ಪ್ರವಾಸಿಗರನ್ನು ಆಕರ್ಷಿಸಲು ಈ ಯುದ್ಧ ವಿಮಾನ ಪ್ರಮುಖ ಪಾತ್ರ ವಹಿಸಲಿದ್ದು, ಸದ್ಯ ಇದರ ಒಂದೊಂದೇ ಬಿಡಿ ಭಾಗಗಳನ್ನು ತಂದು ಜೋಡಿಸಲಾಗುತ್ತಿದೆ. ಮುಂದಿನ ತಿಂಗಳಲ್ಲಿ ಈ ಯುದ್ಧ ವಿಮಾನ ಎದ್ದು ನಿಲ್ಲಲಿದ್ದು, ರಾಜ್ಯ ಹಾಗೂ ಹೊರ ರಾಜ್ಯಗಳ ಪ್ರವಾಸಿಗರು ಕಾರವಾರಕ್ಕೆ ಬಂದು ಈ ಸುಂದರ ಯುದ್ಧ ವಿಮಾನವನ್ನು ವೀಕ್ಷಿಸಬಹುದಾಗಿದೆ.
ಉತ್ತರಕನ್ನಡ(ಅ.19): ಪ್ರವಾಸಿಗರ ಪ್ರಮುಖ ಆಕರ್ಷಣಾ ಕೇಂದ್ರವಾದ ಉತ್ತರಕನ್ನಡ ಜಿಲ್ಲೆಯ ಕಾರವಾರದ ಸುಂದರತೆಯ ಕಿರೀಟಕ್ಕೆ ಇದೀಗ ಟ್ಯುಪೋಲೆವ್ ಯುದ್ಧವಿಮಾನ ಅನ್ನೋ ಗರಿ ಸೇರ್ಪಡೆಗೊಳ್ಳುತ್ತಿದೆ. ಕಾರವಾರದ ರವೀಂದ್ರನಾಥ ಟಾಗೋರ್ ಬೀಚ್‌ನಲ್ಲಿ ಈಗಾಗಲೇ ವಾರ್ ಶಿಪ್ ಮ್ಯೂಸಿಯಂ ಇದ್ದು, ಇದರ ಪಕ್ಕದಲ್ಲಿರುವ ಜಾಗದಲ್ಲೇ ಟ್ಯುಪೋಲೆವ್ ಯುದ್ಧ ವಿಮಾನವನ್ನು ಕೂಡ ಭದ್ರವಾಗಿ ನಿಲ್ಲಿಸಲಾಗುತ್ತಿದೆ.
ಟ್ಯುಪೋಲೆವ್ 142 ಎಂ ಏರ್‌ಕ್ರಾಫ್ಟ್ 1988ರಲ್ಲಿ ಭಾರತದ ನೌಕಾಸೇನೆಗೆ ಸೇರ್ಪಡೆಗೊಂಡಿದ್ದು, 2017ರಲ್ಲಿ ಈ ಯುದ್ಧವಿಮಾನ ಸೇವೆಯಿಂದ ನಿವೃತ್ತಿ ಪಡೆದುಕೊಂಡಿತ್ತು. ಪ್ರಸ್ತುತ, ನೌಕಾಸೇನೆಯ ಸಹಾಯದಲ್ಲಿ ಉತ್ತರಕನ್ನಡ ಜಿಲ್ಲಾಡಳಿತ ಕಾರವಾರದ ರವೀಂದ್ರನಾಥ ಟಾಗೋರ್ ಬೀಚ್‌ನಲ್ಲಿ ಇದನ್ನು ವಸ್ತು ಸಂಗ್ರಹಾಲಯವನ್ನಾಗಿ ಸ್ಥಾಪಿಸುತ್ತಿದೆ. ಇದರ ಅಳವಡಿಕೆಗೆ ಸರಕಾರದಿಂದ ಈಗಾಗಲೇ 2 ಕೋಟಿ ರೂ. ಬಿಡುಗಡೆಯಾಗಿದ್ದು, ಇದರ ಅಳವಡಿಕಾ ಕಾರ್ಯದ ನೇತೃತ್ವವನ್ನು ನಿರ್ಮಿತಿ ಕೇಂದ್ರಕ್ಕೆ ನೀಡಲಾಗಿದೆ.
undefined
ಉತ್ತರ ಕನ್ನಡ: ಮದುವೆಯಾಗಿ ಮಕ್ಕಳಿದ್ರೂ ಬಿಡದ ಆ ಒಂದು ಚಟ, ಹೆಂಡತಿಯ ಕತ್ತು ಸೀಳಿ ಕೊಲೆ ಮಾಡಿದ ಗಂಡ
ಪ್ರವಾಸಿಗರನ್ನು ಆಕರ್ಷಿಸಲು ಈ ಯುದ್ಧ ವಿಮಾನ ಪ್ರಮುಖ ಪಾತ್ರ ವಹಿಸಲಿದ್ದು, ಸದ್ಯ ಇದರ ಒಂದೊಂದೇ ಬಿಡಿ ಭಾಗಗಳನ್ನು ತಂದು ಜೋಡಿಸಲಾಗುತ್ತಿದೆ. ಮುಂದಿನ ತಿಂಗಳಲ್ಲಿ ಈ ಯುದ್ಧ ವಿಮಾನ ಎದ್ದು ನಿಲ್ಲಲಿದ್ದು, ರಾಜ್ಯ ಹಾಗೂ ಹೊರ ರಾಜ್ಯಗಳ ಪ್ರವಾಸಿಗರು ಕಾರವಾರಕ್ಕೆ ಬಂದು ಈ ಸುಂದರ ಯುದ್ಧ ವಿಮಾನವನ್ನು ವೀಕ್ಷಿಸಬಹುದಾಗಿದೆ. ಇನ್ನು ಇದರ ಪಕ್ಕದಲ್ಲಿರುವ ವಾರ್‌ಶಿಪ್ ಮ್ಯೂಸಿಯಂಗೆ ಈಗಾಗಲೇ ಉತ್ತರಕನ್ನಡ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಭೇಟಿ ನೀಡಿ ವೀಕ್ಷಣೆ ಮಾಡಿದ್ದು, ಈ ಯುದ್ಧನೌಕೆ ಮ್ಯೂಸಿಯಂ ಸ್ಥಳದಲ್ಲಿ ನೂತನವಾಗಿ ಸಿದ್ಧಗೊಳ್ಳುತ್ತಿರುವ ಟ್ಯುಪೋಲೆವ್ ಯುದ್ಧವಿಮಾನ ಮ್ಯೂಸಿಯಂ ಕೆಲಸವನ್ನು ಸಹ ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ.
ಕಳೆದ 15 ದಿನಗಳಿಂದ ಯುದ್ಧವಿಮಾನದ ಜೋಡಣಾ ಕಾರ್ಯ ನಡೆಯುತ್ತಿದ್ದು, ಮುಂದಿನ ತಿಂಗಳ ಅವಧಿಯಲ್ಲಿ ಯುದ್ಧವಿಮಾನ ವಸ್ತುಸಂಗ್ರಹಾಲಯವೂ ತ ಸಾರ್ವಜನಿಕರ ವೀಕ್ಷಣೆಗೆ ತಯಾರಾಗಿ ನಿಲ್ಲಲಿದೆ.