ಬಂಟ್ವಾಳ: ಕಡುಬಿಗೆ ಕಾಲಿನಲ್ಲೇ ಎಲೆ ಹೆಣೆದ ಯುವಕ!

Kannadaprabha News   | Asianet News
Published : Aug 24, 2020, 10:43 AM IST
ಬಂಟ್ವಾಳ: ಕಡುಬಿಗೆ ಕಾಲಿನಲ್ಲೇ ಎಲೆ ಹೆಣೆದ ಯುವಕ!

ಸಾರಾಂಶ

ಹಲಸಿನ ಎಲೆಯನ್ನು ಕಾಲಿನ ಸಹಾಯದಿಂದ ಕಟ್ಟಿದ ಯುವಕ| ಕಾಲಿನ ಮೂಲಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ರಾಜ್ಯದಲ್ಲಿ ಸುದ್ದಿಯಾಗಿದ್ದ ಕೌಶಿಕ್‌| ವಿದ್ಯಾರ್ಥಿಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌|  

ಬಂಟ್ವಾಳ(ಆ.24): ಕಾಲಿನ ಮೂಲಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ರಾಜ್ಯದಲ್ಲಿ ಸುದ್ದಿಯಾಗಿದ್ದ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದ ಕೌಶಿಕ್‌ ಚೌತಿಯ ದಿನದಂದು, ತುಳುನಾಡಿನ ವಿಶಿಷ್ಟ ಮತ್ತು ಪ್ರಸಿದ್ಧ ತಿಂಡಿಯಾದ ಕೊಟ್ಟಿಗೆ (ಕಡುಬು) ತಯಾರಿಸಲು ಮನೆಯಲ್ಲಿ ಹಲಸಿನ ಎಲೆಯನ್ನು ಕಾಲಿನ ಸಹಾಯದಿಂದ ಕಟ್ಟುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಬಂಟ್ವಾಳ ಕಂಚಿಕಾರ ಪೇಟೆ ನಿವಾಸಿ ಕೌಶಿಕ್‌ ಇತ್ತೀಚೆಗೆ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಕಾಲಿನ ಬೆರಳಿನ ಸಹಾಯದಿಂದ ಬರೆದು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣನಾಗಿದ್ದ. 

ಕಾಲಿನಲ್ಲೇ ಸಚಿವ ಸುರೇಶ್‌ ಕುಮಾರ್‌ ಹೆಸರು ಬರೆದ ಕೌಶಿಕ್‌ಗೆ ಪ್ರಶಂಸೆ

ಈ ಬಗ್ಗೆ ರಾಜ್ಯ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಅವರು ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಸಾಂಸ್ಕೃತಿಕ ಹಾಗೂ ಆಟೋಟ ಸ್ಪರ್ಧೆಯಲ್ಲಿ ಮುಂದಿರುವ ಈತ, ಪ್ರತಿ ವರ್ಷ ಅಷ್ಟಮಿ ಮತ್ತು ಚೌತಿಯ ದಿನದಂದು ಮನೆಯಲ್ಲಿ ಕಡುಬು ತಯಾರಿಸಲು ಹಲಸಿನ ಎಲೆಯನ್ನು ಕಾಲಿನಲ್ಲೇ ಹೆಣೆಯುತ್ತಾನೆ.
 

PREV
click me!

Recommended Stories

ಶಾಮನೂರು ಶಿವಶಂಕರಪ್ಪ ನಿಧನ: ಇಂದು ಕಲಾಪ ಮುಂದೂಡುವ ಸಾಧ್ಯತೆ
ತುರುವೇಕೆರೆ: ದೇವರ ಮೇಲೆ ಹಾಕಿದ್ದ 500 ಗ್ರಾಂ ಸರ, 10 ಸಾವಿರ ರೂ. ನಗದು ಕದ್ದ ಕಳ್ಳರು!