ಉತ್ತರಕನ್ನಡ: ಶಿರೂರು ಗುಡ್ಡ ಕುಸಿತ ದುರ್ಘಟನೆಯಲ್ಲಿ ನಾಪತ್ತೆಯಾಗಿದ್ದ ಲಾರಿ ಪತ್ತೆ

By Girish Goudar  |  First Published Jul 24, 2024, 5:57 PM IST

ಗುಡ್ಡ ಕುಸಿತದ ಸ್ಥಳದಲ್ಲಿ ಲಾರಿ ಇಲ್ಲ ಪತ್ತೆಯಾಗಿಲ್ಲ. ಗಂಗಾವಳಿ ನದಿಯಲ್ಲಿ ಲಾರಿ ಬಿದ್ದಿರುವುದು ಪತ್ತೆಯಾಗಿದೆ. ಕಾರ್ಯಾಚರಣೆ ವೇಳೆ ಕಬ್ಬಿಣ ತಾಗಿದ ಅನುಭವವಾಗಿದೆ. ಈ ಹಿನ್ನಲೆಯಲ್ಲಿ ಲಾರಿ ಇರಬಹುದು ಎಂದು ಸಿಬ್ಬಂದಿ ತಿಳಿಸಿದೆ. 

ಕಾರವಾರ(ಜು.24):  ಉತ್ತರಕನ್ನಡ ಜಿಲ್ಲೆಯ ಅಂಕೋಲಾದ ಶಿರೂರು ಗುಡ್ಡ ಕುಸಿತ ದುರ್ಘಟನೆಯಲ್ಲಿ ನಾಪತ್ತೆಯಾಗಿದ್ದ ಲಾರಿ ಪತ್ತೆಯಾಗಿದೆ.  ಪೋಕ್ಲೈನ್‌ನಲ್ಲಿ ಕಾರ್ಯಾಚರಣೆ ಮಾಡುವ ವೇಳೆ ಲಾರಿ ಪತ್ತೆಯಾಗಿದೆ.  ಪತ್ತೆಯಾದ ಭಾರತ್ ಬೆಂಜ್ ಲಾರಿ ಕೇರಳ ಮೂಲದ್ದು ಎಂದು ತಿಳಿದು ಬಂದಿದೆ. 

ಭಾರತ್ ಬೆಂಜ್ ಲಾರಿ ಚಾಲಕ ಕೇರಳ ಮೂಲದ ಅರ್ಜುನ್ ಎಂಬ ಚಾಲಕ ಸಹ ನಾಪತ್ತೆಯಾಗಿದ್ದ. ಆದರೆ, ಇದೀಗ ಪತ್ತೆಯಾದ ಭಾರತ್ ಬೆಂಜ್ ಲಾರಿ ಅರ್ಜುನ ಇದ್ದ ಲಾರಿನಾ? ಎಂಬುದರ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ. 

Tap to resize

Latest Videos

undefined

ಶಿರೂರು ಗುಡ್ಡ ಕುಸಿತ: ನೀವು ಹೇಳಿದ ಹಾಗೆ ಕೇಳಲು ನಾವು ಕೂತಿಲ್ಲ, ಐಆರ್‌ಬಿಗೆ ಅಧಿಕಾರಿಗಳಿಗೆ ಸಿದ್ದರಾಮಯ್ಯ ಕ್ಲಾಸ್..!

ಗುಡ್ಡ ಕುಸಿತದ ಸ್ಥಳದಲ್ಲಿ ಲಾರಿ ಇಲ್ಲ ಪತ್ತೆಯಾಗಿಲ್ಲ. ಗಂಗಾವಳಿ ನದಿಯಲ್ಲಿ ಲಾರಿ ಬಿದ್ದಿರುವುದು ಪತ್ತೆಯಾಗಿದೆ. ಕಾರ್ಯಾಚರಣೆ ವೇಳೆ ಕಬ್ಬಿಣ ತಾಗಿದ ಅನುಭವವಾಗಿದೆ. ಈ ಹಿನ್ನಲೆಯಲ್ಲಿ ಲಾರಿ ಇರಬಹುದು ಎಂದು ಸಿಬ್ಬಂದಿ ತಿಳಿಸಿದೆ. 

click me!