ಆಸ್ಪತ್ರೆ ಭಾರಿ ಬಿಲ್‌ಗೆ ಹೆದರಿ ಕೊರೋನಾ ಸೋಂಕಿತ ಪರಾರಿ : ಪುತ್ರಿಗೆ ದಿಗ್ಬಂಧನ

Kannadaprabha News   | Asianet News
Published : Oct 18, 2020, 11:39 AM IST
ಆಸ್ಪತ್ರೆ ಭಾರಿ ಬಿಲ್‌ಗೆ ಹೆದರಿ ಕೊರೋನಾ ಸೋಂಕಿತ ಪರಾರಿ : ಪುತ್ರಿಗೆ ದಿಗ್ಬಂಧನ

ಸಾರಾಂಶ

ಆಸ್ಪತ್ರೆಯೊಂದು ಕೊರೋನಾ ಸೋಂಕಿತ ವ್ಯಕ್ತಿಗೆ ವಿಧಿಸಿದ ಭಾರಿ ಬಿಲ್‌ಗೆ ಹೆದರಿ ಪರಾರಿಯಾಗಿದ್ದು ಇದರಿಂದ ಆತನ ಪುತ್ರಿಗೆ ದಿಗ್ಬಂಧನ ವಿಧಿಸಲಾಗಿದೆ. 

ಮೈಸೂರು (ಅ.18):   ಕೊರೊನಾ ಸೋಂಕಿತ ವ್ಯಕ್ತಿಯ ಪುತ್ರಿ ದಿಗ್ಬಂಧಿಸಿದ ಆರೋಪದ ಅಡಿಯಲ್ಲಿ ರೈತ ಸಂಘದ ಸದಸ್ಯರಿಂದ ಖಾಸಗಿ‌ ಆಸ್ಪತ್ರೆ ವೈದ್ಯರಿಗೆ ತರಾಟೆ ತೆಗೆದುಕೊಳ್ಳಲಾಗಿದೆ. 

ಮೈಸೂರಿನ ಹೆಬ್ಬಾಳುವಿನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ರೈತ ಸಂಘದ ಸದಸ್ಯರ ಮದ್ಯಸ್ಥಿಕೆಯಲ್ಲಿ ಕೊರೋನಾ ಸೋಂಕಿತ ವ್ಯಕ್ತಿಯ ಪುತ್ರಿಯ ಪಾರು ಮಾಡಲಾಗಿದೆ. 

ಮೈಸೂರು ಜಿಲ್ಲೆ ಕೆ. ಆರ್‌. ನಗರ ತಾಲ್ಲೂಕಿನ ಹಂಪಾಪುರ ಗ್ರಾಮದ ವ್ಯಕ್ತಿಗೆ ಸೋಂಕು ತಗುಲಿದ್ದು ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ರೋಗಿಯಿಂದ ದುಪ್ಪಟ್ಟು ಹಣ ವಸೂಲಿ ಆರೋಪ ಮಾಡಲಾಗಿದೆ. ಚಿಕಿತ್ಸೆ ಸಂದರ್ಭದಲ್ಲಿ 2 ಲಕ್ಷ ಶುಲ್ಕ ವಸೂಲಿ ಮಾಡಿದ್ದು, ಮತ್ತೊಮ್ಮೆ 1.20 ಲಕ್ಷ ರೂಪಾಯಿ ಕಟ್ಟಿಸಿಕೊಂಡಿದ್ದರು.

ರೋಗಿಯ ಡಿಸ್ಚಾರ್ಜ್ ವೇಳೆ ಪುನಃ 2 ಲಕ್ಷ ರೂಪಾಯಿ ನೀಡಬೇಕೆಂದು ಕೇಳಿದ್ದು, ಇದರಿಂದ ಗಾಬರಿಗೊಂಡ ವ್ಯಕ್ತಿ ಗುಣಮುಖನಾದ ಬಳಿ ಆಸ್ಪತ್ರೆ ಬಿಲ್‌ಗೆ ಹೆದರಿ ನಾಪತ್ತೆಯಾಗಿದ್ದ. 

ಇದರಿಂದ ರೋಗಿಯ ಮಗಳನ್ನು ಆಸ್ಪತ್ರೆಯಲ್ಲೇ ದಿಗ್ಬಂಧನದಲ್ಲಿ ಇರಿಸಿಕೊಂಡಿದ್ದು, ರೈತ ಸಂಘಟನೆಯವರು ಸ್ಥಳಕ್ಕೆ ಬಂದು ಆಕೆಯನ್ನು ಬಿಡಿಸುವಲ್ಲಿ ಯಶಸ್ವಿಯಾದರು. ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಪೊಲೀಸರ ಮಧ್ಯಸ್ಥಿಕೆ ಬಳಿಕ ರೋಗಿಯಿಂದ ವಸೂಲಿ ಮಾಡಿದ್ದ ಹಣದಲ್ಲಿ 25 ಸಾವಿರ ವಾಪಸ್ ನೀಡಲಾಗಿದೆ. 

ಧಾರವಾಡ: 107 ವರ್ಷದ ಜಾತ್ರೆಗೆ ಮಹಾಮಾರಿ ಕೊರೋನಾ ಬ್ರೇಕ್‌ ...

 ಹೆಚ್ಚುವರಿಯಾಗಿ ಕೇಳಿದ್ದ 2 ಲಕ್ಷ ಹಣವನ್ನು ಕೇಳದೇ ರೋಗಿಯನ್ನು ಬಿಡುಗಡೆ ಮಾಡುವಂತೆ ಪೊಲೀಸರಿಂದ ಆಸ್ಪತ್ರೆಯ ಸಿಬ್ಬಂದಿಗೆ ತಾಕೀತು ಮಾಡಿದರು.  

ಈ ಘಟನೆಯಿಂದ ಕೊರೊನಾ ಹೆಸರಿನಲ್ಲಿ ಅಮಾಯಕ ಜನರನ್ನು ಸುಲಿಗೆ ಮಾಡುತ್ತಿರುವ ಖಾಸಗಿ ಆಸ್ಪತ್ರೆಗಳ ಬಂಡವಾಳ ಬಯಲಾಗಿದೆ.

PREV
click me!

Recommended Stories

ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಮೋದಿಯಿಂದ ಬದ್ಧತೆಯ ಕಾರ್ಯ: ಸಂಸದ ಬಿ.ವೈ.ರಾಘವೇಂದ್ರ
ಡಿವೈಡರ್‌ನಿಂದ ಹಾರಿ KSRTC ಬಸ್‌ಗೆ ಡಿಕ್ಕಿಯಾದ ಕಾರ್, ಮೂರು ಸಾವು ಚೆಲ್ಲಾಪಿಲ್ಲಿಯಾದ ಮೃತದೇಹಗಳು