ನಿಂತು ಜಾತಕ ಪಕ್ಷಿಯಂತೆ ಕಾಯ್ತಾ ಇರ್ತಾರೆ. ಇನ್ನು ಅನೇಕ‌ ಕಡೆಗಳಲ್ಲಿ ಮಹಾತ್ಮರು, ತಪಸ್ವಿಗಳು ಬರೆದಿಟ್ಟ ಕಾಲಜ್ಞಾನಕ್ಕೆ ಎಲ್ಲಿಲ್ಲದ ಮಹತ್ವವಿದೆ. ಇಂಥಹ ಕಾಲಜ್ಞಾನ  ನುಡಿಯುವ ಮಠಗಳಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಬೆಂಕಿ ಮಠ ಅಂತ ಕರೆಯಿಸಿಕೊಳ್ಳುವ ಬಬಲಾದಿ ಮಠವು ಕೂಡ ಒಂದು. ಇಲ್ಲಿ ಶಿವರಾತ್ರಿ ಸಂದರ್ಭದಲ್ಲಿ ನುಡಿಯಲಾಗುವ ಕಾಲಜ್ಞಾನಕ್ಕೆ‌ ಎಲ್ಲಿಲ್ಲದ ಮಹತ್ವವಿದೆ. ಶಿವರಾತ್ರಿ ಕಳೆದ ಮೂರನೇ ದಿನಕ್ಕೆ ಇಲ್ಲಿ ನುಡಿಯುವ ಭವಿಷ್ಯ ಮುಂದಿನ ಒಂದು ವರ್ಷದ ವರೆಗೆ ಪ್ರಸ್ತುತವಾಗಿರುತ್ತೆ. ಇಲ್ಲಿ ಈ ವರೆಗೆ ನುಡಿದ ಕಾಲಜ್ಞಾನ ಸುಳ್ಳಾಗಿಯೆ ಇಲ್ಲ ಎನ್ನುವ ನಂಬಿಕೆಗಳಿ. ಇಂದು 2023ನೇ ಸಾಲಿನ ಕಾಲಜ್ಞಾನವನ್ನ ಬಬಲಾದಿ ಮಠದ ಸಿದ್ದು ಮುತ್ಯಾ ಓದಿ ಹೇಳಿದ್ದಾರೆ.. 

Tap to resize

Latest Videos

ಮತ್ತೆ ಬಬಲಾದಿ ಮಠದಿಂದ ಸ್ಫೋಟಕ ಭವಿಷ್ಯ..!

ಮತ್ತೆ ಬಬಲಾದಿ ಮಠದಲ್ಲಿ ಕೆಂಡದಂತ ಭವಿಷ್ಯ ನುಡಿಯಲಾಗಿದೆ. ಈ ಬಾರಿ ನುಡಿದ ಸ್ಪೋಟಕ ಭವಿಷ್ಯವನ್ನ ಕೇಳಿ ಭಕ್ತರೆ ಥಂಡಾ ಹೊಡೆದಿದ್ದಾರೆ. ಸಿದ್ದು ಮುತ್ಯಾ ನುಡಿದ ನಿಗಿನಿಗಿ ಕೆಂಡದಂತ ಭವಿಷ್ಯ ಆಲಿಸಿದ ಜನರು ಒಂದು ಕ್ಷಣ ಬೆಚ್ಚಿಬಿದ್ದಿದ್ದಾರೆ.. ಮತ್ತೆ ಭೂಕಂಪನ, ರಾಜಕೀಯದಲ್ಲಿ ಊಹಿಸಲಾಗದ ಬದಲಾವಣೆ, ರಾಜ್ಯದಲ್ಲಿ ನಮ್ಮ ನಮ್ಮವರ ನಡುವೆ ಬಡಿದಾಟ-ಹೊಡೆದಾಟ, ಜಗಳ, ದುಷ್ಕೃತ್ಯಗಳು ನಡೆಯಲಿವೆ ಎಂದು ಭಯಾನಕ ಭವಿಷ್ಯ ನುಡಿದಿದ್ದಾರೆ.. ಮತ್ತೊಂದೆಡೆ ಭೂಪ್ರಳಯದ ಜೊತೆ ಜೊತೆಗೆ ಜಲಪ್ರಳಯದ ಎಚ್ಚರಿಕೆಯನ್ನ ಬಬಲಾದಿ ಕಾಲಜ್ಞಾನ ನೀಡಿದ್ದು ಜನರು ಮತ್ತೆ ಕಾಪಾಡು ಸದಾಶಿವಾ ಎಂದು ಜಪ ಮಾಡುತ್ತಿದ್ದಾರೆ..

Earthquake: ಮಹಾ ಭೂಕಂಪನಕ್ಕೆ ಟರ್ಕಿ & ಸಿರಿಯಾ ತತ್ತರ: ನಿಜವಾಯ್ತು ಬಬಲಾದಿ ಮಠದ ಭವಿಷ್ಯ

ರಾಜ್ಯ ರಾಜಕಾರಣದಲ್ಲಿ ತಿರುವು..!

ಚುನಾವಣೆ ಸನ್ನಿಹಿತಿ ಇರುವಾಗಲೇ ಬಬಲಾದಿ ಮಠದಲ್ಲಿ ನುಡಿಯಲಾಗುವ ಕಾರ್ಣಿಕದ ಮೇಲೆ ಬಹಳ ಜನರು ಕಣ್ಣಿಟ್ಟು ಕೂತಿದ್ದರು. ಬಬಲಾದಿ ಕಾಲಜ್ಞಾನ ರಾಜ್ಯ ರಾಜಕಾರಣದಲ್ಲಿ ಎನು ಬಿರುಗಾಳಿ ಎಬ್ಬಿಸಲಿದೆ ಎನ್ನುವ ಬಗ್ಗೆ ಭಕ್ತರು ಕಾತುರರಾಗಿದ್ದರು. ಇದಕ್ಕು ಕಾರಣವು ಇದೆ. ಬಬಲಾದಿ ಮರದಲ್ಲಿ ರಾಜಕಾರಣದ ಬಗ್ಗೆ ನುಡಿಯಲಾದ ಯಾವೊಂದು ಭವಿಷ್ಯವಾಣಿಗಳು ಸುಳ್ಳಾಗಿಲ್ಲ ಎನ್ನುವುದು. ಹೀಗಾಗಿ ಭಕ್ತರು ಬೆಂಕಿ ಬಬಲಾದಿ ಮಠದ ರಾಜಕಾರಣದ ಕೆಂಡದಂತ ಭವಿಷ್ಯ ಕೇಳೋದಕ್ಕೆ ಸಜ್ಜಾಗಿದ್ದರು. ಈ ನಡುವೆ ಸದಾಶಿವ ಅಜ್ಜ ಬರೆದಿಟ್ಟ ಕಾಲಜ್ಞಾನವನ್ನ ಸಿದ್ದು ಮುತ್ಯಾ ಯಥಾವತ್ತಾಗಿ ಓದಿ ಹೇಳಿ ಹೇಳಿದ್ದಾರೆ. ರಾಜ್ಯ ರಾಜಕಾರಣ ಬಗ್ಗೆ ಯಾರೂ ಊಹಿಸದ ಭವಿಷ್ಯ ನುಡಿದಿದ್ದಾರೆ. ರಾಜ್ಯ ರಾಜಕಾರಣಲ್ಲಿ  ತಿರುವು ಉಂಟಾದಿತು ಮಕ್ಕಳಿರ್ಯಾ ಎಂದು ಭವಿಷ್ಯ ನುಡಿದಿದ್ದಾರೆ. ಚುನಾವಣೆ ಮುಂದಿರುವಾಗ ಸಿದ್ದು ಮುತ್ಯಾ ನುಡಿದ ರಾಜಕೀಯ ತಿರುವಿನ ಭವಿಷ್ಯ ಎಲ್ಲೆಡೆ ಸಂಚಲನ ಮೂಡಿಸಿದೆ. ರಾಜಕಾರಣದಲ್ಲೆ ಊಹಿಸಲಾಗದ‌ ತಿರುವು ಉಂಟಾಗಲಿದೆ ಎನ್ನುವ ಭವಿಷ್ಯ ರಾಜಕೀಯ ಪಕ್ಷಗಳನ್ನು ಕಂಗೆಡಿಸಿದೆ. ಮುಂದೆ ಚುನಾವಣೆಯಲ್ಲಿ ಅದೇನು ಕಾದಿದೆಯೋ ಎಂದು ರಾಜಕೀಯ ಧುರೀಣರು ಲೆಕ್ಕಾಚಾರಗಳನ್ನ ಹಾಕ್ತಿದ್ದಾರೆ.. 

ಪ್ರಜೆಗಳಲ್ಲಿ ಏರುಪೇರು, ಜಾತಿ-ಮತಗಳ ಒಲವು..!

ರಾಜಕಾರಣದಲ್ಲಿ ಉಂಟಾಗಲಿರುವ ತಿರುವಿನ ವಿಚಾರವನ್ನ ನುಡಿದಿರುವ ಬಬಲಾದಿ ಮಠ ಚುನಾವಣೆಯ ಹಣೆಬರಹ ಬರೆಯಲಿರುವ ಪ್ರಜೆಗಳ ಬಗ್ಗೆಯೂ ಭವಿಷ್ಯ ನುಡಿದಿದ್ದಾರೆ. ಪ್ರಜೆಗಳಲ್ಲಿ ಏರುಪೇರಾಗಲಿದೆ. ಜಾತಿ-ಮತ, ಬೇಧ-ಭಾವ ಬಗೆಗೆ ಹೆಚ್ಚಿನ ಒಲವು ಐತಿ ಎನ್ನುವ ಮೂಲಕ ರಾಜಕೀಯ ತಿರುವಿನ ಮೂಲವನ್ನ ಇನ್ನು ಸ್ವಲ್ಪ ಬಿಡಿಸಿ ಹೇಳುವ ಪ್ರಯತ್ನ ಮಾಡಿದ್ದಾರೆ.. 

ಸಜ್ಜನರೇ ಆಗಲಿದ್ದಾರೆ ದುರ್ಜನರು.. ಜನರಿಗೆ ಕಾಲಜ್ಞಾನದ ಎಚ್ಚರಿಕೆ..!

ಚುನಾವಣೆ ಹತ್ತಿರದಲ್ಲೆ ಇರುವಾಗ, ಬಬಲಾದಿಯ ಕಾಲಜ್ಞಾನದಲ್ಲಿ ನುಡಿಯಲಾದ ಒಂದೊಂದು ಮಾತುಗಳನ್ನ ಜನರಲ್ಲಿ ಭಯ ಮೂಡಿಸುತ್ತಿವೆ. ನಮ್ಮ‌ ನಮ್ಮಲ್ಲಿಯೆ ಜಗಳ, ಹೊಡೆದಾಟಗಳು ನಡೆಯಲಿವೆ ಎಂದು ಸಿದ್ದು ಮುತ್ಯಾ ಬಹಳ ಸೂಕ್ಷ್ಮವಾಗಿ ಹೇಳಿದ್ದಾರೆ. ಸಜ್ಜನರು ದುರ್ಜನರಾಗುತ್ತಾರೆ ಎನ್ನುವ ಮೂಲಕ ನಂಬಿಕೆ ಇಟ್ಟವರೆ ನಂಬಿಕೆ ದ್ರೋಹ ಮಾಡುವ ಸಾಧ್ಯತೆಗಳಿವೆ ಎನ್ನುವುದನ್ನ ಕಾಲಜ್ಞಾನ ಸ್ಪಷ್ಟವಾಗಿ ಹೇಳಿದೆ.. ಇನ್ನು ರಾಜ್ಯದ ಜನರಿಗೆ ಬಬಲಾದಿ ಕಾಲಜ್ಞಾನ ನೀಡಿದ ಮತ್ತೊಂದು ಎಚ್ಚರಿಕೆ‌ ಎಂಥವರನ್ನ ಭಯಬೀಳಿಸಿದೆ. ರಾಜ್ಯದಲ್ಲಿ ಕೊಲೆ, ಸುಲಿಗೆ, ದರೋಡೆ ಹೆಚ್ಚಲಿವೆಯಂತೆ.. ವೈಶಾಖ-ಜೇಷ್ಠ ಮಾಸದಲ್ಲಿ ಮತ್ತೆ ಸುಖ ಶಾಂತಿ ಸಿಗಲಿದೆಯಂತೆ.. ಸಿದ್ದು ಮುತ್ಯಾರ ನುಡಿದ ಈ ಮಾತು ಕೇಳಿದ ಭಕ್ತರು ಒಂದು ಕ್ಷಣ ಕಂಗಾಲಾಗಿದ್ದಾರೆ..

ಬೆಂಬಿಡದೆ ಕಾಡಲಿದೆ ಭೂಪ್ರಳಯ, ಜಲಪ್ರಳಯ..!

ಕಳೆದ ವರ್ಷ 2022 ರಲ್ಲಿ ಇದೆ ಬಬಲಾದಿ‌ ಮಠದಲ್ಲಿ ಶಿವರಾತ್ರಿಯ ಮೂರನೇ ದಿನಕ್ಕೆ ನುಡಿಯಲಾದ ಕಾಲಜ್ಞಾನದಲ್ಲಿ ಮುಂದಿನ ಒಂದು ವರ್ಷದಲ್ಲಿ ಭೂಕಂಪನ ಆರ್ಭಟಿಸಲಿದೆ‌ ಎನ್ನಲಾಗಿತ್ತು.. ಭೂಕಾಂತಿ‌ ನಡುಗಿತ ಎನ್ನುವ ಮೂಲಕ ಭೂಪ್ರಳಯದ ನಿಖರ ಭವಿಷ್ಯವನ್ನ ಸಿದ್ದು ಮುತ್ಯಾ ನುಡಿದಿದ್ದರು. ಇಲ್ಲಿ ನುಡಿದ ಕಾಲಜ್ಞಾನದಂತೆಯೆ ಟರ್ಕಿ-ಸಿರಿಯಾ ದೇಶಗಳಲ್ಲಿ ಭಯಾನಕ ಭೂಕಂಪನ ನಡೆದಿತ್ತು. ಟರ್ಕಿಯೇ ಜೀವಂತ ಸಮಾಧಿಯಾಗಿತ್ತು. ಈ ಘಟನೆ ಇನ್ನು ಹಸಿಹಸಿಯಾಗಿರುವಾಗಲೇ ಬಬಲಾದಿಯ 2023ರಲ್ಲು ಸ್ಪೋಟಕ ಭವಿಷ್ಯ ನುಡಿಯಲಾಗಿದೆ. ಮತ್ತೆ ಭೂಮಿ ಕುಪ್ಪಳಿಸಿತ್ತು ಮಕ್ಕಳಿರ್ಯಾ ಎನ್ನುವ ಮೂಲಕ ಮತ್ತೆ ಭೂಪ್ರಳಯದ ಎಚ್ಚರಿಕೆಯನ್ನ ಬಬಲಾದಿಯ ಮಠ ನೀಡಿದೆ. ಅಲ್ಲಲ್ಲಿ.. ಮೂಲೆ ಮೂಲೆಗಳಲ್ಲಿ ಭೂಮಿ‌ ಕುಪ್ಪಳಿಸಿತ್ತೊ ಮಕ್ಕಳಿರ್ಯಾ ಎಂದಿದ್ದಾರೆ.  ಈ ಭವಿಷ್ಯ ವಾಣಿ ಕೇಳಿದ ಭಕ್ತರು ನಿಂತಲ್ಲೆ ನಡುಗಿ ಹೋಗಿದ್ದಾರೆ. 

ಮತ್ತೆ ಬಾಧಿಸಲಿದೆ ಜಲಪ್ರಳಯ..!   

ಭೂಪ್ರಳಯದ ಜೊತೆ ಜೊತೆಗೆ ಜಲಪ್ರಳಯದ ಮುನ್ನೆಚ್ಚರಿಕೆಯನ್ನು ಬಬಲಾದಿ ಕಾಲಜ್ಞಾನ ನೀಡಿದೆ. ಮತ್ತೆ ಜಲಪ್ರಳಯದ ಸೂಚನೆ ತಿಳಿಯಿರಣ್ಣ ಎನ್ನುವ ಮೂಲಕ ಬೆಚ್ಚಿ ಬೀಳಿಸುವ ಭವಿಷ್ಯ ನುಡಿದಿದೆ. ಇದೆ ದಿಕ್ಕಿನಲ್ಲಿ ಅಂತೆನಿಲ್ಲ, ಎಲ್ಲಿಯಾದರೂ ಪ್ರವಾಹ ಪರಿಸ್ಥಿತಿ ಉಂಟಾಗಬಹುದು ಎಂದು ಸಿದ್ದು ಮುತ್ಯಾ ಹೇಳಿದ್ದಾರೆ..

ಶಿವರಾತ್ರಿಗೆ ಜಗತ್ತಿನ ಭವಿಷ್ಯ ನುಡಿಯುವ ಬಬಲಾದಿ ಮುತ್ಯಾ: ಈವರೆಗೆ ಹೇಳಿದ್ದೆಲ್ಲ ಭವಿಷ್ಯವೂ ಸತ್ಯವಾಗಿದೆ

ನಮ್ಮ ಯೋಧರಿಗೆ ಜಯ..ಇದೆ‌ ಇನ್ನೊಂದು ಸೂತಕದ ಛಾಯೆ..!

ಯುದ್ಧಗಳ ಬಗ್ಗೆಯೂ ಬಬಲಾದಿ ಮಠ ಈ ಹಿಂದೆ ನಿಖರವಾಗಿ ಭವಿಷ್ಯ ನುಡಿದಿದೆ. ಏರ್ ಸ್ಟ್ರೈಕ್, ಭಾರತ-ಚೀನಾ ನಡುವಿನ ಯುದ್ಧ ಭೀತಿ, ಅಫ್ಘಾನ್ ಮೇಲೆ ತಾಲಿಬಾನಿ ದಾಳಿ, ವಶಕ್ಕೆ ಪಡೆದ ಕುರಿತಾಗಿ ಅಂತರಾಷ್ಟ್ರೀಯ ವಿಪ್ಲವಗಳ ಬಗ್ಗೆ ಕರಾರುವಾಕ್ಕಾಗಿ  ಭವಿಷ್ಯ ನುಡಿದ ಬಬಲಾದಿ ಕಾಲಜ್ಞಾನ ಈ ಬಾರಿ ಸೂಕ್ಷ್ಮ‌ ರೀತಿಯಲ್ಲಿ ಗಡಿಯಲ್ಲಿ ನಡೆಯಬಹುದಾದ ಒಂದು ಬೆಳವಣಿಗೆ ಬಗ್ಗೆ ಮುನ್ಸುಚನೆ ನೀಡಿದೆ. ಗಡಿ ಕಾಯುವ ಯೋಧರಿಗೆ ಜಯ ಉಂಟಾಗುವುದು ಎನ್ನುವ ಮೂಲಕ ಗಡಿಯಲ್ಲಿ ಯುದ್ಧ ಭೀತಿಯ ರೀತಿಯ ಬೆಳವಣಿಗೆಯೊಂದು ನಡೆಯಬಹುದು ಎನ್ನುವುದನ್ನ ಕಾಲಜ್ಞಾನ ಹೇಳಿದೆ. ಇನ್ನೊಂದು ಸೂತಕದ ಛಾಯೆ ಐತಿ ಎನ್ನುವ ಮೂಲಕ ಎಲ್ಲವು ಸರಿ ಇಲ್ಲ ಅನ್ನೋದನ್ನು ಹೇಳಿದೆ..

ಪಾಜಿಟಿವ್ ಭವಿಷ್ಯವನ್ನು ಹೇಳಿದ ಸಿದ್ದು ಮುತ್ಯಾ..!

ಹತ್ತಾರು ಕೆಡಕುಗಳ ಬಗ್ಗೆ ಭವಿಷ್ಯ ಹೇಳಿರುವ ಸಿದ್ದು ಮುತ್ಯಾ ಜನರು ನಿಟ್ಟುಸಿರು ಬಿಡುವ ಕೆಲ‌ ಪಾಸಿಟಿವ್ ಭವಿಷ್ಯವನ್ನು ಹೇಳಿದ್ದಾರೆ.  ರೈತರನ್ನ ಕಂಗೆಡಿಸಿದ್ದ ದನಗಳಿಗೆ ಬಂದಿದ್ದ ಚರ್ಮ ರೋಗ ಆದಷ್ಟು ಬೇಗನೇ ತೊಲಗಲಿದೆ ಎಂದಿದ್ದಾರೆ. ದನಕರುಗಳಿಗೆ ಬಂದ ರೋಗ ಕಡಿಮೆಯಾಗುವ ಕಾಲ ಸನಿಹ ಬಂದಿದೆ‌ ಎನ್ನುವ ಮೂಲಕ ರೈತರಲ್ಲಿ ಬಬಲಾದಿ ಮಠ ಭರವಸೆ ಮೂಡಿಸಿದೆ. ಮುಂಗಾರಿ ಮಳೆ 9 ಅಣೆ, ಹಿಂಗಾರಿ 10 ಅಣೆ ಆಗಲಿದೆ. ಮಕ್ಕಳಿಗೆ ತಂದೆ-ತಾಯಿಗಳ ಮೇಲೆ‌ ಪ್ರೀತಿ ಹೆಚ್ಚಾಗಲಿದೆ. ಇದರಿಂದ ವೃದ್ಧಾಶ್ರಮ ಕಡಿಮೆಯಾಗಲಿವೆ ಎಂದಿದ್ದಾರೆ.

click me!