
ಶಿವಮೊಗ್ಗ [ಆ.10]: ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಪ್ರವಾಹದಿಂದ ಜನರು ತತ್ತರಿಸುತ್ತಿದ್ದಾರೆ. ವರುಣನ ಆರ್ಭಟ ಮುಂದುವರಿದಿದೆ. ಜನಜೀವನ ಅಸ್ತವ್ಯಸ್ತವಾಗಿದೆ.
ತುಂಗಾನದಿಯಲ್ಲಿ ನೀರಿನ ಪ್ರಮಾಣದ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಶಿವಮೊಗ್ಗ ನಗರಕ್ಕೆ ನೀರು ನುಗ್ಗುತ್ತಿದೆ. ನದಿ ಪಾತ್ರದ ಜನರು ಸುರಕ್ಷಿತ ಪ್ರದೇಶಗಳಿಗೆ ತೆರಳುತ್ತಿದ್ದಾರೆ.
ಶಿವಮೊಗ್ಗ ನಗರದ ಹಲವು ಬಡಾವಣೆಗಳು ನೀರಿನಲ್ಲಿ ಮುಳುಗುತ್ತಿದ್ದು ಜನರು ಪರದಾಡುವಂತಾಗಿದೆ. ತುಂಗಾ ನದಿಯ ಪ್ರವಾಹದಿಂದಾಗಿ ಇಲ್ಲಿನ ಸಿದ್ದಯ್ಯ ರಸ್ತೆ, ಕುಂಬಾರಗುಂಡಿ, ವಿದ್ಯಾನಗರ, ಚಿಕ್ಕಲ್, ಬಾಪೂಜಿ ನಗರ, ಮೊದಲಾದ ಕಡೆಗಳಲ್ಲಿ ರಸ್ತೆಗೆ ನೀರು ನುಗ್ಗಿ ಸಂಚಾರ ಅಸ್ತವ್ಯಸ್ತವಾಗಿದೆ.
ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಆಶ್ಲೇಷ ಮಳೆಯ ಅಬ್ಬರ ಮುಂದುವರಿದಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗಿ ಜನತೆ ಪರದಾಡುತ್ತಿದ್ದಾರೆ.