ಚಿತ್ರದುರ್ಗ: ಮೈನ್ಸ್ ಲಾರಿಗಳ ಹಾವಳಿಯಿಂದ ಬೇಸತ್ತು ಬೀದಿಗಳಿದ ಗ್ರಾಮಸ್ಥರು

By Girish GoudarFirst Published Oct 19, 2023, 9:02 PM IST
Highlights

ಸುಮಾರು ಹದಿನೈದು ದಿನಗಳಿಂದ ಗಣಿ ಲಾರಿಗಳ ಓಡಾಟದಿಂದಾಗಿ ರಸ್ತೆ ಬದಿಯ ಜಮೀನಿನಲ್ಲಿರುವ ಬಾಳೆ, ಮೆಕ್ಕೆಜೋಳ, ಸೂರ್ಯಕಾಂತಿ‌ ಸೇರಿದಂತೆ ವಿವಿಧ‌ ಬೆಳೆಗಳು ಸರ್ವನಾಶವಾಗ್ತಿವೆ. ಅಂತರ್ಜಲ ಮಟ್ಟ ಕುಸಿದಿದೆ. ಅಲ್ಲದೇ ಈವರೆಗೆ ಕೇವಲ 1 ಮಿಲಿಯನ್ ಟನ್ ಮಾತ್ರ ಲಾರಿಗಳಲ್ಲಿ ಮೈನ್ಸ್ ಸಾಗಣೆ ನಡೆಯುತ್ತಿತ್ತು. ಇದರಿಂದಾಗಿ ಇಲ್ಲಿನ ರಸ್ತೆಗಳೆಲ್ಲಾ‌ ಹದಗೆಟ್ಟಿದ್ದವು. ಇದುವರೆಗೂ ಯಾವುದೇ ಸರ್ಕಾರ ಹಾಗೂ ಜಿಲ್ಲಾಡಳಿತವಾಗಲಿ ಗಣಿಗಾರಿಕೆಗೆ ಕಡಿವಾಣ ಹಾಕಲು ಮುಂದಾಗಿಲ್ಲ. 

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ(ಅ.19):  ಗಣಿನಾಡು ಅಂದ್ರೆ ಬಳ್ಳಾರಿ ನೆನಪಾಗುತ್ತೆ. ಆದ್ರೆ ಬಳ್ಳಾರಿಯನ್ನೆ  ಮೀರಿಸುವಂತೆ  ಕೋಟೆನಾಡು ಚಿತ್ರದುರ್ಗದಲ್ಲಿ ನಡೆಯುತ್ತಿರುವ ಗಣಿಗಾರಿಕೆ ಓಡಾಡುವ ಗಣಿ ಲಾರಿಗಳ ಓಡಾಟದಿಂದ ಜನರು ಹೈರಾಣಾಗಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.

ನೋಡಿ ಹೀಗೆ ದಾರಿಯುದ್ದಕ್ಕೂ ಸಾಲುಗಟ್ಟಿ ನಿಂತಿರೋ ಗಣಿ ಲಾರಿಗಳು. ಗಣಿ ಧೂಳಿಗೆ ಕೆಂಪಗೆ ಕಲರ್ ಫುಲ್ ಆದ ರಸ್ತೆ ಬದಿಯ ಜಮೀನುಗಳಲ್ಲಿ‌ ಮಕ್ಕೆಜೋಳ ಬೆಳೆ. ಗಣಿ ಲಾರಿಗಳ ಓಡಾಟದಿಂದ ಬೇಸತ್ತು ಅನಿರ್ದಿಷ್ಟಾವಧಿ ಸತ್ಯಾಗ್ರಹ ಮಾಡ್ತಿರೋ ಗ್ರಾಮಸ್ಥರು. ಈ ದೃಶ್ಯಗಳು ಕಂಡು ಬಂದಿದ್ದು ಚಿತ್ರದುರ್ಗ ತಾಲ್ಲೂಕಿನ ಕಡಲೇಗುದ್ದು ಗ್ರಾಮದ ಬಳಿ. ಹೌದು, ಸುಮಾರು ಹದಿನೈದು ದಿನಗಳಿಂದ ಗಣಿ ಲಾರಿಗಳ ಓಡಾಟದಿಂದಾಗಿ ರಸ್ತೆ ಬದಿಯ ಜಮೀನಿನಲ್ಲಿರುವ ಬಾಳೆ, ಮೆಕ್ಕೆಜೋಳ, ಸೂರ್ಯಕಾಂತಿ‌ ಸೇರಿದಂತೆ ವಿವಿಧ‌ ಬೆಳೆಗಳು ಸರ್ವನಾಶವಾಗ್ತಿವೆ. ಅಂತರ್ಜಲ ಮಟ್ಟ ಕುಸಿದಿದೆ. ಅಲ್ಲದೇ ಈವರೆಗೆ ಕೇವಲ 1 ಮಿಲಿಯನ್ ಟನ್ ಮಾತ್ರ ಲಾರಿಗಳಲ್ಲಿ ಮೈನ್ಸ್ ಸಾಗಣೆ ನಡೆಯುತ್ತಿತ್ತು. ಇದರಿಂದಾಗಿ ಇಲ್ಲಿನ ರಸ್ತೆಗಳೆಲ್ಲಾ‌ ಹದಗೆಟ್ಟಿದ್ದವು. ಇದುವರೆಗೂ ಯಾವುದೇ ಸರ್ಕಾರ ಹಾಗೂ ಜಿಲ್ಲಾಡಳಿತವಾಗಲಿ ಗಣಿಗಾರಿಕೆಗೆ ಕಡಿವಾಣ ಹಾಕಲು ಮುಂದಾಗಿಲ್ಲ. ಮೇಲಾಗಿ ಇಲ್ಲಿ ಓಡಾಡುವ ಲಾರಿ ಚಾಲಕರು ಹಾಗೂ ಮಾಲೀಕರು ರೈತರ ಮೇಲೆ ದೌರ್ಜನ್ಯ ಮಾಡಿ, ಲಾರಿಗಳ ಓಡಾಟವನ್ನು ನಡೆಸುತ್ತಾರೆ. ಇದ್ರಿಂದಾಗಿ ನಮ್ಮ ಜಮೀನುಗಳಲ್ಲಿ ಇರುವ ಬೆಳೆಯೆಲ್ಲಾ ನಾಶವಾಗ್ತಿವೆ. ಮೈನಿಂಗ್ ಗಾಗಿಯೇ ಇರುವ ರಸ್ತೆಯಲ್ಲಿ ಲಾರಿಗಳು ಓಡಾಡಿದ್ರೆ ನಮ್ಮದೇನು ಅಭ್ಯಂತ್ರವಿಲ್ಲ. ಆದ್ರೆ ಅನುಮತಿ ಇಲ್ಲದೇ ಇರುವ ಗ್ರಾಮದ ರಸ್ತೆಯಲ್ಲಿ ಲಾರಿಗಳು ಓಡಾಟ ಮಾಡ್ತಿರೋದು ನಮಗೆ ಸಾಕಷ್ಟು ತೊಂದರೆ ತಂದೊಡ್ಡಿದೆ ಎಂದು ಕಡಲೇಗುದ್ದು  ಗ್ರಾಮಸ್ಥ ಲೋಕೇಶ್ ತಮ್ಮ ಅಳಲು ತೋಡಿಕೊಂಡರು.

ಗೋವಾದ ಅಕ್ರಮ ಮದ್ಯ ಸಾಗಾಣಿಕೆ ತಡೆಗಟ್ಟಲು ಸಚಿವ ತಿಮ್ಮಾಪುರ ತಾಕೀತು

ಇನ್ನು ಭೀಮಸಮುದ್ರ, ಹಿರೇ ಗುಂಟನೂರು, ಕಡಲೇಗುದ್ದು ಮಾನಂಗಿ, ಹಾಗು ಸಿದ್ದಾಪುರದ ಗ್ರಾಮದ ಮಾರ್ಗವಾಗಿ ಚಿತ್ರದುರ್ಗಕ್ಕೆ  ಬರುವ 10 ಕಿಲೋಮೀಟರ್  ರಸ್ತೆ ನರಕಕ್ಕೆ ಸಮ ಎನ್ನುವಂತಾಗಿದೆ. ಅಲ್ಲದೇ  ಲಾರಿಗಳ ಓಡಾಟದಿಂದಾಗಿ ಮಕ್ಕಳನ್ನು ಮನೆಯಿಂದ ಹೊರ ಬಿಡದೇ ಕೂಡಿ ಹಾಕುವಂತಾಗಿದ್ದೂ, ಮಕ್ಕಳ ಆರೋಗ್ಯ ಮೇಲೂ  ದುಷ್ಪರಿಣಾಮ ಬೀರುವ ಭೀತಿ ಶುರುವಾಗಿದೆ. ಇದ್ರಿಂದಾಗಿ ಬೇಸತ್ತು ಗ್ರಾಮಸ್ಥರೆಲ್ಲಾ ಅನಿರ್ದಿಷ್ಟವಾಧಿ ಸತ್ಯಾಗ್ರಹ ಮಾಡ್ತಿದ್ದೀವಿ. ಇನ್ನಾದ್ರು ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಗಣಿ ಲಾರಿಗಳಿಗೆ ಬ್ರೇಕ್ ಹಾಕಿದ್ರೆ ಒಳ್ಳೆಯದು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರಸ್ತೆ ತಡೆದು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಒಟ್ಟಾರೆ ಗಣಿಗಾರಿಕೆಯಿಂದ ಕೋಟೆನಾಡಿನ ಜನರಿಗೆ ಲಾಭಕ್ಕಿಂತ‌ ನಷ್ಟವೇ ಹೆಚ್ಚಾಗಿದೆ. ಜಮೀನಿನಲ್ಲಿ ಬೆಳೆದ ಬೆಳೆ ಹಾಳಾಗ್ತಿದೆ, ರಸ್ತೆಗಳು ವಿನಾಶದ ಅಂಚಿನಲ್ಲಿವೆ. ಹೀಗಾಗಿ ವೇಗವಾಗಿ ಓಡಾಡುವಗಣಿ ಲಾರಿಗಳ ಮಧ್ಯೆ ಜನರು ಆತಂಕದಿಂದ ಬದುಕುವಂತಾಗಿದೆ.

click me!