ಕೊರೋನಾ : ಸಿದ್ಧಗಂಗಾದ ಸಿದ್ಧಲಿಂಗ ಸ್ವಾಮೀಜಿ ಕ್ವಾರಂಟೈನ್‌

Kannadaprabha News   | Asianet News
Published : Oct 18, 2020, 12:00 PM ISTUpdated : Oct 18, 2020, 12:02 PM IST
ಕೊರೋನಾ :  ಸಿದ್ಧಗಂಗಾದ ಸಿದ್ಧಲಿಂಗ ಸ್ವಾಮೀಜಿ ಕ್ವಾರಂಟೈನ್‌

ಸಾರಾಂಶ

ತುಮಕೂರು ಪ್ರಸಿದ್ಧ ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ.

ತುಮಕೂರು (ಅ.18):  ಕೊರೋನಾದಿಂದ ಮೃತಪಟ್ಟಮಠದ ಭಕ್ತ ಭೂಮಿ ಬಳಗದ ಸೋಮಣ್ಣ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಹಿನ್ನೆಲೆಯಲ್ಲಿ ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಕ್ವಾರಂಟೈನ್‌ ಆಗಿದ್ದಾರೆ. 

ಅಕ್ಟೋಬರ್‌ 15 ರಂದು ಕೊರೋನಾದಿಂದ ಮೃತಪಟ್ಟಿದ್ದ ಸೋಮಣ್ಣ ಅವರ ಅಂತ್ಯಕ್ರಿಯೆ ಮಠದ ಆವರಣದಲ್ಲಿ ನಡೆಯಿತು.

ಮಠದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದ ಸೋಮಣ್ಣ ಅವರ ಅಂತ್ಯಕ್ರಿಯೆಯಲ್ಲಿ ತಾವು ಭಾಗವಹಿಸಿದ್ದು ಸರ್ಕಾರದ ಮಾರ್ಗಸೂಚಿ ಪ್ರಕಾರ ಕ್ವಾರಂಟೈನ್‌ನಲ್ಲಿ ಇರುವುದಕ್ಕೆ ತೀರ್ಮಾನಿಸಿರುವುದಾಗಿ ಹೇಳಿದ್ದಾರೆ. 

ಧಾರವಾಡ: 107 ವರ್ಷದ ಜಾತ್ರೆಗೆ ಮಹಾಮಾರಿ ಕೊರೋನಾ ಬ್ರೇಕ್

ಸಾರ್ವಜನಿಕ ಸಮಾರಂಭ ಹಾಗೂ ಪೂಜಾದಿ ಕಾರ್ಯಗಳಲ್ಲಿ ಭಾಗವಹಿಸದೆ ಇರಲು ತೀರ್ಮಾನಿಸಿದ್ದು ಭಕ್ತಾದಿಗಳು ಈ ಬಗ್ಗೆ ಯಾವುದೇ ಗೊಂದಲಕ್ಕೆ ಒಳಗಾಗಬಾರದೆಂದು ಅವರು ಮನವಿ ಮಾಡಿದ್ದಾರೆ.

PREV
click me!

Recommended Stories

ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಮೋದಿಯಿಂದ ಬದ್ಧತೆಯ ಕಾರ್ಯ: ಸಂಸದ ಬಿ.ವೈ.ರಾಘವೇಂದ್ರ
ಡಿವೈಡರ್‌ನಿಂದ ಹಾರಿ KSRTC ಬಸ್‌ಗೆ ಡಿಕ್ಕಿಯಾದ ಕಾರ್, ಮೂರು ಸಾವು ಚೆಲ್ಲಾಪಿಲ್ಲಿಯಾದ ಮೃತದೇಹಗಳು