ಸಿಎಂ ಸಹಕಾರ : ತುಮಕೂರು ಬಿಜೆಪಿ ಮುಖಂಡಗೆ ಸಿಕ್ತು ಮಹತ್ವದ ಹುದ್ದೆ

By Kannadaprabha NewsFirst Published Aug 24, 2020, 10:55 AM IST
Highlights

ತುಮಕೂರು ಬಿಜೆಪಿ ಮುಖಂಡಗೆ ಮಹತ್ವದ ಹುದ್ದೆ ಒಲಿದಿದ್ದು, ತಮ್ಮ ಸಹಕಾರಕ್ಕೆ ನಿಂತದ ಪಕ್ಷದ ಮುಖಂಡರು ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪಗೆ ಧನ್ಯವಾದ ಎಂದಿದ್ದಾರೆ.

ಶಿರಾ (ಆ.24):  ಶಿರಾ ನಗರವನ್ನು ಸುಂದರ, ಸ್ವಚ್ಛ ನಗರವನ್ನಾಗಿಸುವುದೇ ನನ್ನ ಗುರಿಯಾಗಿದೆ. ಅದಕ್ಕಾಗಿ ಹೆಚ್ಚಿನ ರೀತಿಯಲ್ಲಿ ಶ್ರಮ ವಹಿಸಲಾಗುವುದು ಎಂದು ನೂತನ ಶಿರಾ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌.ಈರಣ್ಣ ತಿಳಿಸಿದರು.

ನಗರದ ಶಿರಾ ಅಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಳೆದ ಎರಡು ವರ್ಷಗಳಿಂದ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ಖಾಲಿ ಇತ್ತು. ಇದೀಗ ನಾನು ಅಧಿಕಾರ ವಹಿಸಿಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಎಲ್ಲಾ ಅಭಿವೃದ್ಧಿ ಕೆಲಸಗಳು ಹಾಗೂ ನಗರವನ್ನು ಸುಂದರಗೊಳಿಸಲು ಬೇಕಾದ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುವುದು ಎಂದು ಭರವಸೆ ನೀಡಿದರು.

ಸಾಮಾನ್ಯ ಬಿಜೆಪಿ ಕಾರ್ಯಕರ್ತರಾದ ನನ್ನನ್ನು ಶಿರಾ ಅಭಿವೃದ್ಧಿ ಪ್ರಾಧಿಕಾರದ ಹುದ್ದೆಗೇರಲು ಸಹಕರಿಸಿದ ಮುಖ್ಯಮಂತ್ರಿ ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸುರೇಶ್‌ಗೌಡ ಹಾಗೂ ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್‌.ಆರ್‌.ಗೌಡ ಹಾಗೂ ಎಲ್ಲಾ ಮುಖಂಡರಿಗೂ ಅಭಿನಂದನೆಗಳನ್ನು ತಿಳಿಸಿದರು.

ಶೀಘ್ರ ಮುಂದಿನ ರಾಜಕೀಯ ನಡೆ ಪ್ರಕಟಿಸುವೆ ಎಂದ್ರು ಕೈ ಮುಖಂಡ...

ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್‌.ಆರ್‌.ಗೌಡ ಮಾತನಾಡಿ, ರಾಜ್ಯದಲ್ಲಿ ಒಂದು ಕಡೆ ಕೋವಿಡ್‌-19 ಮತ್ತೊಂದು ಕಡೆ ಪ್ರವಾಹ ಪರಿಸ್ಥಿತಿ. ಇಂತಹ ಸಂಕಷ್ಟದ ಸ್ಥಿತಿಯನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ದಿಟ್ಟತನದಿಂದ ಎದುರಿಸಿ ಆಡಳಿತ ನಡೆಸುತ್ತಿದ್ದಾರೆ. ಶಿರಾ ನಗರವನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಶಿರಾ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಸದಸ್ಯರನ್ನು ಆಯ್ಕೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಶಿರಾ ನಗರವನ್ನು ಮಾದರಿ ನಗರವಾಗಿ ಮಾಡಲು ಅಧ್ಯಕ್ಷ ಈರಣ್ಣ ಹಾಗೂ ಸದಸ್ಯರು ಶ್ರಮಿಸಬೇಕು ಎಂದರು.

'BSY ಸ್ಥಾನಪಲ್ಲಟಕ್ಕೆ ಬಿಜೆಪಿ ಸಚಿವರಲ್ಲೇ ಗೊಂದಲದ ಹೇಳಿಕೆ'...

ಇದೇ ವೇಳೆ ಶಿರಾ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿ ಎಸ್‌.ಶ್ರೀಧರ್‌, ಟಿ.ವಿ.ಸುರೇಶ್‌, ಎಸ್‌.ಪಿ.ಮದನ್‌ ಅಧಿಕಾರ ವಹಿಸಿಕೊಂಡರು.

ತಾ.ಪಂ. ಅಧ್ಯಕ್ಷ ಚಂದ್ರಯ್ಯ, ಉಪಾಧ್ಯಕ್ಷ ರಂಗನಾಥ್‌ ಗೌಡ, ಸಮಾಜ ಸೇವಕ ಕಲ್ಕೆರೆ ರವಿಕುಮಾರ್‌, ನಿರಂಜನ್‌, ಮಾಜಿ ನಗರಸಭಾ ಸದಸ್ಯ ಪ್ರಕಾಶ್‌ ಮುದ್ದುರಾಜ್‌, ಗಿರಿಧರ್‌, ಧನುಷ್‌, ದಾಸಪ್ಪ, ಅರುಣ್‌ಕುಮಾರ್‌, ಮಹೇಶ್‌, ಇನಾಂ ಗೊಲ್ಲಹಳ್ಳಿ ಶಿವಣ್ಣ, ವಸಂತ್‌ಕುಮಾರ್‌ ಮತ್ತಿತರರು ಹಾಜರಿದ್ದರು.

click me!