Uttara Kannada : ಜನರ ಹಲವು ವರ್ಷದ ಕನಸು ನನಸು: ಶಿವರಾಮ ಹೆಬ್ಬಾರ್

By Kannadaprabha News  |  First Published Feb 23, 2023, 8:43 AM IST

ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಬುಧವಾರ ಚಂದಗುಳಿ ಮತ್ತು ಕಣ್ಣಿಗೇರಿ ಪಂಚಾಯಿತಿ ನಡುವೆ ಸಂಪರ್ಕ ಕಲ್ಪಿಸುವ ಸೇತುವೆ ಜೊತೆಗೆ, 10 ಕಿ.ಮೀ ದೂರದ ರಸ್ತೆಗೆ ಪಿ.ಎಂ.ಜಿ.ಎಸ್‌.ವೈ ಯೋಜನೆಯಡಿ .10 ಕೋಟಿ ವೆಚ್ಚದಲ್ಲಿ ಡಾಂಬರೀಕರಣ ಕಾಮಗಾರಿಯನ್ನು ಉದ್ಘಾಟಿಸಿ, ಈ ಪ್ರದೇಶದ ಜನರ ಅನುಕೂಲಕ್ಕೆ ನೂತನ ಬಸ್‌ ಸಂಚಾರಕ್ಕೆ ಚಾಲನೆ ನೀಡಿದರು.


ಯಲ್ಲಾಪುರ (ಫೆ.23) : ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಬುಧವಾರ ಚಂದಗುಳಿ ಮತ್ತು ಕಣ್ಣಿಗೇರಿ ಪಂಚಾಯಿತಿ ನಡುವೆ ಸಂಪರ್ಕ ಕಲ್ಪಿಸುವ ಸೇತುವೆ ಜೊತೆಗೆ, 10 ಕಿ.ಮೀ ದೂರದ ರಸ್ತೆಗೆ ಪಿ.ಎಂ.ಜಿ.ಎಸ್‌.ವೈ ಯೋಜನೆಯಡಿ .10 ಕೋಟಿ ವೆಚ್ಚದಲ್ಲಿ ಡಾಂಬರೀಕರಣ ಕಾಮಗಾರಿಯನ್ನು ಉದ್ಘಾಟಿಸಿ, ಈ ಪ್ರದೇಶದ ಜನರ ಅನುಕೂಲಕ್ಕೆ ನೂತನ ಬಸ್‌ ಸಂಚಾರಕ್ಕೆ ಚಾಲನೆ ನೀಡಿದರು.

ಈ ಭಾಗದ ಜನರ ಬಹು ವರ್ಷದ ಕನಸು ನನಸಾಗಿದೆ. ಈ ಪ್ರದೇಶದಿಂದ ಅನೇಕ ವಿದ್ಯಾರ್ಥಿಗಳು(Students) ಮತ್ತು ಮಹಿಳೆಯರು(Women) ಉದ್ಯೋಗ ವ್ಯವಹಾರಕ್ಕಾಗಿ ಪ್ರತಿನಿತ್ಯ ಬರುವವರಿಗೆ ಈ ಬಸ್‌ ಸಂಚಾರ ಅನುಕೂಲವಾಗಿದೆ. ಈ ಪ್ರದೇಶದಲ್ಲಿ ಹಿಂದುಳಿದ ಬಡವರೇ ಹೆಚ್ಚು ಜನರಿದ್ದಾರೆ. ನಮ್ಮ ತುರ್ತು ವಿನಂತಿಯ ಮೆರೆಗೆ ಸಾರಿಗೆ ಅಧಿಕಾರಿಗಳು ಬೆಳಿಗ್ಗೆ 8 ರಿಂದ ಯಲ್ಲಾಪುರ, ಮಾವಳ್ಳಿ, ಲಿಂಗ್ಯಾನ್‌ಕೊಪ್ಪದ ಮೂಲಕ 9 ಗಂಟೆಗೆ ತಲುಪಿ, ಸಂಜೆ 5 ಗಂಟೆಗೆ ಪುನಃ ಲಿಂಗ್ಯಾನಕೊಪ್ಪದ ಮೂಲಕ ಮರು ಪ್ರಯಾಣ ಮಾಡುವುದು ಎಂದ ಸಚಿವರು, ಈ ರಸ್ತೆ ಮತ್ತು ಉಪಳೇಶ್ವರ- ನಂದೋಳ್ಳಿ ರಸ್ತೆ ನಿರ್ಮಿಸಲಾಗಿದ್ದು, ಅದಕ್ಕೆ ಸಂಸದ ಅನಂತಕುಮಾರ ಹೆಗಡೆಯವರು ಕೂಡಾ ನನಗೆ ಸಹಕಾರ ನೀಡಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಶೇ. 50ರ ಅನುದಾನ ಅಡಿಯಲ್ಲಿ ನಿರ್ಮಿಸಲಾಗಿದೆ ಎಂದರು.

Tap to resize

Latest Videos

ಬಿಜೆಪಿಯಲ್ಲಿಯೇ ಕಾಗೇರಿಯವ್ರನ್ನ ಸೋಲಿಸಲು ನಡೆಯುತ್ತಿದೆಯಾ ತಯಾರಿ?

ಪಂಚಾಯತ್‌ ರಾಜ್‌(Panchayat Raj) ವಿಕೇಂದ್ರೀಕರಣ ಉಪಾಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಒಳ್ಳೆಯ ರಸ್ತೆ ನಿರ್ಮಾಣಮಾಡಿದ್ದಾರೆ. ಕ್ಷೇತ್ರದ ಬಗ್ಗೆ ಸಂಪೂರ್ಣ ಅರಿವು ಹೊಂದಿದ ಸಚಿವರು ಎಲ್ಲ ವರ್ಗದ ಜನರ ಕಷ್ಟಕ್ಕೆ ಸದಾ ಸ್ಪಂದಿಸುತ್ತಾ ಅವಿಶ್ರಾಂತ ಕೆಲಸ ಮಾಡಿ ಜನರ ಮನಸ್ಸಿನಲ್ಲಿ ನೆಲೆ ನಿಂತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ಗೋಪಾಲಕೃಷ್ಣ ಗಾಂವ್ಕರ್‌, ಕಣ್ಣೀಗೇರಿ ಪಂಚಾಯತ್‌ ಅಧ್ಯಕ್ಷ ವಿಶ್ವೇಶ್ವರ ಹೆಗಡೆ, ಪ್ರಮುಖರಾದ ರಾಮು ನಾಯ್ಕ, ವಿಜಯ ಮಿರಾಶಿ, ಮುರಳಿ ಹೆಗಡೆ, ರವಿ ಭಟ್ಟಬರಗದ್ದೆ, ಆರ್‌.ಎಸ್‌. ಭಟ್ಟ, ಘಟಕ ವ್ಯವಸ್ಥಾಪಕ ಸುರೇಶ ವೆರ್ಣೇಕರ್‌ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು. ಗುರುಪಾದಯ್ಯ ನಂದೋಳ್ಳಿಮಠ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು, ಮಹಾಭಲೇಶ್ವರ ಭಟ್ಟವಂದಿಸಿದರು.

ಶಿರಸಿಗೆ ಬಂತು ಮೊದಲ ಐಟಿ ಕಂಪನಿ ಆಲ್ಟ್‌ ಡಿಜಿಟಲ್‌ ಟೆಕ್ನಾಲಜಿ!

click me!