Tumkur: ಜಿಲ್ಲಾ ಕಾರಾಗೃಹದಲ್ಲಿ ಲಂಚಾವತಾರ: ಕೈದಿಗಳ ಬಂಧುಗಳಿಂದ ಹಣ ವಸೂಲಿ

By Sathish Kumar KH  |  First Published Jan 18, 2023, 11:01 PM IST

ಬಂಧಿಖಾನೆ ನಿವಾಸಿಗಳನ್ನು ನೋಡಲು ಬಂದರಿಂದ ಹಣ ಪೀಕುತ್ತಿರುವ ಜೈಲು ಸಿಬ್ಬಂದಿ
ತುಮಕೂರು ಜಿಲ್ಲಾ ಕಾರಾಗೃಹದ ಲಂಚಾವತಾರದ ಕರ್ಮಕಾಂಡ
ಜಿಲ್ಲಾ ಕಾರಾಗೃಹದ ಅಧೀಕ್ಷಕಿ ಶಾಂತಶ್ರೀ ವಿರುದ್ದ ದೂರು


ವರದಿ : ಮಹಂತೇಶ್ ಕುಮಾರ್ ಏಷ್ಯಾನೆಟ್ ಸುವರ್ಣ ನ್ಯೂಸ್‌ 

ತುಮಕೂರು (ಜ.18): ಅಪರಾಧ ದುಷ್ಕೃತ್ಯಗಳ ಮಾಡಿ ಬಂದ ಆರೋಪಿ, ಅಪರಾಧಿಗಳನ್ನು ಬದಲಾವಣೆ ತಂದು ಉತ್ತಮ ಪ್ರಜೆಯಾಗಿ ರೂಪಿಸಬೇಕಾಗಿದ್ದ ಕಾರಾಗೃಹವೇ ಲಂಚಾವತಾರದ ಅಡ್ಡೆಯಾಗಿದೆ. ತುಮಕೂರು ಜಿಲ್ಲಾ ಕಾರಾಗೃಹದಲ್ಲಿ ಅಕ್ರಮಗಳ ಸರಮಾಲೆಯೇ ಸೃಷ್ಟಿಯಾಗಿದೆ.  ಕಾರಾಗೃಹದಲ್ಲಿಂದು ಲಂಚ ಬಾಕ ಅಧಿಕಾರಿಗಳ ಹಾವಳಿ ಹೆಚ್ಚಾಗಿದೆಯಲ್ಲದೇ ಊಟ ಕೊಡಲು ಬಂದ ಸಂಬಂಧಿಕರಿಂದಲೇ ಹಣ ಪೀಕುತ್ತಿದ್ದಾರೆ ಎನ್ನುವ ದೂರು ಕೇಳಿಬಂದಿದೆ.

Latest Videos

undefined

ತುಮಕೂರು ಜಿಲ್ಲಾ ಕಾರಾಗೃಹದಲ್ಲಿನ ಅವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿಗಳಿಗೂ ಸೇರಿದಂತೆ ಹಲವರಿಗೆ ದೂರು ಬರೆದ ಬಂಧಿಖಾನೆ ನಿವಾಸಿಗಳು ಜಿಲ್ಲಾಧಿಕಾರಿ, ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಎ.ಡಿ.ಜಿ.ಪಿ, ಲೋಕಾಯುಕ್ತ, ಮಾನವಹಕ್ಕುಗಳ ಆಯೋಗ ಹಾಗೂ ಗೃಹಸಚಿವರಿಗೆ ದೂರು ಬರೆದಿದ್ದಾರೆ.  ನಾಲ್ಕೈದು ಪುಟಗಳಲ್ಲಿ ಬಂಧಿಖಾನೆ ಸಮಸ್ಯೆಗಳ ವಿಸ್ಕೃತ ವಿವರಣೆ ನೀಡಿ ದೂರು ಬರೆದಿರುವ ಬಂಧಿಖಾನೆ ನಿವಾಸಿಗಳು ಸುಮಾರು 40 ಕ್ಕೂ ಹೆಚ್ಚು ಬಂಧಿಖಾನೆ ನಿವಾಸಿಗಳು ಆರೋಪಕ್ಕೆ ಬೆಂಬಲ ನೀಡಿದ್ದಾರೆ. ಅಲ್ಲದೇ ಜೈಲು ಬಂದಿಗಳ ಸಂಭಂದಿಕರ ಬಳಿ ಸಹ ಹಣ ಪೀಕುವ ಜೈಲಿನ ಸಿಬ್ಬಂದಿ ವಿರುದ್ಧ ವಿಚಾರಣಾಧಿನ ಖೈದಿಗಳ ಸಂಬಂಧಿಕರ ಸಹ ಅಸಮಾಧಾನ ಹೊರಹಾಕಿದ ತುಮಕೂರು ತಾಲೂಕಿನ ಊರುಕೆರೆ ಬಳಿಯಿರುವ ತುಮಕೂರು ಜಿಲ್ಲಾ ಕಾರಾಗೃಹದಲ್ಲಿ ನಡೆದಿದೆ. 

ಕಾನೂನು, ಸುವ್ಯವಸ್ಥೆ ಪೊಲೀಸರ ವಿರುದ್ಧದ ಲಂಚದ ಆರೋಪಕ್ಕೆ ಕಡಿವಾಣ ಹಾಕಲು Bodyworn Camera ಬಳಕೆ

ಜೈಲು ಅಧೀಕ್ಷಕಿ ವಿರುದ್ಧ ದೂರು: ಜಿಲ್ಲಾ ಕಾರಾಗೃಹದಲ್ಲಿ ಸಮರ್ಪಕವಾಗಿ ಊಟ ನೀಡಿಲ್ಲ ಎಂದು  ಅಧೀಕ್ಷಕರಾದ ಶಾಂತಶ್ರೀ ವಿರುದ್ದ ಕಳೆದ ವಾರ ಜೈಲಿನಲ್ಲಿ ಪ್ರತಿಭಟನೆ ನಡೆಸಿದ್ದ ವಿಚಾರಣಾಧಿನ ಖೈದಿಗಳು ಕಳೆಪೆ ಗುಣಮಟ್ಟದ ಆಹಾರ ಹಾಗೂ ಜೈಲಿನ ಅಕ್ರಮಗಳ  ಆರೋಪಿಸಿ ಪ್ರತಿಭಟನೆ ನಡೆಸಿದ್ದರು. ಇನ್ನು ಬಂಧಿಖಾನೆಯ ಖೈದಿಗಳ ದೂರಿನ ಹಿನ್ನೆಲೆ  ಸ್ಥಳಕ್ಕೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನಿಸಾ ಭೇಟಿ, ಪರಿಶೀಲನೆ ನಡೆಸಿದ್ದಾರೆ. ಬಂಧಿಖಾನೆಗೆ ಹಿರಿಯ ಅಧಿಕಾರಿಗಳು ಯಾರೆ  ಪರಿಶೀಲನೆಗೆ ಬಂದರು ದೂರು ನೀಡದಂತೆ ಶಾಂತಶ್ರೀ ತಾಕೀತು ಮಾಡುತ್ತಾರೆ ಎಂದು ಖೈದಿಗಳ ಆರೋಪ ಮಾಡಿದ್ದಾರೆ. ಈ ಕುರಿತು ಜೈಲರ್ ಅಧೀಕ್ಷಕಿ ಶಾಂತಶ್ರೀ ವಿರುದ್ದ ಬಂಧಿಖಾನೆ ನಿವಾಸಿಗಳ ಅಸಮಾಧಾನದಿಂದ ಸದ್ಯ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ಖೈದಿಗಳ ಬರೆದ ಪತ್ರ ದೂರಿನ ಸಾರಾಂಶ:  ಜೈಲಿನಲ್ಲಿ ಕುರ್ಚಿ ಗಿಟ್ಟಿಸಿಕೊಳ್ಳಲು ಹಿರಿಯ ಅಧಿಕಾರಿಗಳಿಗೆ  ಮಾಸಿಕವಾಗಿ 1 ಲಕ್ಷ, 2ಲಕ್ಷ ರೂ.ಗಳನ್ನು ಅಧಿಕಾರಿಗಳ ದರ್ಜೆಗೆ ತಕ್ಕಂತೆ ಲಂಚ ನೀಡುತ್ತಿದ್ದೇನೆ ಎಂದು ಅಧೀಕ್ಷಕಿ ಶಾಂತಶ್ರೀ ಹೇಳಿಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿಗಳಿಗೆ ಖೈದಿಗಳು ಬರೆದಿರುವ ಪತರದಲ್ಲಿ ಉಲ್ಲೇಖಿಸಲಾಗಿದೆ. ನೀವುಗಳು ಯಾವುದೇ ದೂರು ನೀಡಿದರೂ ಏನನ್ನೂ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಎಲ್ಲಾ ಅಧಿಕಾರಿಗಳು ಇಲ್ಲಿಗೆ ಬರುವುದು ಮಾಮೂಲಿ ಲಂಚ ಪಡೆಯಲೇ ಹೊರತು ನಿಮ್ಮ ಯೋಗಕ್ಷೇಮ ವಿಚಾರಿಸಲು ಅಲ್ಲ ಎಂದು ವಾರ್ನಿಂಗ್‌ ಮಾಡಿದ್ದಾರೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. 

ಜೈಲಿನಲ್ಲಿ ಅಕ್ರಮ ಚಟುವಟಿಕೆ ಸಹಿಸಲ್ಲ: ಗೃಹಸಚಿವ ಆರಗ ಜ್ಞಾನೇಂದ್ರ

ಮನೆ ಮಠ ಮಾರಿಸುವುದಾಗಿ ಬೆದರಿಕೆ: ಜೈಲಿನಲ್ಲಿ ಇರುವ ಯಾವನಾದರೂ ದೂರು ನೀಡುವ ಸಾಹಸ ಮಾಡಿದರೇ ಬಾಲಬಿಚ್ಚಿದರೆ ಅಂತಹವರ ಮನೆ ಮಠ ಮಾರಿಸುತ್ತೇನೆ. ಹೆಂಡತಿ ಮಕ್ಕಳನ್ನು ಅಡಮಾನ ಇರಿಸುತ್ತೇನೆ ಎಂದು ಅವಾಜ್ ಹಾಕಿದ್ದಾರಂತೆ ಜೈಲು ಅಧೀಕ್ಷಕಿ ಶಾಂತಶ್ರೀ. ನೀವುಗಳು ಸಾಯುವವರೆಗೂ ಜೈಲಿನಲ್ಲೇ ಕೊಳೆಯವಂತೆ ಮಾಡುತ್ತೇನೆ ಎಂದು ಖೈದಿಗಳಿಗೆ ಬೆದರಿಕೆ ಹಾಕಿದ್ದಾರೆ ಎಂದು ತುಮಕೂರು ಜಿಲ್ಲಾ ಕಾರಾಗೃಹದ ಅಧೀಕ್ಷಕಿ ಶಾಂತ ಶ್ರೀ ವಿರುದ್ದ ದೂರು ನೀಡಿದ್ದಾರೆ.

 ಒಟ್ಟಾರೆ ಈ ಸಂಭಂಧ ಈಗಾಗಲೇ ಕಾನೂನು ಸೇವಾ ಪ್ರಾಧಿಕಾರದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಖೈದಿಗಳ ಬಳಿಯು ಲಂಚ ಕಿತ್ತು ತಿನ್ನುವ ಇಂತಹ ಕೆಟ್ಟ ಅಧಿಕಾರಿಗಳಿಗೆ ತಕ್ಕ ಸಾಸ್ಥಿ ಆಗಬೇಕು ಎನ್ನುವುದು ಬುದ್ದಿವಂತರ ಮಾತು.

click me!