
ವಿಜಯನಗರ(ಜು.24): ಮಲೆನಾಡು ಭಾಗದಲ್ಲಿ ವ್ಯಾಪಕ ಮಳೆಯಾದ ಪರಿಣಾಮ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿರುವ ತುಂಗಭದ್ರಾ ಜಲಾಶಯ ಬಹುತೇಕ ಭರ್ತಿಯಾಗಿದೆ. ರಾಜ್ಯದ ಎರಡನೆ ಅತಿದೊಡ್ಡ ಜಲಾಶಯ ಬಹುತೇಕ ಭರ್ತಿಯಾಗಿದೆ.
105 ಟಿಎಂಸಿ ಸಾಮಾರ್ಥ್ಯದ ಜಲಾಶಯದಲ್ಲಿಗ 98 ಟಿಎಂಸಿ ನೀರು ತುಂಬಿದೆ. 1633 ಅಡಿ ಇರುವ ಜಲಾಶಯ 1631.28 ತುಂಬಿದೆ. 87 ಸಾವಿರ ಕ್ಯೂಸೆಕ್ ಒಳಹರಿವು ಇದೆ.
ಉತ್ತರಕನ್ನಡ: ಶಿರೂರು ಗುಡ್ಡ ಕುಸಿತ ದುರ್ಘಟನೆಯಲ್ಲಿ ನಾಪತ್ತೆಯಾಗಿದ್ದ ಲಾರಿ ಪತ್ತೆ
ಜಲಾಶಯದ 10 ಗೇಟ್‌ಗಳನ್ನು 1 ಅಡಿ ಎತ್ತರಿಸಿ 20 ಸಾವಿರ ಕ್ಯೂಸೆಕ್ ನದಿಗೆ ಹರಿಬಿಡಲಾಗಿದೆ. ನದಿ ಪಾತ್ರದ ಹಳ್ಳಿಗಳಿಗೆ ಮತ್ತು ಹಂಪಿಗೆ ಹೊಸಪೇಟೆಯ ಎಚ್ಚರಿಕೆ ಸೂಚನೆ ನೀಡಲಾಗಿದೆ.